ಬೆಂಗಳೂರಿನಲ್ಲಿ ನವಂಬರ್ 21 ರಂದು ವಿಶ್ವ ಮೀನುಗಾರರ ದಿನಾಚರಣೆ- ಮೀನುಗಾರಿಕೆ ಸಚಿವ ಮಂಕಾಳ್ ಎಸ್ ವೈದ್ಯ

ಭಟ್ಕಳ- ಇದೇ ತಿಂಗಳ 21 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿಶ್ವ ಮೀನುಗಾರರ ದಿನಾಚರಣೆ ಮತ್ತು ಮತ್ಸ್ಯವಾಹಿನಿಯ ಪರಿಸರ ಸ್ನೇಹಿ ವಾಹನದ ವಿತರಣಾ ಸಮಾರಂಭ ನಡೆಯಲಿದೆಂದು ರಾಜ್ಯ ಮೀನುಗಾರಿಕಾ ಮತ್ತು ಬಂದರು ಒಳನಾಡು ಜಲಸಾರಿಗೆ ಸಚಿವರು, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಮಂಕಾಳ್ ವೈದ್ಯರವರು ಹೇಳಿದರು

ಇಂದು ಅಪರಾಹ್ನ ಭಟ್ಕಳದ ತಮ್ಮ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸಚಿವರು ಮಾತನಾಡಿದರು. ಕೇಂದ್ರದ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್, ಎಂ. ರಾಜೀವ ಚಂದ್ರಶೇಖರ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ, ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರವರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ರಾಜ್ಯದಲ್ಲಿ ಮೀನಿನ ವ್ಯಾಪಾರಕ್ಕಾಗಿ ಮೀನುಗಾರರಿಗೆ ವಿಶೇಷವಾಗಿ ತಯಾರಿಸಿದ ಸಂಪೂರ್ಣ ಹವಾನಿಯಂತ್ರಿತ ಮತ್ಸ್ಯವಾಹಿನಿಯ ಪರಿಸರ ಸ್ನೇಹಿ ವಾಹನವನ್ನ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ವಿತರಿಸಲಾಗುವುದೆಂದು ಸಚಿವ ಮಂಕಾಳ್ ವೈದ್ಯರವರು ತಿಳಿಸಿದರು. ಈ ಸಂದರ್ಭ ವೇದಿಕೆಯಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ಸಿನ ಮಹಿಳಾ ಅಧ್ಯಕ್ಷೆ ನಯನಾ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಮಾಜಿ ಅಧ್ಯಕ್ಷರಾದ ವಿಠ್ಠಲ ನಾಯ್ಕರವರು ಉಪಸ್ಥಿತರಿದ್ದರು. ಎಪಿಎಂಸಿ ಮಾಜಿ ಅಧ್ಯಕ್ಷರಾದ ಗೋಪಾಲ ನಾಯ್ಕ, ಕೈಕೀಣಿಯ ಗ್ರಾಮ ಪಂಚಾಯತ ಅಧ್ಯಕ್ಷರಾದ ರಾಜು ನಾಯ್ಕ, ಜಾಲಿ ವ್ಯವಸಾಯ ಬ್ಯಾಂಕಿನ ಅಧ್ಯಕ್ಷ ಮಂಜಪ್ಪ ನಾಯ್ಕ, ಬ್ಲಾಕ್ ಕಾಂಗ್ರೆಸ್ಸಿನ ಹಿಂದುಳಿದ ಘಟಕದ ಅಧ್ಯಕ್ಷ ವಿಷ್ಣುದೇವಾಡಿಗ, ಕಿಸಾನ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ, ಸೇವಾದಳದ ಅಧ್ಯಕ್ಷರಾದ ರಾಜೇಶ ನಾಯ್ಕ, ಕಾಂಗ್ರೆಸ್ ಮುಖಂಡರಾದ ಮುಂಡಳ್ಳಿ ನಾಗಪ್ಪ ನಾಯ್ಕ, ಸುರೇಶ ನಾಯ್ಕ,ಗಣಪತಿ ನಾಯ್ಕ, ಸುಬ್ರಹ್ಮಣ್ಯ ಶೆಟ್ಟಿ, ಶಂಕರ ಜೋಗಿಯವರು ಹಾಜರಿದ್ದರು.

WhatsApp
Facebook
Telegram
error: Content is protected !!
Scroll to Top