ಸಚಿವ ಮಂಕಾಳ ವೈದ್ಯರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ

ಇಲಾಖೆಗಳು ಅಧಿಕಾರಿಗಳು ಜನ ಸೇವೆಯ ಉದ್ದೇಶವನ್ನು ಇಟ್ಟುಕೊಳ್ಳ ಬೇಕು: ಸಚಿವ ಮಂಕಾಳು ವೈದ್ಯ

ಕಾರವಾರ : ಸಚಿವ ಮಂಕಾಳ ವೈದ್ಯರ  ಅಧ್ಯಕ್ಷತೆಯಲ್ಲಿ  ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ಜಿಲ್ಲಾ ಪಂಚಾಯಯ್ ಸಭಾಭವನದಲ್ಲಿ‌ ನಡೆಯಿತು

ಸಭೆಯಲ್ಲಿ ಶಿಕ್ಷಣ ಇಲಾಖೆ ತನ್ನ ಇಲಾಖೆಯ ವರದಿಯನ್ನು ಮಂಡಿಸಿದರು ಈ ಸಂದರ್ಬದಲ್ಲಿ ಸಚಿವ ಮಂಕಾಳು ವೈದ್ಯ ಕನ್ನಡ ಶಾಲೆಗಳನ್ನು ಉಳಿಸಿಕೊಂಡು ಹೊಗುವ ಕಾರ್ಯದತ್ತ ಶಿಕ್ಷಣ ಇಲಾಖೆ ಗಮನ ಹರಿಸಬೇಕಾಗಿದೆ ಎಲ್ಲಿ ಶಿಕ್ಷಕರ ಕೊರತೆ ಇರುತ್ತದೆ ಅಲ್ಲಿ ಶಿಕ್ಷಕರ ನೇಮಕವಾಗಬೇಕು ಅಧಿಕಾರಿಗಳಿಗೆ ಎಲ್ಲಾ ಮಾಹಿತಿಗಳು ಇರಬೇಕು ಎಂದು ಹೇಳಿದರು .

ಜಿಲ್ಲೆಯ ವಿವಿದ ಆರೋಗ್ಯ ಇಲಾಖಾ ಅಧಿಕಾರಿಗಳು ತಮ್ಮ ತಮ್ಮ‌ ಇಲಾಖಾ ವರದಿಗಳನ್ನು ಮಂಡಿಸಿದರು ಮಂಡಿಸಿದರು

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತನ್ನ ಇಲಾಖೆಯ ವರದಿ ಮಂಡಿಸುವ ಸಂದರ್ಬದಲ್ಲಿ ಗ್ರಹ ಲಕ್ಷ್ಮಿಯೊಜನೆಯಲ್ಲಿ ಇಲಾಖೆ ಸರಿಯಾದ ಕರ್ತವ್ಯವನ್ನು ನಿಬಾಯಿಸುತ್ತಿಲ್ಲಾ ಸರಿಯಾಗಿ ಯೊಜನೆ ಪಲಾನುಭವಿಗಳನ್ನು ಮುಟ್ಟುತ್ತಿಲ್ಲಾ ಏನೆ ಸಮಸ್ಯೆ ಇದ್ದರೆ ನಮ್ಮ ಗಮನಕ್ಕೆ ತರಬೇಕು ನಾವು ಸಮಸ್ಯೆಯನ್ನು ಬಗೆ ಹರಿಸುತ್ತೆವೆ ಅದನ್ನು ಬಿಟ್ಡು ಸಮಸ್ಯೆಯನ್ನು ಬಗ್ಗೆ ನಮ್ಮ ಗಮನಕ್ಕೆ ತರದೆ ಸುಮ್ಮನೆ ಕುಳಿತುಕೊಂಡರೆ ಯೊಜನೆಯನ್ನು ತಂದು ಪ್ರಯೋಜನೆ ಏನು ಇದು ಹೀಗೆ ಮುಂದುವರಿದಲ್ಲಿ ನಾವು ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು

ಕಾರವಾರದ ಶಾಸಕ ಸತಿಶ್ ಶೈಲ್ ಮಾತನಾಡಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾದ ಪ್ರಮಾಣದಲ್ಲಿ ನಿರ್ವಹಿಸುತ್ತಿಲ್ಲಾ ಇದು ಹೀಗೆ ಮುಂದುವರಿದಲ್ಲಿ ಸೂಕ್ತ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಹೇಳಿದರು

ಶಾಸಕ ಬೀಮಣ್ಣ ನಾಯ್ಕ ಮಾತನಾಡಿ ಸರಕಾರದ ಯೋಜನೆ ಜನರಿಗೆ ತಲುಪಿಸುವುದು ನಮ್ಮ ಕರ್ತವ್ಯವಾಗಿರುತ್ತದೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ ಎಂದು ಹೇಳಿದರು

ಜಿಲ್ಲಾಧಿಕಾಗಳಾದ ಗಂಗೂಬಾಯಿ ಮಾನಕರ್ ಜಿಲ್ಲೆಯ ಸರಕಾರಿ ಇಲಾಖೆಗಳ ಬಗ್ಗೆ ಜನಪ್ರತಿನಿದಿಗಳಿಗೆ ಮಾಹಿತಿಗಳನ್ನು ನೀಡಿದರು

ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳು ವಿವಿದ ಇಲಾಖಾ ಅಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು‌

WhatsApp
Facebook
Telegram
error: Content is protected !!
Scroll to Top