ಜಾಲಿ ಪಟ್ಟಣ ಪಂಚಾಯತ್ ಮುಂಬಾಗದಲ್ಲಿ ದಲಿತ ಸಮುದಾಯದ ಪ್ರತಿಭನೆ

ತಮ್ಮ‌ ಸಮೂದಾಯಕ್ಕೆ ನ್ಯಾಯ ಒದಗಿಸುವಂತೆ ಮನವಿ

ಭಟ್ಕಳ: ಜಾಲಿ ಪಟ್ಟಣ ಪಂಚಾಯತ್‌ನಲ್ಲಿ ನಗರೋತ್ಥಾನ 1,2,3, ಹಂತದ ಅನುದಾನದಡಿಯಲ್ಲಿ ಪರಿಶಿಷ್ಟ ಜಾತಿಯವರಿಲ್ಲದ ಸ್ಥಳದಲ್ಲಿ ಕಾಮಗಾರಿಯನ್ನು ನಡೆಸುತ್ತಿರುವ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ದೌರ್ಜನ್ಯ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲು ಮಾಡುವ ಕುರಿತು ದಲಿತ ಸಮುದಾಯದವರು ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು

ಭಟ್ಕಳ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ ವರ್ಗದವರು ಹಲವಾರು ವರ್ಷಗಳಿಂದ ವಾಸಿಸುತ್ತಿದ್ದು, ಇವರ ಕೇರಿಗಳಲ್ಲಿ ಅನುದಾನಗಳು ಬಂದರೂ ಕೂಡ ಸುಸಜ್ಜಿತ ಸೌಲತ್ತುಗಳನ್ನು ನೀಡದೆ ದೌರ್ಜನ್ಯವೆಸಗಿರುತ್ತಾರೆ.

ನಮ್ಮ ಕಾಲೋನಿಗೆ ಹೆದ್ದಾರಿಯಿಂದ ಹೋಗುವ ದಾರಿಯಲ್ಲಿ ಕೆಲವರು ರಸ್ತೆಗಳನ್ನು ಅತಿಕ್ರಮಣ ಮಾಡಿ ಅಂಗಡಿಗಳನ್ನು ಕಟ್ಟಿ ಮತ್ತು ಯು.ಜಿ.ಡಿ. ಇವರು ರಸ್ತೆ ಅಗೆದು ಹಾಳು ಮಾಡಿರುತ್ತಾರೆ. ಈ ಬಗ್ಗೆ ಮುಖ್ಯಾಧಿಕಾರಿಗಳ ಬಳೀ ಮೌಖಿಕವಾಗಿ ಹೇಳಿದರೂ ಕೂಡ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಹೀಗಾಗಿ ದಯಮಾಡಿ ಹೆದ್ದಾರಿಯಿಂದ ನಮ್ಮ ಕಾಲೋನಿಗೆ ಹೋಗುವ ದಾರಿಯಲ್ಲಿ ರಸ್ತೆ ಅಗಲೀಕರಣ ಹಾಗೂ ವಿದ್ಯುತ್‌ ಕಂಬಗಳನ್ನು ಅಳವಡಿಸಿಕೊಡಬೇಕಾಗಿ ಬೇಡಿಕೊಳ್ಳುತ್ತೇನೆ.

ಕಾಲೋನಿಯಲ್ಲಿ ಬಹುಮಹಡಿ ಕಟ್ಟಡಗಳು ಇದ್ದು ಇವು ಚರಂಡಿಗಳಲ್ಲಿ ಶೌಚಾಲಯ ನೀರನ್ನು ಬಿಟ್ಟು ದುರ್ವಾಸನೆ ಹಬ್ಬಿಸಿರುತ್ತಾರೆ. ಸದರಿ ಚರಂಡಿಗಳಿಗೆ ಲಿಂಟಲ್ ಅಳವಡಿಸಿ ದುರ್ವಾಸನೆ ಮುಕ್ತ ಮಾಡಬೇಕೆಂದು ತಮ್ಮಲ್ಲಿ ಬೇಡಿಕೊಳ್ಳುತ್ತೇನೆ.

ಕಾಲೋನಿಯಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದು, ನಮ್ಮಲ್ಲಿ ಮೃತ್ಯುವಾದಲ್ಲಿ ನಾವು ಕಾರ್ಗದ್ದೆಯಲ್ಲಿ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಜಾಗದಲ್ಲಿ ಹಲವು ವರ್ಷಗಳಿಂದ ದಹನ ಮಾಡುತ್ತಿದ್ದು ಈವರೆಗೂ ಇಲ್ಲಿ ಯಾವುದೇ ಮೂಲಭೂತ ಸೌಕರ್ಯವಿಲ್ಲದೇ

ಮಳೆಗಾಲದಲ್ಲಿ ತುಂಬ ಕಷ್ಟಕರವಾಗುತ್ತಿದೆ. ಆದುದರಿಂದ ತಮ್ಮಲ್ಲಿ ಪ್ರಾರ್ಥಿಸುವುದೇನೆಂದರೆ ದಯಮಾಡಿ ಈ ಜಾಗವನ್ನು ದಲಿತರಿಗೆ ರುದ್ರಭೂಮಿಗಾಗಿ ನೀಡಿ, ಸರ್ಕಾರದ ಯೋಜನೆಯಡಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ತಮ್ಮಲ್ಲಿ ಬೇಡಿಕೆ.

ನಮಗೆ ಹತ್ತು ವರ್ಷಗಳ ಹಿಂದೆ ಕ್ರೀಡಾ ಇಲಾಖೆಯಿಂದ ಅನುದಾನ ನೀಡಿ ಸಮುದಾಯ ಭವನ ಕಟ್ಟಿಸಿರುತ್ತಾರೆ. ಆದರೆ ಇದು ಅಪೂರ್ಣವಾಗಿದ್ದು, ಯಾವ ಉಪಯೋಗಕ್ಕೆ ಬಾರದೆ ಇರುತ್ತದೆ. ಆದ ಕಾರಣ ದಯಮಾಡಿ ಈ ಕಟ್ಟಡವನ್ನು ದಲಿತರಿಗೆ ಅನುಕೂಲವಾಗುವಂತೆ ಪೂರ್ಣಗೊಳಿಸಿ ನೀಡಬೇಕೆಂದು ತಮ್ಮಲ್ಲಿ ವಿನಂತಿ.

ಈ ಎಲ್ಲಾ ಬೇಡಿಕೆಗಳು ಇದ್ದರೂ ಕೂಡ ನಗರೋತ್ಥಾನದ ಅನುದಾನದಡಿಯಲ್ಲಿ ಪರಿಶಿಷ್ಟ ಜಾತಿಯ ಕಾಲೋನಿಗಳಿಲ್ಲದ ಸ್ಥಳದಲ್ಲಿ ಸುಮಾರು 25 ಲಕ್ಷ ರೂ. ಕಾಮಗಾರಿಯನ್ನು ಮಂಜೂರಿ ಮಾಡಿದ್ದು ಇದು ಕಾನೂನು ಬಾಹಿರವಾಗಿರುತ್ತದೆ. ಮೀಸಲಾತಿ ಅನುದಾನದಡಿಯಲ್ಲಿ ಕೇವಲ ಪರಿಶಿಷ್ಟ ಜಾತಿಯವರು ವಾಸವಿರುವ ಸ್ಥಳದಲ್ಲಿ ಕಾಮಗಾರಿಯನ್ನು ನಡೆಸುವ ಬದಲು ಮೇಲ್ವರ್ಗದವರು ವಾಸಿಸುತ್ತಿರುವ ಸ್ಥಳದಲ್ಲಿ (ಹುಲ್ಬಟ್ಟ ಮಹಾಸತಿ ದೇವಸ್ಥಾನದ ಎದುರು ಜಾಲಿಕೋಡಿ ಪೂರ್ವ, ಜಾಲಿ) ಕಾಮಗಾರಿಯನ್ನು ನಡೆಸುತ್ತಿರುವದರಿಂದ ಸಂವಿಧಾನಿಕವಾಗಿ ಪರಿಶಿಷ್ಟ ಜಾತಿಯವರಿಗೆ ದೊರಕಬೇಕಾದ ಮೀಸಲಾತಿ ಸೌಲಭ್ಯದ ದುರ್ಬಳಕೆಯಾಗುತ್ತಿದ್ದು

ಈ ಕುರಿತಂತೆ ಕಾಮಗಾರಿ ನಿಲ್ಲಿಸುವ ಕುರಿತು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮತ್ತು ತಾಲೂಕು ದಂಡಾಧಿಕಾರಿಗಳಿಗೆ ಮನವಿಯನ್ನು ನೀಡಿದ್ದರೂ ಸಹ ಈ ಕುರಿತು ಯಾವುದೇ ಕ್ರಮವನ್ನು ಕೈಗೊಳ್ಳದೇ ತಮ್ಮ ಕರ್ತವ್ಯ ಲೋಪವೆಸಗಿರುತ್ತಾರೆ. ಆದ್ದರಿಂದ ಸದರಿ ಕಾಮಗಾರಿಯನ್ನು ತತ್ತಕ್ಷಣವೇ ನಿಲ್ಲಿಸಿ ನೈಜ ಪರಿಶಿಷ್ಟ ಜಾತಿಯವರು ಇರುವ ಸ್ಥಳಕ್ಕೆ ಸ್ಥಳಾಂತರಿಸಿ ಮೀಸಲಾತಿ ಅನುದಾನದ ದುರ್ಬಳಕೆಯನ್ನು ತಡೆದು, ಈ ಅನುದಾನವನ್ನು ಕಾನೂನು ಬಾಹಿರವಾಗಿ ಪರವಾನಿಗೆ ನೀಡಿದ ಅಧಿಕಾರಿಗಳ ಮೇಲೆ ದಲಿತ ದೌರ್ಜನ್ಯ ಕಾಯಿದೆಯಡಿಯಲ್ಲಿ ಕ್ರಮ ಜರುಗಿಸಬೇಕೆಂದು ಮನವಿಯನ್ನು ಸಲ್ಲಿಸಿದರು .

WhatsApp
Facebook
Telegram
error: Content is protected !!
Scroll to Top