ಭಗವದ್ಗೀತ ಕಂಠಪಾಠ ಸ್ಪರ್ದೇಯ ಬಹುಮಾನ ವಿತರಣೆ

ಭಟ್ಕಳ ಏಜ್ಯುಕೇಷನ್ ಟ್ರಸ್ಟ ಮತ್ತು ಸಹಯೋಗದಲ್ಲಿ ಕಾರ್ಯಕ್ರಮ ಸಂಪನ್ನ

ಭಟ್ಕಳ: ಏಜ್ಯುಕೇಷನ್ ಟ್ರಸ್ಟ ಮತ್ತು ಗಜಾನನ ಗಣಪತಿ ಕೊಲ್ಲೆ  ರಾಯ್ಕರ್ ಪೌಂಡೆಷನ್ ಸಹಯೋಗದಲ್ಲಿ ಭಗವದ್ಗೀತ ಕಂಠಪಾಠ ಸ್ಪರ್ದೇಯ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಲಾಯಿತು

ಭಟ್ಕಳ ಏಜ್ಯುಕೇಷನ್ ಟ್ರಸ್ಟನ ರಾಜೇಶ ನಾಯಕ್ ಉದ್ಗಾಟಿಸಿ ಮಾತನಾಡುತ್ತ ಪ್ರಪಂಚದಲ್ಲಿ ಶ್ರೇಷ್ಟವಾದ ಧರ್ಮಗ್ರಂಥ ಭಗವದ್ಗೀತೆಯಾಗಿದೆ ಆದರೆ ನಾವು ನಮ್ಮ ಧರ್ಮಗ್ರಂಥದ ಮಹತ್ವವನ್ನು ಅರಿತುಕೊಳ್ಳುತ್ತಿಲ್ಲ ಎನ್ನುವುದು ತುಂಬ ಖೇದಕರ ಸಂಗತಿಯಾಗಿದೆ ಪ್ರತಿಯೊಬ್ಬ ಪಾಲಕರು ತಮ್ಮ ತಮ್ಮ ಮಕ್ಕಳಿಗೆ ಭಗವದ್ಗೀತೆಯ ಮಹತ್ವದ ಬಗ್ಗೆ ತಿಳಿಸಿಕೊಡಬೇಕು ಎಂದು ಹೇಳಿದರು.

ಈ ಸಂದರ್ಬದಲ್ಲಿ ಪ್ರಾಂಶುಪಾಲರಾದ ವಿರೇಂದ್ರ ಶಾನಬಾಗ್ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಗವದ್ಗೀತಾ ಕಂಠಪಾಠ ಸ್ಪರ್ದೆಯಲ್ಲಿ ವಿಜೇತರಾದ ಎಲ್ಲಾ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರವಿಂದ್ರ ಜಿ ಕೊಲ್ಲೆ, ಪ್ರದೀಪ ಜಿ ಪೈ, ಶ್ರೀದರ ಶಾನಬಾಗ್, ರಮೇಶ ಕಾರ್ವಿ ಮುಂತಾದವರು ಉಪಸ್ಥಿರಿದ್ದರು

WhatsApp
Facebook
Telegram
error: Content is protected !!
Scroll to Top