ಪುರಾಣ ಪುಣ್ಯಗಳ ತವರೂರು ನಮ್ಮ ನಾಡು ರಾಮನ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳೊಣ : ಸಚಿವ ಮಂಕಾಳು ವೈದ್ಯ

ಭಟ್ಕಳ: ತಾಲೂಕ ಪಂಚಾಯತ್ ಪುರಸಭೆ ಭಟ್ಕಳ ಜಾಲಿ ಪಟ್ಟಣ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಇದರ ಸಹಯೋಗದಲ್ಲಿ ವಾಲ್ಮಿಕಿ ಜಯಂತಿಯನ್ನು ಹಮ್ಮಿಕೊಳ್ಳಲಾಯಿತು

ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಸಚಿವ ಮಂಕಾಳು ವೈದ್ಯರು ಜೀವನದಲ್ಲಿ ತಪ್ಪು ಮಾಡುವುದು ಸಹಜ ಆದರೆ ಅದನ್ನು ತಿದ್ದಿಕೊಂಡು ಹೊಗುವುದು ನಮ್ಮ ಕರ್ತವ್ಯವಾಗಿರುತ್ತದೆ ಇದಕ್ಕ ಸ್ಪಷ್ಟ ನಿದರ್ಶನ ವಾಲ್ಮಿಕಿ ಮಹರ್ಶಿಗಳಾಗಿದ್ದಾರೆ . ಮನುಷ್ಯ ವಾಲ್ಮಿಕಿಯಾಗಲು ಪ್ರಯತ್ನಿಸ ಬೇಕು ಸತ್ಯದ ಕಡೆ ಹೊಗಬೇಕು ನಮ್ಮಲ್ಲಿ ಅನೇಕ ಪುರಾಣ ಪುಣ್ಯ ಕಥೇಗಳನ್ನು ನಾವು ನೊಡಬಹುದಾಗಿದೆ ನಾವು ರಾಮ ಹುಟ್ಟಿದ್ದ ನಾಡಲ್ಲಿ ಹುಟ್ಟಿದ್ದೆವೇ ನಾವು ರಾಮನ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಸಹಾಯಕ ಆಯುಕ್ತರಾದ ನಯನ ಅವರು ಮಾತನಾಡಿದರು

ಸೊಮಯ್ಯ ತಿಮ್ಮಪ್ಪ ಗೊಂಡ ಅವರು ವಾಲ್ಮಿಕಿ ಮಹರ್ಶಿಗಳ ಬಗ್ಗೆ ಉಪನ್ಯಾಸವನ್ನು ನೀಡಿದರು

ಈ ಸಂದರ್ಬದಲ್ಲಿ ತಾಲೂಕ ತಹಶಿಲ್ದಾರ್ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ್ ಚಿಕ್ಕನ ಮನೆ, ಡಿವೈಎಸ್ಪಿ ಶ್ರೀಕಾಂತ ಭಟ್ಕಳ ಪುರಸಭಾ ಮುಖ್ಯಾಧಿಕಾರಿ, ಜಾಲಿ ಪಟ್ಟಣ ಪಂಜಾಯತ್ ಮುಖ್ಯಾಧಿಕಾರಿ ಮುಂತಾದವರು ಇದ್ದರು

WhatsApp
Facebook
Telegram
error: Content is protected !!
Scroll to Top