ಉತ್ತರ ಕನ್ನಡ ದೇವಾಡಿಗ ಸಮಾಜದ ಸಾದಕರಿಗೆ ಸನ್ಮಾನ

ಉತ್ತರ ಕನ್ನಡ ಜಿಲ್ಲಾ ದೇವಾಡಿಗ ಸಮಾಜ ನೌಕರ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರ,ಮ

ಭಟ್ಕಳ: ನಮ್ಮ ಸಮಾಜದ ವಿದ್ಯಾರ್ಥಿಗಳು ಹಾಗೂ ಸಮಾಜ ಬಾಂಧವರು ಸಂಕೋಚನ್ನು ಬದಿಗಿಟ್ಟು, ಎಲ್ಲರೊಂದಿಗೆ ಸೇರಿ ಚರ್ಚಿಸುವ ಸ್ವಭಾವ ಬೆಳೆಸಿಕೊಂಡಲ್ಲಿ ಉತ್ತಮ ಶಿಕ್ಷಣವನ್ನು ಪಡೆದು, ಉನ್ನತ ಹುದ್ದೆಗೆ ಏರಬಹುದು ಎಂದು ಮಾವಳ್ಳಿ ಹೋಬಳಿ ಉಪ-ತಹಸೀಲ್ದಾರರಾದ ಶ್ರೀಮತಿ ರಜಿನಿ ದೇವಾಡಿಗ ರವರು ಹೇಳಿದರು.


ಅವರು ಭಟ್ಕಳ ತಾಲೂಕಿನ ಬೆಂಗ್ರೆ ಯಕ್ಷೆಮನೆ ಶ್ರೀ ದುರ್ಗಾಪರಮೇಶ್ವರಿ ದೇವಾಡಿಗ ಸಭಾ ಭವನದಲ್ಲಿ ಜರುಗಿದ ಉತ್ತರ ಕನ್ನಡ ಜಿಲ್ಲಾ ದೇವಾಡಿಗ ಸಮಾಜ ನೌಕರ ಸಂಘ(ರಿ), ಮುರುಡೇಶ್ವರ, ತಾ: ಭಟ್ಕಳ ಇದರ ಆಶ್ರಯದಲ್ಲಿ ಜರುಗಿದ 2022-23ನೇ ಶೈಕ್ಷಣಿಕ ಸಾಲಿನ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ನೌಕರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಶಿಕ್ಷಕರಾದ ಶ್ರೀ ಮಂಜುನಾಥ ಭೈರುಮನೆ ಇವರು ಮಾತನಾಡಿ, ದೇವಾಡಿಗ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಉನ್ನತ ಸ್ಥಾನದಲ್ಲಿರುವ ಸಮಾಜ ಬಾಂಧವರು ಹಾಗೂ ನೌಕರರು ಹಿಂದುಳಿದವರಿಗೆ ಆಶ್ರಯವನ್ನು ಒದಗಿಸಬೇಕು ಎಂದು ಸಲಹೆ ನೀಡಿದರು. ಹಾಗೂ ಸಮಾಜದ ಎಲ್ಲಾ ನೌಕರರು ಈ ಒಂದು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ದೇವಾಡಿಗ ಸಮಾಜ ನೌಕರರಾದ ಶ್ರೀ ವೆಂಕಟೇಶ ಎಸ್. ದೇವಾಡಿಗ ಇವರು ಸಮಾಜದ ಸಂಘಟನೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕಾರ್ಯಕ್ರಮದ ಕುರಿತು ವಿವರವಾಗಿ ಮಾತನಾಡಿ. ಸಮಾಜದ ಬಡವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಥಾಪಿಸಲಾದ ವಿದ್ಯಾನಿಧಿ ಗೆ ಸಮಾಜ ನೌಕರರು, ಸಮಾಜ ಬಾಂಧವರು ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹಿಸುವಂತೆ ವಿನಂತಿಸಿದರು.
ಸಂಘದ ಸದಸ್ಯರಾದ ಶ್ರೀ ಮಾದೇವ ಜಿ. ಗದ್ದೆಮನೆ ಇವರು ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಶ್ರೀ ನವೀನ ಜಿ. ದೇವಾಡಿಗ ಇವರು ವರದಿ ವಾಚನ ಮಾಡಿದರು. ಶ್ರೀ ಕೃಷ್ಣ ಎ. ದೇವಾಡಿಗ ಇವರು ಎಲ್ಲರಿಗೂ ವಂದಿಸಿದರು. ಶಿಕ್ಷಕರಾದ ಶ್ರೀ ನಾಗೇಶ ಎಂ. ದೇವಾಡಿಗ, ಮಾದೇವ ಜಿ. ಗದ್ದೆಮನೆ ಹಾಗೂ ಶ್ರೀ ಕೃಷ್ಣ ಎ. ದೇವಾಡಿಗ ರವರು ಕಾರ್ಯಕ್ರಮ ನಿರೂಪಿಸಿದರು.

WhatsApp
Facebook
Telegram
error: Content is protected !!
Scroll to Top