ಭಟ್ಕಳದಲ್ಲಿ ತೆಂಗು ಬೆಳೆಗಳ ರೋಗಗಳ ನಿಯಂತ್ರಣ ಕುರಿತು ವಿಚಾರ ಸಂಕಿರಣ

ಭಟ್ಕಳ ತಾಲೂಕಿನ ಹದ್ಲುರು ಗ್ರಾಮದಲ್ಲಿ ಅಡಿಕೆ ಹಾಗೂ ತೆಂಗು ಬೆಳೆಗಳ ರೋಗಗಳ ನಿಯಂತ್ರಣ ಕುರಿತು ವಿಚಾರ ಸಂಕಿರಣ ನೆರವೇರಿತು.

ಶ್ರೀ ಎಚ್ ಕೆ ಬಿಳಗಿ ಹಿರಿಯ ಸಹಾಯಕ ತೋಡಿದ ಉದ್ದೇಶಗಳು ಪ್ರಸ್ತಾವಿಕ ನುಡಿ ನುಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ತಿಪ್ಪೇಸ್ವಾಮಿ ತಹಸಿಲ್ದಾರ ಭಟ್ಕಳ ರವರು ನೆರವೇರಿಸಿ ರೈತರ ಸಮಸ್ಯೆ ಕುರಿತು ಹಾಗೂ ರೈತರ ಸಮಸ್ಯೆಗೆ ತಮ್ಮ ಕಾರ್ಯಾಲಯ ಸಿದ್ಧವಿರುವದಾಗಿ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಶ್ರೀಧರ್ ಹೆಬ್ಬಾರ್ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರು, ಎಲ್ಲ ಕಸುಬುಗಳಿಗಿಂತ ಕೃಷಿ ಕಸುಬು ಮೇಲು , ಇದರಲ್ಲಿರುವ ಶಾಂತಿ ನೆಮ್ಮದಿ ಬೇರೆ ಯಾವುದರಲ್ಲೂ ಸಿಗದು ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಸುಧಾಕರ್ ಭಟ್ ನಿವೃತ್ತ ವಿಜ್ಞಾನಿಗಳು ಸಿಸಿ ಆರ್ ಐ ಬಾಳೆಹೊನ್ನೂರು ತೋಟದ ಬೇಸಾಯದ ಕುರಿತು ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು. ಸಭೆಯ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಪಾಂಡುರಂಗ ಸದಸ್ಯರು ಬೆಳಕೆ ಗ್ರಾಮ ಪಂಚಾಯತ್ ಹಾಗೂ ಭಗವಾನ್ ನಿತ್ಯಾನಂದ ಟ್ರಸ್ಟ್ ಸಂಸ್ಥಾಪಕರು ರವರು ತಮ್ಮ ಸಂಸ್ಥೆ ಪ್ರಕೃತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಈ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ರೈತರಿಗೆ ಉಚಿತ ಅಡಿಕೆ ಸಸಿಗಳನ್ನು ವಿತರಣೆ ಮಾಡಿದರು. ಕಾರ್ಯಕ್ರಮದ ತಾಂತ್ರಿಕ ಅಧಿವೇಶನದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಡಾಕ್ಟರ್ ಅಬ್ದುಲ್ ಕರೀಂ, ಸಸ್ಯ ಶಾಸ್ತ್ರಜ್ಞರು ಹಾಗೂ ಮುಖ್ಯಸ್ಥರು ತೋಟಗಾರಿಕೆ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ ಸಿರಿಸಿ ರವರು ಅಡಿಕೆ ಹಾಗೂ ತೆಂಗು ಬೆಳೆಗಳ ರೋಗಗಳ ಕುರಿತು ತಾಂತ್ರಿಕ ಮಾಹಿತಿಯನ್ನು ನೀಡಿದರು. ಅದೇ ರೀತಿ ಡಾಕ್ಟರ್ ಸುದೀಪ್ ಕುಲಕರ್ಣಿ ಸಹಾಯಕ ಪ್ರಾಧ್ಯಾಪಕರು ಹಾಗೂ ಮೇಲ್ವಿಚಾರಕರು ಹೆಚ್ ಆರ್ ಈ ಸಿ, ಸಿರ್ಸಿ ರವರು ತೆಂಗು ಹಾಗೂ ಅಡಿಕೆ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತಿಮ್ಮಪ್ಪ ಮಾಸ್ತಿ ಗೊಂಡ ಮತ್ತು ಇತರರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top