ಸಚಿವ ಮಂಕಾಳು ವೈದ್ಯರ ಭಟ್ಕಳ ಕಾರ್ಯಾಲಯ ಶುಭಾರಂಭ

ಬಡವರ ಸೇವೆಯೆ ನನ್ನ ಗುರಿ ಶಾಸಕ ಮಂಕಾಳು ವೈದ್ಯರ ಹೇಳಿಕೆ

ಭಟ್ಕಳ : ತಾಲೂಕಿನಲ್ಲಿ ಜನ ಸ್ಪಂದನೆಗಾಗಿ ಸಚಿವ ಮಂಕಾಳು ವೈದ್ಯರ ಕಾರ್ಯಾಲಯವನ್ನು ರವಿವಾರ ಉದ್ಗಾಟಿಸಲಾಯಿತು

ಕಾರ್ಯಕ್ರಮದ ಉದ್ಗಾಟನೆಯನ್ನು ಪುಟ್ಟಮಕ್ಕಳ ಮೂಲಕ ಸಚಿವ ಮಂಕಾಳು ವೈದ್ಯರು ಚಾಲನೆಯನ್ನು ನಿಡಿದರು

ತಮ್ಮ ಕಾರ್ಯಾಲಯವನ್ನು ಉದ್ಗಾಟಿಸಿ ಮಾತನಾಡಿದ ಅವರು ನಾನು ಅಧಿಕಾರ ಹಿಡಿದಿರುವುದೆ ಜನತೆಯ ಕಣ್ಣೊರೆಸಲು ನನ್ನನ್ನು ನೀವು ಶಾಸಕರನ್ನಾಗಿ ಸಚಿವರನ್ನಾಗಿ ಆಯ್ಕೆ ಮಾಡಿದ್ದಿರ ನಿಮ್ಮ ಸೇವೆಯೆ ನನ್ನ ಗುರಿ ಇಂದು ನಮ್ಮ ಕಾರ್ಯಾಲಯ ಉದ್ಗಾಟನೆಗೊಂಡಿದೆ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ನಿಮ್ಮ ಯಾವುದೇ ಸಮಸ್ಯೆ ಇದ್ದರು ನಮ್ಮನ್ನು ಸಂಪರ್ಕಿಸಿ ನಮ್ಮ ಆಪ್ತಕಾರ್ಯದರ್ಶಿಗಳು 24 ಗಂಟೆ ನಿಮ್ಮ ಸೇವೆಯಲ್ಲಿ ನಿರತರಾಗಿರುತ್ತಾರೆ ಒಂದು ವೇಳೆ ನಿಮ್ಮ ಕಾರ್ಯ ಆಗದಿದ್ದಲ್ಲಿ ನಮ್ಮನ್ನು ನೇರವಾಗಿ ತಾವು ಸಂಪರ್ಕಿಸ ಬಹುದಾಗಿದೆ ನಿಮ್ಮ ಕುಂದುಕೊರತೆಗಳ ನಿವಾರಣೆ ಮಾಡುವುದೆ ನಮ್ಮ ಕೆಲಸವಾಗಿರುತ್ತದೆ ಕಾರಣ ಯಾರು ಕಳವಳಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಈ ಸಂದರ್ಬದಲ್ಲಿ ಸಚಿವ ಮಂಕಾಳು ವೈದ್ಯರು ಪತ್ರಿಕಾ ವಿತರಕರಿಗೆ ಐ ಡಿ ಕಾರ್ಡವಿತರಣೆ ಮಾಡಿ ಸರಕಾರದಿಂದ ಸಿಗಬಹುದಾದ ಸೌಲಬ್ಯವನ್ನು ಶೀಘ್ರದಲ್ಲಿ ಪತ್ರಿಕಾ ವಿತರಕರಿಗೆ ಒದಗಿಸಲಾಗುವುದು ಎಂದು ಬರವಸೆಯನ್ನು ನೀಡಿದರು

ಕಾರ್ಯಕ್ರಮ ಉದ್ಗಾಟನೆಯ ನಂತರ ಸಚಿವರು ಜನರೊಂದಿಗೆ ಕುಳಿತು ಜನತೆಯ ಕುಂದುಕೊರತೆಯನ್ನು ಆಲಿಸಿದರು ಮತ್ತು ಕುಂದುಕೊರತೆಯ ನಿವಾರಣೆಯ ಭರವಸೆಯನ್ನು ನಿಡಿದರು ಮತ್ತು ಸ್ಥಳದಲ್ಲಿ ಬಗೆ ಹರಿಸಲು ಸಾಧ್ಯವಿರು ಸಮಸ್ಯೆಯನ್ನು ಪರಿಹಾರ ಮಾಡಿದರು

ಈ ಸಂದರ್ಬದಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ವಿಠಲ್ ನಾಯ್ಕ ಸಚಿವ ಮಂಕಾಳು ವೈದ್ಯರ ಆಪ್ತ ವಲಯದವರು ಕಾಂಗ್ರೇಸ್ ಮುಖಂಡರು ಸಾರ್ವಜನಿಕರು ಮುಂತಾದವರು ಉಪಸ್ಥಿತರಿದ್ದರು .

WhatsApp
Facebook
Telegram
error: Content is protected !!
Scroll to Top