ಭಟ್ಕಳ ತಾಲೂಕಿನಲ್ಲಿ ವಿಶ್ವಕರ್ಮ‌ ಪೂಜಾ ಮಹೋತ್ಸವ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉತ್ತರ ಕನ್ನಡ
ವಿಶ್ವಕರ್ಮ ಒಕ್ಕೂಟ (ರಿ) ಉತ್ತರ ಕನ್ನಡ
ಶ್ರೀ ಕಾಳಿಕಾಂಬ ದೇವಸ್ಥಾನ ಚೌಥನಿ, ಭಟ್ಕಳ
ಶ್ರೀ ಕಾಳಿಕಾಂಬ ಕಮಟೇಶ್ವರ ದೇವಸ್ಥಾನ ಗೋಕರ್ಣ
ಇವರ ಸಹಯೋಗದೊಂದಿಗೆ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವವನ್ನು ತಾಲೂಕಿನ ಬೆಂಗ್ರೆ ಮಾವಿನಕಟ್ಟೆ ಮಂಜುನಾಥ ರಾಯಲ್ ಕನ್ವೇನ್ಸನ್ ಹಾಲಿನಲ್ಲಿ ಹಮ್ಮಿಕೊಳ್ಳಲಾಗಿತು

ಬೃಹತ್ ಬೈಕ್ ರ್ಯಾಲಿ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.ಗ್ರಾಮ ಪಂಚಾಯತಿ ಬೆಂಗ್ರೆಯ ನಿಕಟ ಪೂರ್ವ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಶ್ರೀಯುತ ವೆಂಕಯ್ಯ ಬೈರೂಮನೆಯವರು ಕಾರ್ಯಕ್ರಮದ ಉದ್ಘಾಟಕರು ಹಾಗೂ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಶ್ರೀ ರಾಮಚಂದ್ರ ಕೆ ಎಂ, ಮಾನ್ಯ ಸಹಾಯಕ ನಿರ್ದೇಶಕರು- ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ತಿಪ್ಪೇಸ್ವಾಮಿ- ಮಾನ್ಯ ತಹಶೀಲ್ದಾರರು ಭಟ್ಕಳ, ಶ್ರೀ ಪ್ರಭಾಕರ್ ಚಿಕ್ಕನ ಮನೆ- ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕ ಪಂಚಾಯತ್ ಭಟ್ಕಳ, ಶ್ರೀ ದೇವಿದಾಸ ಆಚಾರ್ಯ- ಮಾಜಿ ನಿರ್ದೇಶಕರು ವಿಶ್ವಕರ್ಮ ನಿಗಮ ಮಂಡಳಿ ಉತ್ತರ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಯ ಸಮಸ್ತ ಸಂಘ ಸಂಸ್ಥೆಗಳ ಉಪಸ್ಥಿತಿಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸ್ವಾಗತ ಕಾರ್ಯಕ್ರಮವನ್ನು ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರಾದ ಶ್ರೀ ಗೋಪಾಲ ಆಚಾರ್ಯ ಇವರು ನೆರವೇರಿಸಿದರು, ಶ್ರೀ ಸುರೇಶ ಆಚಾರ್ಯ ಶಿಕ್ಷಕರು ಸಿ ಆರ್ ಪಿ ಕುಂಟವಾಣಿ ಕ್ಲಸ್ಟರ್ ಭಟ್ಕಳ ಇವರು ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿಶ್ವಕರ್ಮ ಒಕ್ಕೂಟದ ಸಂಘಟನಾ ಕಾರ್ಯದರ್ಶಿಯಾದ ಶ್ರೀ ಚಂದ್ರಶೇಖರ್ ಆಚಾರ್ಯ ಇವರು ವಂದನಾರ್ಪಣೆ ಸಲ್ಲಿಸಿದರು.
ಉತ್ತರಕನ್ನಡ ಜಿಲ್ಲೆಯ ಸಮಸ್ತ ವಿಶ್ವಕರ್ಮ ಸಮಾಜ ಬಾಂಧವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top