ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ  ಜಯಂತಿ ಉತ್ಸವ

ಬ್ರಹತ್ ಮೆರವಣಿಗೆ:

ಸಭಾ ಕಾರ್ಯಕ್ರಮ:

ಭಟ್ಕಳ ಹಿಂದೂಳಿದ ವರ್ಗಗಳಿಗೆ ನ್ಯಾಯವನ್ನು ಸ್ಥಾನಮಾನವನ್ನು ಒದಗಿಸಿಕೊಟ್ಟವರೆ ಬ್ರಹ್ಮಶ್ರೀ  ನಾರಾಯಣ ಗುರುಗಳಾಗಿದ್ದಾರೆ ಎಂದು ಬ್ರಹ್ಮಶ್ರೀ  ನಾರಾಯಣ ಗುರುಗಳ ಜಯಂತಿಯ ಆಚರಣೆ ಸಂದರ್ಬದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಹೇಳಿದರು

ಕಾರ್ಯಕ್ರಮದಲ್ಲಿ  ಅವರು ಆಶೀರ್ವಚನವನ್ನು ನೀಡುತ್ತ ಬ್ರಹ್ಮಶ್ರಿ ನಾರಾಯಣ ಗುರುಗಳು ಹಿಂದೂಳಿದ ವರ್ಗಗಳ ಅಭಿವೃದ್ದಿಗೆ ಅವತಾರ ಎತ್ತಿದವರಾಗಿದ್ದಾರೆ ಹಿಂದೆ  ಮೆಲ್ಜಾತಿಯವರಿಂದ ಹಿಂದೂಳಿದ ವರ್ಗದವರನ್ನು  ಅಮಾನವಿಯವಾಗಿ ಶೋಷಿಸಲಾಗುತ್ತಿತ್ತು   ದೇವಸ್ಥಾನಗಳಿಗೆ ಪ್ರವೇಶ ನಿಷೇದಿಸಲಾಗಿತ್ತು ಹಿಂದುಳಿದ ವರ್ಗದವರನ್ನು ಪಶುವಿಗಿಂತ ಹೀನಾಯವಾಗಿ ಪಾಶವಿಯವಾಗಿ ನಡೆಸಿಕೊಳ್ಳಲಾಗುತ್ತಿತ್ತು ಈ ಸಂದರ್ಬದಲ್ಲಿ ನಾರಾಯಣ ಗುರುಗಳು ಹಿಂದುಳಿದ ವರ್ಗದವರ ಉದ್ದಾರಕ್ಕೆ ಜನ್ಮತಾಳಿದರು ಹಿಂದೂಳಿದ ವರ್ಗದವರಿಗೆ ಸ್ವತಃ ದೇವಸ್ಥಾನ ನಿರ್ಮಿಸುವಂತೆ ಕರೆ ನೀಡಿದರು ನಾರಾಯಣ ಗುರುಗಳು ಹಿಂದೂಳಿದ ವರ್ಗಗಳ ಎಳ್ಗೆಗಾಗಿ ಶ್ರಮಿಸಿದರು ಎಲ್ಲರು ಅವರು ಹಾಕಿಕೊಟ್ಟ ದಾರಿಯಲ್ಲೆ ನಡೆದುಕೊಳ್ಳಲು ಕರೆ ನೀಡಿದರು

ಗೊಕರ್ಣನಾಥೇಶ್ವರ ದೇವಸ್ಥಾನ ಮಂಗಳೂರು ಇದರ ಕೋಶಾಧಿಕಾರಿ ಪದ್ಮರಾಜ್ ಆರ್ ಅವರು ಮಾತನಾಡುತ್ತ ಹಿಂದುಳಿದ ವರ್ಗಗಳ  ಅಭಿವೃದ್ದಿಯನ್ನು  ಬ್ರಹ್ಮಶ್ರಿ ನಾರಾಯಣ ಗುರುಗಳು ಶ್ರಮಿಸಿದ್ದರು  ಹಿಂದೆ ನಮ್ಮ  ಹಿಂದುಳಿದ ವರ್ಗಕ್ಕೆ ದೇವಸ್ಥಾನ ಪ್ರವೇಶ ನೀಶಿದ್ದವಾಗಿತ್ತು ಆ ಸಂದರ್ಬದಲ್ಲಿ   ಗುರುಗಳು  ದೇವಸ್ಥಾನಗಳನ್ನು ಸ್ವತಃ ನಿರ್ಮಿಸಿಕೊಳ್ಳುವಂತೆ ಕರೆ ನಿಡುವ ಮೂಲಕ ಕ್ರಾಂತಿಯನ್ನು ಹುಟ್ಟುಹಾಕಿದ್ದಾರೆ  ಯಾರನ್ನು ದ್ವೇಷದಿಂದ ಗೆಲ್ಲಲು ಸಾಧ್ಯವಿಲ್ಲ ಪ್ರೀತಿಯಿಂದ ಎಲ್ಲರನ್ನು ಗೆಲ್ಲಬಹುದಾಗಿದೆ ಎಂಬ ಮಾತನ್ನು ನಾರಾಯಣ ಗುರುಗಳು ಹೇಳುತ್ತಾರೆ  ಇಂತಹ ಇತಿಹಾಸವನ್ನು ಹೊಂದಿರುವವರು ನಮ್ಮ ನಾರಾಯಣ ಗುರುಗಳಾಗಿದ್ದಾರೆ ಗುರುಗಳು ಹಾಕಿಕೊಟ್ಟಿರುವ  ದಾರಿಯಲ್ಲೆ ನಾವು ನಡೆಯಬೇಕಾಗಿದೆ  ಎಂದು ಹೇಳಿದರು

ಕಾರ್ಯಕ್ರಮದಲ್ಲಿ ನಾಮದಾರಿ ಸಮಾಜದ ಅಧ್ಯಕ್ಷ  ಕ್ರಷ್ಣ ನಾಯ್ಕ  ಆಸರಕೇರಿ ಅವರು ಮಾತನಾಡುತ್ತ ನಮ್ಮ ಹೊರಾಟ ನಮ್ಮ ಸಮಾಜವನ್ನು ಸದ್ರಡಮಾಡುವ ಉದ್ದೇಶವನ್ನು ಹೊಂದಿದೆಯೆ ಹೊರತು ಯಾರನ್ನು ಎಂ ಪಿ  ಎಮ್ ಎಲ್ ಎ ಮಾಡುವ  ಉದ್ದೇಶವನ್ನು ಹೊಂದಿಲ್ಲ  ಯಾವುದೇ ಜಾತಿ ಜನಾಂಗದ ಮೇಲೆ ದಂಡೆತ್ತಿ ದಾಳಿ ಮಾಡುವ ಉದ್ದೇಶವನ್ನು ಹೊಂದಿಲ್ಲಾ ನಮ್ಮ ಸಮಾಜ ಬಾಂದವರ ಏಳ್ಗೇಯೆ ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ನಾರಾಯಣ ಗುರು ವಸತಿ ಶಾಲೆಯ ಪ್ರತಿಬಾನ್ವೀತ ವಿಧ್ಯಾರ್ಥಿಗಳಿಗೆ  ಬಹುಮಾನಗಳನ್ನು ವಿತರಿಸಲಾಯಿತು

ಕಾರ್ಯಕ್ರಮದ ಮೊದಲು ನಾರಾಯಣ ಗುರುಗಳ ಪ್ರತಿಕ್ರತಿಯನ್ನು ಪೂರ್ಣ ಕುಂಭ ಮೆರವಣಿಗೆಯ ಮೂಲಕ ನಿಚ್ವಲಮಕ್ಕೆ ಸಭಾಭವನಕ್ಕೆ ತರಲಾಯಿತು ಮೇರಮಣಿಗೆ ಸಂದರ್ಬದಲ್ಲಿ ಶಂಶುದ್ದಿನ್ ಸರ್ಕಲ್ ಅಲ್ಲಿ ತಾಲೂಕ ಸಹಾಯಕ ಆಯುಕ್ತರ ಮೂಲಕ ಸರಕಾರಕ್ಕೆ ನಾರಾಯಣ ಗುರು ನಿಗಮವನ್ನು ಮಾಡುವಂತೆ ಮನವಿಯನ್ನು ಮಾಡಲಾಯಿತು

ಸುಬ್ರಾಯ ನಾಯ್ಕ ಮುಖ್ಯ ಅತಿಥಿ ಹಳೆಹೊಟೆ ಹನುಮಂತ ದೇವಸ್ಥಾನ ಧರ್ಮದರ್ಶಿ ಹನುಮಂತ ನಾಯ್ಕ. ಮಂಗಳೂರಿನ ಪದ್ಮನಾಭ ,  ನಿಚ್ಚಲಮಕ್ಕಿ ದೇವಸ್ಥಾನ ಉಪಾದ್ಯಕ್ಷ ಭವಾನಿ ಶಂಕರ್, ಮಾಜಿ ಶಾಸಕ ಸುನಿಲ್ ನಾಯ್ಕ  ಬಿ ಎಸ್ ಎನ್ ಡಿ ಪಿ ಸತ್ಯಜಿತ್ ಸುರತ್ಕಲ್ ,  ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top