ಆರೋಗ್ಯ ಇಲಾಖೆಯ ವತಿಯಿಂದ ಹೊಸ ಆದೇಶ

ಸರಕಾರಿ ಆಸ್ಪತ್ರೆಗಳಲ್ಲಿ ನಿಯಮ ಬಾಹಿರವಾಗಿ ಅಧಿಕಾರ ಹಿಡಿದವರ ಅಧಿಕಾರಕ್ಕೆ ಕುತ್ತು

ಭಟ್ಕಳ: ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು/ತಜ್ಞರುಗಳಿಗೆ ಆಸ್ಪತ್ರೆಗಳ ಆಡಳಿತ ಕಾರ್ಯಭಾರವನ್ನು ಸೇವಾ ಹಿರಿತನದ ಆಧಾರದ ಮೇಲೆ ನೇಮಿಸುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆದೇಶ ಹೊರಡಿಸಿರುವುದು ಬೆಳಕಿಗೆ ಬಂದಿದೆ .

ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸೇವಾ ಹಿರಿತನವನ್ನು ಕಡೆಗಣಿಸಿ ಕಿರಿಯ ವೈದ್ಯರು/ತಜ್ಞರುಗಳಿಗೆ ಆಸ್ಪತ್ರೆಯ ಆಡಳಿತ ಪ್ರಭಾರವನ್ನು ವಿಭಾಗೀಯ ಸಹ ನಿರ್ದೇಶಕರುಗಳು ಹಾಗೂ ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳು ವಹಿಸಿಕೊಟ್ಟಿರುವುದು ಗಮನಕ್ಕೆ ಬಂದಿರುವ ಕಾರಣ . ಸೇವೆಯಲ್ಲಿ ಹಿರಿತನ ಹೊಂದಿದ್ದರೂ ಕೂಡ ಕಿರಿಯರಾದ ವೈದ್ಯರು/ತಜ್ಞರುಗಳಿಗೆ ಆಡಳಿತ ವೈದ್ಯಾಧಿಕಾರಿಯ ಹೆಚ್ಚುವರಿ ಪ್ರಭಾರ ನೀಡಿರುವುದರಿಂದ ಹಿರಿಯ ವೈದ್ಯರು/ತಜ್ಞರುಗಳು ಅವರ ಅಧೀನದಲ್ಲಿ ಕಾರ್ಯನಿರ್ವಹಿಸುವುದರಿಂದ ಸಮನ್ವಯದ ಕೊರತೆ ಉಂಟಾಗುತ್ತಿರುವ ಕಾರಣ ಸಾಕಷ್ಟು ದೂರು ವಿರೋದಗಳು ತಲೆದೂರಿದ್ದು

ಇನ್ನು ಸೇವೆಯಲ್ಲಿ ಹಿರಿತನ ಹೊಂದಿರುವ ವೈದ್ಯರ ವಿರುದ್ಧ ಲೋಕಾಯುಕ್ತ ಪ್ರಕರಣ/ಕ್ರಿಮಿನಲ್ ಮೊಕದ್ದಮೆ/ಆರ್ಥಿಕ ದುರುಪಯೋಗದ ಆರೋಪಗಳು ಕಂಡುಬಂದಿದ್ದಲ್ಲಿ ಅಥವಾ ವೈದ್ಯರು/ತಜ್ಞರುಗಳೇ ವೈಯಕ್ತಿಕ/ಅನಾರೋಗ್ಯ ಕಾರಣ ನೀಡಿ ಪ್ರಭಾರ ವಹಿಸಿಕೊಳ್ಳಲು ನಿರಾಕರಿಸುವಂತಹ ಸಂದರ್ಭಗಳಲ್ಲಿ, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಸೇವಾ ಹಿರಿತನ (Next senior) ಹೊಂದಿದ ಹಿರಿಯ ವೈದ್ಯರು/ತಜ್ಞರಿಗೆ ಆಸ್ಪತ್ರೆಯ ಆಡಳಿತ ಕಾರ್ಯಭಾರವನ್ನು ವಹಿಸಿಕೊಳ್ಳಲು ಆಯುಕ್ತಾಲಯ ದಿಂದ ಆದೇಶ ನೀಡಿದೆ

ಈ ಸೂಚನೆಯನ್ನು ಪಾಲಿಸದಿದ್ದಲ್ಲಿ ಯಾವುದೇ ದೂರು / ಮನವಿ ಬಂದಲ್ಲಿ ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳನ್ನು ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂಬ ಖಡಕ್ ಆದೇಶವನ್ನು ಆರೋಗ್ಯ ಇಲಾಖೆ ಹೊರಡಿಸಿದ್ದು ತಿಳಿದು ಬಂದಿದೆ

ವೀಕ್ಷಕರೇ ಜಿಲ್ಲೆಯಾಧ್ಯಂತ ಕೆಲವು ಸರಕಾರಿ ಆಸ್ಪತ್ರೆಗಳಲ್ಲಿ ರಾಜಕೀಯ ಪ್ರಭಾವವನ್ನು ಬಳಸಿ ಯಾವುದೇ ಅರ್ಹತೆ ಇಲ್ಲದಿದ್ದರು ಸರಕಾರಿ ಆಸ್ಪತ್ರೆಗಳಲ್ಲಿ ಅನದಿಕ್ರತವಾಗಿ ಅಧಿಕಾರವನ್ನು ಹಿಡಿದು ತಮಗಿಂತ ಹಿರಿಯ ವೈದ್ಯರುಗಳಿಗೆ ಇರಿಸುಮುರಿಸಾಗುವಂತೆ ಮಾಡಿರುವುದು ನೊಡಬಹುದು

ಇನ್ನು ಮುಖ್ಯವಾಗಿ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲೂ ಕೂಡ ಹಿರಿಯ ವೈದ್ಯರಿದ್ದರು ಕೇವಲ ಅರವಳಿಕೆ ತಜ್ಞೆಯಾಗಿರುವ ಸವಿತಾ ಕಾಮತ್ ಇವರು ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಅಧಿಕಾರವನ್ನು ಹಿಡಿಯುತ್ತಾರೆ ಇದು ಸಾರ್ವಜನಿಕ ವಲಯದಲ್ಲಿ ತುಂಬ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಡಾ ಜನಾರ್ದನ ಮೋಗೇರ್, ಸತೀಷ್ ಡಿ , ವೀಣಾ ಶಿರೂರ್ ಎಂಬ ಮೂರು ಮೂರು ಜನ ಸಿನಿಯರ್ ಮೊಷ್ಟ ವೈದ್ಯರಿದ್ದರು ಕೂಡ ಈ ಸವಿತಾ ಕಾಮತ್ ಎಂಬ ಅರವಳಿಕೆ ತಜ್ಞೆ ತಾನೋಬ್ಬ ಜೂನಿಯರ್ ವೈದ್ಯೆಯಾಗಿದ್ದುಕೊಂಡು ಇನ್ನೊಬ್ಬರ ಪಾಲಿನ ತಾಲೂಕ ವೈದ್ಯಾಧಿಕಾರಿ ಎಂಬ ಅಧಿಕಾರವನ್ನು ಪಡೆದುಕೊಳ್ಳುತ್ತಾರೆ ಮುಖ್ಯವಾಗಿ ಇವರು ಅಧಿಕಾರ ಪಡೆದ ನಂತರ ತಾಲೂಕ ಆಸ್ಪತ್ರೆಗೆ ಒಂದಿಲ್ಲೋಂದು ವಿವಾದಗಳು ಅಂಟಿಕೊಳ್ಳುತ್ತಲೆ ಬಂದಿದೆ ಕಾರಣ ಡಾ ಸವಿತಾ ಕಾಮತ್ ಅವರಲ್ಲಿರುವ ಅನುಭವದ ಕೊರತೆಯೋ ಅಥವಾ ಇನ್ಯಾವುದು ಎನ್ನುವುದನ್ನು ಸವಿತಾ ಕಾಮತ್ ಅವರಿಗೆ ಅಧಿಕಾರವನ್ನು ವಹಿಸಿದ ಸರಕಾರಿ ಅಧಿಕಾರಿಗಳೆ ಉತ್ತರಿಸಬೇಕಾಗಿದೆ ಇವರು ಅಧಿಕಾರ ವಹಿಸಿಕೊಂಡ ನಂತರ ಕರೋನಾ ಸಂದರ್ಬದಲ್ಲಿ ಕೆಲವು ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿತ್ತು ಈ ಬಗ್ಗೆ ತನಿಖೆ ನಡೆಸಲು ಬಂದ ಅಧಿಕಾರಿಗಳ ಮೇಲೆ ಒತ್ತಡ ತಂದು ಅವರಿಂದಲೆ ಪ್ರಶಸ್ತಿಪತ್ರವನ್ನು ಪಡೆದ ಅವಾಂತಗಳು ಘಟಿಸಿದೆ ತಾಲೂಕಿನ ಒಬ್ಬ ಪತ್ರಕರ್ತನನ್ನು ಪೊಲೀಸ್ ಠಾಣೆಗೆ ಕರೆಯಿಸಿ ಅವಮಾನ ಮಾಡಿರುವ ಆರೋಪ ಕರೊನಾ ಸಂದರ್ಬದಲ್ಲಿ ವಿಕೆಂಡ್ ಕರ್ಪ್ಯೂ ಇದ್ದರು ಕೂಡ ಕರೋನಾ ಆಸ್ಪತ್ರೆಯಲ್ಲಿ ನನ್ನ ಹುಟ್ಟುಹಬ್ಬ ಆಚರಿಸಿಕೊಂಡು ಮೊಜು ಮಸ್ತಿ ಮಾಡಿದ್ದು ಹೀಗೆ ಒಂದಾ ಎರಡಾ ಈ ಬಗ್ಗೆ ಈಗಾಗಲೆ ತನಿಖೆ ನಡೆಯುತ್ತಿದೆ ತನಿಖೆ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಅದರ ಪಲಿತಾಂಶದ ಬಗ್ಗೆ ತನಿಕಾಧಿಕಾರಿಗಳೆ ಹೇಳಬೇಕಾಗಿದೆ . ಇಷ್ಟೆಲ್ಲಾ ಗೊಂದಲಗಳು ತಾಲೂಕು ಆಸ್ಪತ್ರೆಯಲ್ಲಿ ತಲೆದೂರಿತ್ತು ಇದನ್ನು ನಾವು ಇಲ್ಲಿ ಯಾಕೆ ಪ್ರಸ್ತುತ ಪಡಿಸುತ್ತಿದ್ದೆವೆ ಎಂದರೆ ಆಸ್ಪತ್ರೆಗಳಲ್ಲಿ ಸಿನಿಯರ್ ಮೋಷ್ಟ ವೈದ್ಯರಿದ್ದರು ಒತ್ತಡಕ್ಕೆ ಮಣಿದು ಅನುಭವವೆ ಇಲ್ಲದಾ ಜೂನಿಯರ ವೈದ್ಯರಿಗೆ ಅಧಿಕಾರ ಹಂಚಿಕೆಯಾದರೆ ಯಾವ ರೀತಿಯಲ್ಲಿ ಪ್ರಮಾದ ಉಂಟಾಗುತ್ತದೆ ಎಂಬುವುದನ್ನು ನಾವು ನಿಮಗೆ ಮನದಟ್ಟು ಮಾಡುತ್ತಿದ್ದೆವೆ

ಈಗ ತಡವಾಗಿಯಾದರು ಆರೋಗ್ಯ ಇಲಾಖೆಗೆ ಜ್ಞಾನೋದಯವಾದಂತೆ ತೋರುತ್ತದೆ ಅಧಿಕಾರವನ್ನು ಹಿರಿಯ ವೈದ್ಯರೆ ವಹಿಸಿಕೊಳ್ಳಬೇಕು ಎಂಬ ಖಡಕ್ ಆದೇಶವನ್ನು ನಿಡಿದೆ ಆದರೆ ಈ ಖಡಕ್ ಆದೇಶ ಎಷ್ಟರ ಮಟ್ಟಿಗೆ ಭಟ್ಕಳ ತಾಲೂಕ ಸರಕಾರಿ ಆಸ್ಪತ್ರೆಯಲ್ಲಿ ಜಾರಿಗೆ ಬರುತ್ತದೆ ಅಥವಾ ಈ ಆದೇಶ ಕೇವಲ ಆದೇಶವಾಗಿ ಉಳಿಯುತ್ತದೆಯೋ ಎಂಬುವುದನ್ನು ಕಾದು ನೊಡಬೇಕಾಗಿದೆ

WhatsApp
Facebook
Telegram
error: Content is protected !!
Scroll to Top