ಬಡವರ ಸೇವೆಯೇ ಜೀವನದ ಗುರಿಯಾಗಲಿ ಸಚಿವ ಮಂಕಾಳು ವೈದ್ಯ

ಕಾರವಾರ: ಬಡವರ, ಅಸಹಾಯಕರ ಸೇವೆಯ ಜೀವನದ ಗುರಿಯಾಗಬೇಕು ಎಂದು ಜಿಲ್ಲಾ ಉಸ್ತುವ ಸಚಿವ ಮಂಕಾಳ ಎಸ್‌. ವೈದ್ಯ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಗರದ ಕಾಲುಬಾಗಿ ಪೊಲೀಸ್‌ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ದಿ.ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನೊಬ್ಬರ ಸೇವೆ ಮಾಡುವುದೇ ಜೀವನದ ದೊಡ್ಡ ಗುರಿ ಆಗಬೇಕು, ಈಗ ಜನರ ಮನಸ್ಸಿನಲ್ಲಿ ರಾಜಕಾರಣಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಹಿಂದುಳಿದ ವರ್ಗದವರಿಗೆ ಓದಲು ಸಹಾಯ ಸಹಕಾರ ಸಿಗಲು ದೇವರಾಜ ಅರಸು ಅವರು ಕಾರಣ, ಉಳುವವನೇ ಹೊಲದೊಡೆಯ ಕಾಯ್ದೆ ಜಾರಿಗೆ ತಂದವರು ದೇವರಾಜ ಅರಸು ಅವರು, ಬಡವರ ಪರ ಇಂಥ ಹಲವು ಯೋಜನೆಗಳಿಂದ ಅವರು ಇಂದೂ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು

ಅಧ್ಯಕ್ಷತೆ ವಹಿಸಿದ್ದ ಸತೀಶ್ ಶೈಲ್ ಮಾತನಾಡಿ ಅರಸುರವರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪಿಜಿ ವಿದ್ಯಾರ್ಥಿ ಸೋಮಲಿಂಗ ಬಿ. ಬಾಳಿಕಾಯಿ ತಳವಾರ, ಮೀನುಗಾರರ ಮುಖಂಡ ಬಾಲು ಜಿ. . ಜಿಪಂ ಸಿಇಒ ಈಶ್ವರ ಕುಮಾರ್ ಕಾಂದು ಎಎಸ್‌ ಪಿ.ಸಿ.ಟಿ, ಜಯಕುಮಾ‌ ತಹಸೀಲ್ದಾರ್ ನಿಶ್ಚಲ್ ನರೋನಾ, ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಜಿ.ಡಿ. ಮನೋಟ, ದಲಿತ ಸಂಘಟನೆಗಳ ಮುಖಂಡರಾದ ದೀಪಕ ಕುಡಾಳಕರ್, ಎಲಿಷಾ ಎಲಕಪಾಟಿ, ನಗರಸಭೆ ಸದಸ್ಯ ಹನುಮಂತ ತಳವಾರ, ಮಿನುಗಾರರ ಮುಖಂಡ ಬಾಬು ಜಿ ಅಂಬಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು .

WhatsApp
Facebook
Telegram
error: Content is protected !!
Scroll to Top