ಬಿಟ್ಟಿಯಾಗಿ ಸಿಕ್ಕಿದ್ದಲ್ಲಾ ನಮಗೆ ಸ್ವಾತಂತ್ರ್ಯ ಬಲಿದಾನಗಳ ಫಲವೇ ಸ್ವಾತಂತ್ರ್ಯ ಜಗದೀಶ ಕಾರಂತ

ಭಟ್ಕಳ: ವಿಶ್ವ ಹಿಂದು ಪರಿಷತ್ ಭಟ್ಕಳ ಮತ್ತು ಪರಿವಾರ ಸಂಘಟನೆಗಳ ಸಹಯೋಗದಲ್ಲಿ ಅಖಂಡ ಭಾರತ ಸಂಕಲ್ಪ ದಿವಸ ಸಭಾ ಕಾರ್ಯಕ್ರಮವನ್ನು ಇಲ್ಲಿನ ನಿಚ್ಚಲಮಕ್ಕಿ ಸಭಾಭವನದಲ್ಲಿ ಸೋಮವಾರದಂದು ಸಂಘದ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಕ್ಷಿಣ ಭಾರತದ ಕ್ಷೇತ್ರೀಯ ಸಂಚಾಲಕರು, ಸಂಘದ ವಕ್ತಾರರಾದ ಜಗದೀಶ ಕಾರಂತ ‘
ಸ್ವಾತಂತ್ರ್ಯ ನಂತರವೇ ಹುಟ್ಟಿ ಬಂದಿದವಾಗಿದ್ದಾರೆ. ಸ್ವಾತಂತ್ರ್ಯೋತ್ತರ ಭಾರತದ ನಂತರ ಹುಟ್ಟಿದವರಿಗೆ ಅಖಂಡ ಭಾರತದ ಕಲ್ಪನೆ ಪರಿಚಯಿಸಬೇಕಾಗಿದೆ. ಮಾತಿನಲ್ಲಿ ಕೇವಲ ಸ್ವಾತಂತ್ರ್ಯ ಸಿಕ್ಕಿತ್ತು ಎಂಬುದು ಸಾಮಾನ್ಯವಾಗಿದೆ ಹೊರತು ಯಾರಿಂದ ಸಿಕ್ಕಿದೆ ಎಂಬುದು ತಿಳಿಸಬೇಕಾಗಿದೆ. ದೇಶದ ಅಖಂಡ ಕಲ್ಪನೆ ನಮ್ಮಲ್ಲಿ ಜಾಗ್ರತಿಯಾಗಬೇಕು. ಸ್ವಾತಂತ್ರ್ಯ ನೀಡಿದ್ದು ಬ್ರಿಟಿಷ್ರು ಮತ್ತು ಸಿಗಲು ಕಾರಣ ಗಾಂಧೀ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ತಿಳಿಯಬೇಕಾಗಿದೆ.
ಅಂದು ದೇಶದ ಮೇಲಿನ ಪ್ರೀತಿ ಅಭಿಮಾನ ಕೆಚ್ಚು ಇದ್ದ ಕಾರಣ ಇಂದು ಪರಕೀಯರಿಂದ ಸ್ವಾತಂತ್ರ್ಯ ಸಿಕ್ಕಿದೆ. ಇಲ್ಲವಾಗಿದ್ದರೆ ನಾವೆಲ್ಲರು ಗುಲಾಮರಾಗಿರಬೇಕಾಗಿತ್ತು.
ನಾಗರಿಕರಿಗೆ ನನ್ನ ಹಕ್ಕುಗಳ ಬಗ್ಗೆ ಕಲ್ಪನೆ ಇದೆ ಆದರೆ ಕರ್ತವ್ಯದ ಪರಿಕಲ್ಪನೆ ಇಲ್ಲವಾಗಿದೆ. ಇದು ಸ್ವೇಚ್ಛಾಚಾರಕ್ಕೆ ಸಮ. ಸ್ವಾತಂತ್ರ್ಯದ ಬಗೆಗಿನ ವೀರಗಾದೆಯನ್ನು ಸ್ಮರಿಸಿ ನೆನಪಿಸಿಕೊಳ್ಳುವಂತೆ ಮಾಡಿ ಅದರಿಂದ ಸ್ವಾತಂತ್ರ್ಯ ನಂತರ ಹುಟ್ಟಿದವರಿಗೆ ಸ್ಪೂರ್ತಿ ನೀಡಬೇಕು. ಅಂದು ಮರಣ ಹೊಂದಿದ ಸಾವಿರಾರು ಮಂದಿ ಹೋರಾಟಗಾರರ ರಕ್ತ, ಜೀವದಿಂದ ಸ್ವಾತಂತ್ರ್ಯ ಸಿಕ್ಕಿರುವುದನ್ನು ಸದಾಕಾಲ ಸ್ಮರಿಸಿಕೊಳ್ಳಬೇಕು. ಇವೆಲ್ಲವು ಅವರ ತ್ಯಾಗ ಬಲಿದಾನ ಅರ್ಥಸಮರ್ಪಣೆಗೆ ನಾವೆಲ್ಲರು ಆದ ದಿನದಂದು ಅಂದರೆ 14 ಅಗಸ್ಟ ಮಧ್ಯರಾತ್ರಿ ಸಿಕ್ಕಿ ಸ್ವಾತಂತ್ರ್ಯ ದ ದಿನದಂದು ನಾವೆಲ್ಲರು ಬೆಲೆ ನೀಡಬೇಕು.
ನಿಜವಾಗಿ ಸ್ವಾತಂತ್ರ್ಯದ ಹೋರಾಟಕ್ಕೆ ಬಲಿದಾನ ಮಾಡಿದವರ ಜಯಘೋಷ ಸ್ಮರಣೆ ಬದಲು ಮಹಾತ್ಮ ಗಾಂಧಿ ಜವಹರಲಾಲ್ ನೆಹರು ಸೇರಿದಂತೆ ಇನ್ನುಳಿದ ವರ ಹೆಸರಿನಲ್ಲಿ ಜಯಘೋಷ ನಡೆಯುತ್ತದೆ. ವೀರ ಸಾವರ್ಕರ್, ಜಗತ್ ಸಿಂಗ, ಚಂದ್ರಶೇಖರ ಆಜಾದ ಅವರ ಹೆಸರಿನ ಜಯಘೋಷವು ಎಲ್ಲಿಯೂ ಮೊಳಗುವುದಿಲ್ಲ ಇದು ನಮ್ಮ ದೇಶದ ಪರಿಸ್ಥಿತಿ.

ನೆಹರು ಮತ್ತು ಗಾಂಧಿ ಅವರು ಒಂದು ದಿನವು ಬಿಳಿ ಬಟ್ಟೆಯನ್ನು ಮಣ್ಣು ಮಾಡಿಕೊಳ್ಳದವರು ಇವರು. ಇವರ ಹೆಸರಿನಲ್ಲಿ ದೇಶದಲ್ಲಿ ಮಕ್ಕಳು, ಮೊಮ್ಮಕ್ಕಳು ಮರಿಮಕ್ಕಳ ಹೆಸರಿನಲ್ಲಿ ಜಯಘೋಷ ನಡೆಯುತ್ತಿದೆ ಎಂಬುದು ಶೋಚನೀಯ. ಸ್ವಾತಂತ್ರ್ಯದ ಬಳಿಕವು ದೇಶದ ಸುಧೀರ್ಘ ಹೋರಾಟದ ನೈಜತೆಯನ್ನು ಜನರಿಗೆ ಸರಿಪಡಿಸಿ ತಿಳಿಸಿಬೇಕಾದ ನಾವುಗಳು ಮುಂದಿನ ಪೀಳಿಗೆಗೆ ಏನು ಹೇಳಲು ಹೊರಟಿದ್ದೇವೆ.
ಸ್ವಾತಂತ್ರ್ಯ ಸಂಗ್ರಾಮದ ನೈಜ ತ್ಯಾಗಿಗಳಿಗೆ ನಮ್ಮ ಸ್ಮರಣೆ ಇಂದೇ ಮಾಡಬೇಕು. ನೈಜವಾಗಿ ಬ್ರಿಟಿಷರಿಂದ ಸಾಕಷ್ಟು ಚಿತ್ರಹಿಂಸೆ ಅನುಭವಿಸಿದವರಿಗೆ ನಾವೆಲ್ಲರೂ ನೆನಪಿಸಿಕೊಳ್ಳಬೇಕಾದ ಕರ್ತವ್ಯ ನಮ್ಮದು. ಭಾರತದ ವಿಭಜನೆ ಯಾವುದರ ಆಧಾರದ ಮೇಲೆ ಮಾಡಿದ್ದಾರೆ ಎಂಬುದು ಮಹಾ ದ್ರೋಹ.
ಹಿಂದುಗಳಿಗೆ ಹಿಂದುಸ್ತಾನ ಮುಸ್ಲಿಂಮರಿಗೆ ಪಾಕಿಸ್ತಾನ ಇದು ಮಹಮ್ಮದ್ ಅಲಿ ಜಿನ್ನಾ ಹೇಳಿದ್ದಾರೆ. ಅಲ್ಲಿ ತನಕ ಹಿಂದು ಮುಸ್ಲಿಂ ಬಾಯ್ ಬಾಯ್ ಅಂತ ಹೇಳಿದ್ದರು ಅದು ಅಂದು ಅದರ ಮಾರನೇ ದಿನವೇ ಹಿಂದುಗಳ ಮಾರಣ ಹೋಮವನ್ನು ಪಾಕಿಸ್ತಾನ ಬಾಂಗ್ಲಾದೇಶದಲ್ಲಿ ನಡೆಸಿದರು.
2047_ ಕ್ಕೆ ಭಾರತವನ್ನು ಇಸ್ಲಾಮೀಕರಣ ಮಾಡುವ ಉದ್ದೇಶ ಮುಸ್ಲಿಂರಾಗಿದ್ದಾರೆ. ಇದಕ್ಕೆ ಉಪ್ಪು ಹಾಕುವವರು ಸೆಕ್ಯುಲರ. 1947ರ ಅವಧಿಯಲ್ಲಿ ದೇಶ ವನ್ನು ವಿಭಜಿಸಲು ಅವಕಾಶ ಮಾಡಿದವರು 2047ಕ್ಕೆ ಇಸ್ಲಾಂಮೀಕರಣಕ್ಕೆ ಸಹಕರಿಸುತ್ತಿರುವವರು ಇಂದಿನ ಸಂತತಿಗಳು ದಲ್ಲಾಳಿಗಳು ಬ್ರೋಕರ್ಸ ಪಿಂಪುಗಳು ಎಂದು ಹೇಳಿದರು.
ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಂಕರ ಶೆಟ್ಟಿ ಮಾತನಾಡಿದ ಅವರು ‘ ಹಿಂದು ಸಮಾಜ ಯಾವ ರೀತಿ ಬದುಕಬೇಕೆಂಬ ದಾರಿಯನ್ನು ತಮ್ಮ ಭಾಷಣದಲ್ಲಿ ತಿಳಿಸಿದ ಜಗದೀಶ ಕಾರಂತರ ಮಾತನ್ನು ನೆನಪಿಸಿ ಸ್ಮರಿಸಿ ಸಾಗಬೇಕು.
ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ
ಸ್ವಾಗತಿಸಿದರು. ಆರ್.ಎಸ್.ಎಸ್. ಸಂಘದ ಕಾರ್ಯಕರ್ತ ಯಶೋಧರ ನಾಯ್ಕ ವಂದಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ತಾಲ್ಲೂಕು ಸದಸ್ಯರಾದ ರಾಮನಾಥ ಬಳೆಗಾರ, ಸುರೇಶ ಆಚಾರ್ಯ, ಬಿಜೆಪಿಯ ಮುಖಂಡರಾದ ಕ್ರಷ್ಣ ನಾಯ್ಕ ಆಸರಕೇರಿ, ದಿನೇಶ ನಾಯ್ಕ, ರಾಜೇಶ ನಾಯ್ಕ, ಗೋವಿಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ ಸೇರಿದಂತೆ ವಿಶ್ವ ಹಿಂದು ಪರಿಷತ ಕಾರ್ಯಕರ್ತರು, ಆರ್.ಎಸ್.ಎಸ್. ಕಾರ್ಯಕರ್ತರು ಇದ್ದರು.

WhatsApp
Facebook
Telegram
error: Content is protected !!
Scroll to Top