ಭಟ್ಕಳ ತಾಲೂಕ ಕ್ರೀಡಾಂಗಣದಲ್ಲಿ ವಿಜ್ರಂಬಣೆಯಿಂದ 77 ನೇ ಸ್ವಾತಂತ್ರ್ಯ ದಿನಾಚರಣೆ

ಪಥಸಂಚನವನ್ನು ವೀಕ್ಷಣೇ ಮಾಡಿದ ಸಹಾಯಕ ಆಯುಕ್ತೆ ನಯನಾ

ಭಟ್ಕಳ : ನಮಗೆ ಸ್ವಾತಂತ್ರ್ಯ ದೊರೆತಿರುವುದು ನಮ್ಮ ಹಿರಿಯರ ತ್ಯಾಗದ ಪ್ರತೀಕ ಇದನ್ನು ನಾವು ಅರಿತು ನಡೆದುಕೊಳ್ಳ ಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದು ತಾಲೂಕ ಸಹಾಯಕ ಆಯುಕ್ತೆ ನಯನಾ ಅವರು ಹೇಳಿದರು .

ಅವರು 77 ನೇ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೊಹಣವನ್ನು ಮಾಡಿ ಮಾತನಾಡುತ್ತ ಇಂದು ನಾವು ನಮ್ಮ ದೇಶದಲ್ಲಿ ನೆಮ್ಮದಿಯಲ್ಲಿ ಬದುಕುತ್ತಿದ್ದೆವೆ ಎಂದರೆ ಅದಕ್ಕೆ ಕಾರಣ ನಮ್ಮ ಸ್ವಾತಂತ್ರ್ಯ ಹೊರಾಟಗಾರರ ತ್ಯಾಗ ಬಲಿದಾನವೆ ಕಾರಣವಾಗಿದೆ ಇದನ್ನು ನಾವು ಉಳಿಸಿ ಕೊಂಡುಹೊಗಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ನಾವು ಯಾವತ್ತು ದೇಶ ಕಟ್ಟುವಂತ ಕೆಲಸವನ್ನು ಮಾಡಬೇಕು ಇದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ನಾವು ಸದಾ ದೇಶದ ಚಿಂತನೆಯನ್ನೇ ಮಾಡೋಣ ಎಂದು ಹೇಳಿದರು .

ಕಾರ್ಯಕ್ರಮದಲ್ಲಿ ತಾಲೂಕಿನ ವಿವಿದ ಶಾಲೆಗಳಿಂದ ವಿಧ್ಯಾರ್ಥಿಗಳು ಪಥಸಂಚಲನದಲ್ಲಿ ಬಾಗವಹಿಸಿದ್ದರು ಅತ್ಯುತ್ತಮ ಪ್ರದರ್ಶನ ನಿಡಿದ ಶಾಲೆಗಳ ವಿಧ್ಯಾರ್ಥಿ ತಂಡಕ್ಕೆ ಬಹುಮಾನವನ್ನು ನಿಡಲಾಯತು ಮಾಜಿ ಸೈನಿಕರನ್ನು ಗೌರವಿಸಿ ಸನ್ಮಾನಿಸಲಾಯಿತು

ವಿವಿದ ಸರಕಾರಿ ಇಲಾಖೆಯ ನೌಕರರ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಗೌರವಿಸಲಾಯಿತು.

ಈ ಸಂದರ್ಬದಲ್ಲಿ ತಾಲೂಕ ತಹಶಿಲ್ದಾರರು ತಿಪ್ಪೆಸ್ವಾಮಿ , ತಾಲೂಕ ಪಂಚಾಯತ್ ಮುಖ್ಯಾಧಿಕಾರಿ ಪ್ರಭಾಕರ್ ಚಿಕ್ಕನ ಮನೆ, ಡಿ ವೈ ಎಸ್ ಪಿ , ಶ್ರಿಕಾಂತ ನೌಕರ ಸಂಘದ ಅಧ್ಯಕ್ಷ ಮೊಹನ ನಾಯ್ಕ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top