ಭಟ್ಕಳ ಬೆಳ್ಕೆ ಗ್ರಾಮ ಪಂಚಾಯತ್‌ ಕಾಗ್ರೇಸ್‌ತೆಕ್ಕೆಗೆ

ಭಟ್ಕಳ: ತಾಲೂಕಿನ ಬೆಳ್ಕೆ ಗ್ರಾಮ ಪಂಚಾಯತ್‌ ಎರಡನೆ ಅವದಿಯ ಅಧ್ಯಕ್ಷರಾಗಿ ಜಗದೀಶ ಎಲ್‌ ನಾಯ್ಕ ಹಾಗೆ ಉಪಾಧ್ಯಕ್ಷರಾಗಿ ಜಾನಕಿ ಮೊಹನ್‌ ನಾಯ್ಕ ಆಯ್ಕೆಯಾಗಿದ್ದು ಬೆಳ್ಕೆ ಗ್ರಾಮ ಪಂಚಾಯತ್‌ ಮರಳಿ ಕಾಂಗ್ರೇಸ್‌ ತೆಕ್ಕೆಗೆ ಬಂದಾಂತಾಗಿದೆ

ಹೌದು ವಿಕ್ಷಕರೆ: ಬೆಳ್ಕೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ತುಂಬ ಕುತೂಹಲಕ್ಕೆ ಕಾರಣವಾಗಿದ್ದು ಗುರುವಾರವಾದ ಇಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಿಂದ ಕುತೂಹಲಕ್ಕೆ ತೆರೆ ಎಳೆದಂತಾಗಿದೆ ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿ ಜಗದೀಶ ಲಚ್ಮಯ್ಯ ನಾಯ್ಕ ಹಾಗು ಉಪಾಧ್ಯಕ್ಷರಾಗಿ ಜಾನಕಿ ಮೊಹನ ನಾಯ್ಕ ಅವರು ಆಯ್ಕೆಯಾಗಿದ್ದಾರೆ ಒಟ್ಟು 18 ಜನ ಸದಸ್ಯರಲ್ಲಿ 11 ಜನ ಸದಸ್ಯರು ಜಗದೀಶ ನಾಯ್ಕ ಮತ್ತು ಜಾನಕಿ ನಾಯ್ಕ ಪರ ಮತಚಲಾಯಿಸಿದರೆ 7 ಜನ ಸದಸ್ಯರು ಇವರ ವಿರುದ್ದ ಮತ ಚಲಾಯಿಸಿದ್ದಾರೆ

ಈ ಸಂದರ್ಬದಲ್ಲಿ ಅಧ್ಯಕ್ಷಗಾದಿಯನ್ನು ಏರಿದ ಜಗದೀಶ ನಾಯ್ಕ ಮಾತನಾಡುತ್ತ ಇಂದು ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಲಾಗಿದೆ ಇದರ ಎಲ್ಲಾ ಶ್ರೇಯಸ್ಸು ಸಚಿವ ಮಂಕಾಳು ವೈದ್ಯರಿಗೆ ಸಲ್ಲಬೇಕಾಗಿದೆ ಎಲ್ಲೋ ಇದ್ದ ನನ್ನನ್ನು ಮಂಕಾಳ ವೈದ್ಯರು ರಾಜಕಿಯಕ್ಕೆ ಕೈ ಹಿಡಿದು ಕರೆತಂದಿದ್ದಾರೆ ಅವರ ಆಶಿರ್ವಾದ ನಾನು ನನ್ನ ಕೊನೆಯ ಉಸಿರು ಇರುವವರೆಗೂ ನೆನಪಿನಲ್ಲಿ ಇಟ್ಟುಕೊಳ್ಳುತ್ತೆನೆ ಎಂದು ಹೇಳಿದರು

ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿ ಶಂಸುದ್ದೀನ್‌ ತುಂಬ ಅಚ್ಚುಕಟ್ಟಾಗಿ ದಕ್ಷತೆಯಿಂದ ಯಾವುದೆ ಲೋಪ ಇಲ್ಲದಂತೆ ನಡೆಸಿಕೊಟ್ಟರು ಪಂಚಾಯತ್‌ ಅಭಿವೃದ್ದಿ ಅಧಿಕಾರಿಗಳು ಚಂದ್ರಶೇಕರ್‌ ಗ್ರಾಮ ಪಂಚಾಯತ್‌ ಸೆಕ್ರೇಟರಿ ವಿಧ್ಯಾ ವಿಶ್ವನಾಥ ಮಠದ, ಕ್ಲರ್ಕ ಕವಿತಾ ನಾರಾಯಣ ನಾಯ್ಕ ಚುನಾವಣೆಯ ಸಂದರ್ಬದಲ್ಲಿ ಅಚ್ಚುಕಟ್ಟಾಗಿ ಯಾವುದೇ ಪಕ್ಷಪಾತವಿಲ್ಲದೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು

ಈ ಸಂದರ್ಬದಲ್ಲಿ ಪಂಚಾಯತ್‌ ಸರ್ವಸದಸ್ಯರು ಗ್ರಾಮ ಪಂಚಾಯತ್‌ ಸಿಬ್ಬಂದಿ ವರ್ಗದವರಾದ ಮಾರುತಿ ನಾಯ್ಕ ದತ್ತಾ ನಾಯ್ಕ ನಾಗವೇಣಿ ನಾಯ್ಕ ಮತ್ತಿತರರು ಇದ್ದರು

WhatsApp
Facebook
Telegram
error: Content is protected !!
Scroll to Top