ಬೀನಾ ವೈದ್ಯ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲಿನಲ್ಲಿ ವೆಜಿಟೆಬಲ್ ಡೇ

ಬೀನಾ ವೈದ್ಯ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮುರುಡೇಶ್ವರ ದಲ್ಲಿ ವೆಜಿಟೆಬಲ್ ಡೇ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತಾ ರವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ,ಇಂದಿನ ದಿನಗಳಲ್ಲಿ ಹಸಿರು ತರಕಾರಿಗಳ ಸೇವನೆ ಬಹಳ ‌ಮುಖ್ಯವಾದದ್ದು ಹಾಗೂ ಹಸಿರು ತರಕಾರಿ ಸೇವನೆಯ ಮುಖಾಂತರ ಆರೋಗ್ಯದ ಕುರಿತು ಕಾಳಜಿಯನ್ನು ವಹಿಸಬೇಕು ಎನ್ನುವ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ನಂತರದಲ್ಲಿ ಮುದ್ದು ಮಕ್ಕಳು ವಿವಿಧ ತರಕಾರಿಗಳ ಮಹತ್ವವನ್ನು ಹಾಡು ,ನೃತ್ಯ ,ಭಾಷಣದ ಮೂಲಕ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಪ್ರಾಂಶುಪಾಲರಾದ ಜಗನ್ನಾಥ ಚನ್ನಾಕೆರೆಯವರು ಕಾರ್ಯಕ್ರಮದ ಮಹತ್ವತೆಯ ಕುರಿತು ಮಾತನಾಡಿದರು.ವೇದಿಕೆ ‌ಮೇಲೆ  ಪ್ರಾಧ್ಯಾಪಕರಾದ Nayeem Gori ಯವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಪಾಲ್ಗೊಂಡಿದ್ದರು.
ಶಿಕ್ಷಕಿಯಾದ ಹಂಸಾರವರು ಎಲ್ಲರನ್ನೂ ಸ್ವಾಗತಿಸಿದರು‌.ಶ್ರೀಮತಿ ಪದ್ಮಾರವರು ಎಲ್ಲರನ್ನೂ ವಂದಿಸಿದರು.ಸಂಸ್ಥೆಯ ಪೂರ್ವ ಪ್ರಾಥಮಿಕ ಶಿಕ್ಷಕಿಯಾದ ಶ್ರೀಮತಿ ಮೊಗೇರವರು ಕಾರ್ಯಕ್ರಮವನ್ನು ನಿರ್ವಹಿಸಿದರು.

WhatsApp
Facebook
Telegram
error: Content is protected !!
Scroll to Top