ನಿವೇಷನಕ್ಕಾಗಿ 14 ವರ್ಷ ಕಛೇರಿಗೂ ಮನೆಗೂ ಚಪ್ಪಲಿ ಸವೆಸಿದರು ನಿವೇಶನ ವಂಚಿತ ಹಜರತ್‌ ಅಲಿ

ದೇವರು ಕೊಟ್ಟರು ಪೂಜಾರಿ ಕೊಡ ಎಂಬಂತಾದ ಪರಿಸ್ಥಿತಿ

ಶಿಕಾರಿಪುರ: ಹಜರತ್‌ ಅಲಿ 14 ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿಸಲ್ಲಿಸುತ್ತಲೆ ಬಂದಿದ್ದು ಅಧಿಕಾರಿಗಳ ಬೇಜವಾಬ್ದಾರಿ ಅಧಿಕಾರ ಲೊಪದಿಂದಾಗಿ ಬಡವರಾದ ಹಜರತ್‌ ಅಲ್ಲಿ ಹತಾಶರಾಗಿ ತನ್ನ ಅಂಗವಿಕಲ ಮಗನೊಂದಿಗೆ ಪ್ರತಿಭಟನೆಗೆ ಇಳಿದಿರುವ ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ಶಿಕಾರಿಪುರದಲ್ಲಿ ನಡೆದಿದೆ

ಹೌದು ವಿಕ್ಷಕರೇ ಶಿವಮೊಗ್ಗ ಶಿಕಾರಿಪುರದಲ್ಲಿ ಈ ಸರಕಾರಿ ಅಧಿಕಾರಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ ಇವರು ಸರಕಾರಿ ಕೆಲಸ ಮಾಡುತ್ತಾರೋ ಅಥವಾ ಇನ್ಯಾವ ಕೆಲಸ ಮಾಡುತ್ತಾರೋ ಆ ಭಗವಂತನಿಗೆ ಗೊತ್ತು ಇವರಿಗೆ ತಾವು ತೆಗೆದುಕೊಳ್ಳುವ ಸರಕಾರದ ಹಣ ತಿನ್ನುವ ಸರಕಾರಿ ಅನ್ನಕ್ಕೆ ಸ್ವಲ್ಪವಾದರು ಋಣಿಯಾಗಿರಬೇಕು ಎಂಬ ಕನಿಷ್ಟಮಟ್ಟದ ಮಾನವಿಯತೆಯು ಇಲ್ಲದಂತ ದಂಡಪಿಂಡಗಳು ಶಿಕಾರಿಪುರದಲ್ಲಿ ಇದ್ದಾರೆ ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಶಿಕಾರಿಪುರದ ಮೂಲತಃ ಹಾವೇರಿ ಜಿಲ್ಲೆಯ ಹಿರೇಕೇರೂರಿನ ಹಜರತ್‌ ಅಲಿ ಎಂಬ ಬಡ ಅಮಾಯಕ ಪತ್ನಿ ಪುತ್ರಿ ಹಾಗು ಶೇಕಡಾ 90 ರಷ್ಟು ಅಂಗವಿಕಲತೆಯಿಂದ ಬಳಲುತ್ತಿರುವ ತನ್ನ ಪುತ್ರನೊಂದಿಗೆ ಆಸ್ರಯ ಬಡಾವಣೆಯ ಬಾಡಿಗೆ ಮನೆಯಲ್ಲಿ ಕಳೆದ ೧೪ ವರ್ಷಗಳಿಂದ ವಾಸಿಸುತ್ತಿದ್ದು ಸ್ವಂತ ನಿವೇಶನಕ್ಕಾಗಿ ಕಚೇರಿಯಿಂದ ಕಚೇರಿಗೆ ಸುತ್ತಾಡುತ್ತಾ ಅರ್ಜಿಸಲ್ಲಿಸುತ್ತಲೆ ಇದ್ದರು ಆದರೆ ಇಲ್ಲಿ ಹಜರತ್‌ ಅಲಿ ಅವರ ಚಪ್ಪಲಿಗಳು ಒಂದರಮೆಲೊಂದ್ದರಂತೆ ಸವೇದುಹೊದವೆ ಹೋರತು ನಿವೇಷನ ಮಾತ್ರ ಮರೀಚಿಕೆಯಾಗೆ ಉಳಿಯಿತು ಇನ್ನು

ಹಜರತ್‌ ಅಲಿ ಕರೋನಾ ಕಾಲದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದರು ಈಗ ಗಾರೆ ಕೆಲಸ ಮಾಡಿಕೊಂಡೊದ್ದಾರೆ ದೇವರಿಗೆ ಹಚ್ಚುವ ಊದುಬತ್ತಿಯನ್ನು ಮಾಡಿ ಮಾಡಿ ಸಂಸಾರ ನಿಭಾಯಿಸುತ್ತಿದ್ದ ಆತನ ಪತ್ನಿ ಕೂಡ ಈಗ ಅನಾರೋಗ್ಯ ಪಿಡಿತರಾಗಿ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಪುತ್ತಿ ಸರಕಾರಿ ಪ್ರೌಡ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದಾಳೆ ಕುಟುಂಬದ ಜವಬ್ದಾರಿ ಹಜರತ್‌ ಅಲಿ ಒಬ್ಬರ ಮೇಲೆ ಬಿದ್ದಿದ್ದು ಈಗ ಮೂಲಬೂತ ಸೌಕರ್ಯವಿಲ್ಲದೆ ಇವರ ಕುಟುಂಬ ಕರುಣಾಜನಕ ಪರಿಸ್ಥಿತಿಯನ್ನು ಎದುರಿಸುತ್ತಿದೆ 14 ವರ್ಷಗಳಿಂದ ನಿವೇಷನಕ್ಕಾಗಿ ಅರ್ಜಿ ಸಲ್ಲಿಸುತ್ತಲೆ ಬಂದಿದ್ದಾರೆ ಆದರೆ ಇವರ ಅಳಲು ಗೋಳನ್ನು ಯಾರು ಆಲಿಸುವವರೆ ಇಲ್ಲವಾಗಿದ್ದಾರೆ

ಈ ಹಿಂದೆ ಇವರು ನಿವೇಶನಕ್ಕಾಗಿ ೪೦ ಭಾರಿ ಅರ್ಜಿ ಸಲ್ಲಿಸಿದ್ದಾರೆ ಹತ್ತಾರು ಭಾರಿ ಶಿವಮೊಗ್ಗದ ಕಚೇರಿಗೂ ಬೇಟಿಕೊಟ್ಟು ಅರ್ಜಿಸಲ್ಲಿಸಿದ್ದಾರೆ ಮೂರ್ನಾಲ್ಕು ಭಾರಿ ಜನತಾ ದರ್ಶನದಲ್ಲೂ ಅಂದಿನ ಸಿ ಎಂ ಕುಮಾರ ಸ್ವಾಮಿ ಅವರನ್ನು ಬೇಟಿಯಾಗಿ ನಿವೇಷನಕ್ಕಾಗಿ ಮನವಿ ಮಾಡಿದ್ದಾರೆ ಮನವಿ ಸ್ವಿಕರಿಸಿದ ಅಂದಿನ ಸಿ ಎಂ ತಕ್ಷಣ ನಿವೇಷನ ಒದಗಿಸುವಂತೆ ಸೂಚನೆ ನೀಡಿದ್ದಾರೆ ಆದರೆ ಈ ದಪ್ಪ ಚರ್ಮದ ಅಧಿಕಾರಿಗಳು ತಕ್ಷಣ ಇರಲಿ ದಶಕ ಕಳೆದರು ಬಡವನ ಗೋಳನ್ನು ಆಲಿಸಲೆ ಇಲ್ಲ ಮೂಲಬೂತ ಸೌಕರ್ಯ ಒದಗಿಸಲೆ ಇಲ್ಲಾ

ಇನ್ನು ಈ ಶಿಕಾರಿಪುರ ಪುರಸಭಾ ಮುಖ್ಯಾಧಿಕಾರಿಯೋ ಅವರ ಕರ್ತವ್ಯ ನಿಷ್ಟೇಯೋ ಹಜರತ್‌ ಅಲಿ ನಮಗೆ ಮೂಲಭೂತ ಸೌಕರ್ಯವೆ ಇಲ್ಲವಾಗಿದೆ ತನಗೆ ನಿವೇಷನ ಒದಗಿಸಿ ಎಂದು 40 ಭಾರಿ ಅರ್ಜಿ ಸಲ್ಲಿಸಿದರೂ ಕೂಡ ಈ ಪುರಸಭಾ ಅಧಿಕಾರಿ ಆ ಬಡ ಅಮಾಯಕನ ಅರ್ಜಿಗೆ ಕಸದ ಬುಟ್ಟಿಯ ಭಾಗ್ಯವನ್ನು ಒದಗಿಸುವ ಮೂಲಕ ಬಂಡತನ ಪ್ರದರ್ಶಿಸಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲಾ ಇದರಿಂದ ರೋಸಿಹೋದ ಹಜರತ್‌ ಅಲಿ ತನ್ನ ಅಂಗವಿಕಲ ಮಗನೊಂದಿಗೆ ನಗರದಾಧ್ಯಂತ ಪ್ರತಿಭಟನೆಗೆ ಇಳಿದಿದ್ದಾರೆ ಆದರೂ ಕೂಡ ಈ ಶಿರಾಲಿ ಪುರದ ಜಿಲ್ಲಾಧಿಕಾರಿಗಳಾಗಿರಬಹುದು ಪುರಸಭಾ ಮುಖ್ಯಾಧಿಕಾರಿಯಾಗಿರಬಹುದು ಕೇರೆ ಎನ್ನುತ್ತಿಲ್ಲಾ ದೇಶದ ಅಭಿವೃದ್ದಿಯ ಬಗ್ಗೆ ಉದ್ದುದ್ದ ಮಾತನಾಡುವ ಶಿವಮೊಗ್ಗ ಜಿಲ್ಲೆ ಮತ್ತು ಶಿಕಾರಿ ಪುರದ ಈ ರಾಜಕಾರಣಿಗಳಿಗೆ ಮತ್ತು ಜನ ಪ್ರತಿನಿದಿಗಳಿಗೆ ಸ್ವಲ್ಪಕೂಡ ಮಾನ ಮರ್ಯಾದೆ ಇಲ್ಲವೆ ವೋಟು ಪಡೆಯುವಾಗ ಮತದಾರನ ಕಾಲಿಗೆ ಬೀಳುವ ನಿಮಗೆ ಈ ಬಡವನ ಗೋಳು 14 ವರ್ಷಗಳಿಂದ ಕಾಣಲೆ ಇಲ್ಲವೆ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ

ಈ ಬಗ್ಗೆ ಹಜರತ್‌ ಅಲಿಯವರನ್ನು ಮಾತನಾಡಿಸಿದಾಗ ಅಂಗವಿಕಲ ಪುತ್ರನೊಂದಿಗೆ ಡಿ ಸಿ ಕಚೇರಿ ಶಿಕಾರಿಪುರ ಪುರಸಭೆ ಹೀಗೆ ನಗರದ ಅನೇಕ ಕಡೆ ನಿವೇಶನಕ್ಕಾಗಿ ಅಂಗವಿಕಲ ಮಗನೊಂದಿಗೆ ಪ್ರತಿಭಟನೆಗೆ ಇಳಿದರು ಕೂಡ ಯಾವುದೇ ಪ್ರಯೋಜನವಾಗಲಿಲ್ಲ ಸೂರಿಗಾಗಿ ದಿನನಿತ್ಯ ನರಕ ಯಾತನೆಯನ್ನು ಅನುಭವಿಸುತ್ತಿದ್ದೆವೆ ನನ್ನ ಹೊರಾಟ ನ್ಯಾಯಯುತವಾಗಿ ಮುಂದುವರಿಯುತ್ತದೆ ಎಂದು ಕಣ್ಣಿರಿಡುತ್ತಿದ್ದಾರೆ

ಹಜರತ್‌ ಅಲಿಯ ಇಂದಿನ ದಾರುಣ ಪರಿಸ್ಥಿತಿಗೆ ನೇರಹೋಣೆ ಈ ಹೋಣೆಗೇಡಿ ಅಧಿಕಾರಿಗಳೆ ಆಗಿದ್ದಾರೆ ನಮ್ಮ ಈ ವರದಿಯ ಉದ್ದೇಶ ಬಡ ಅಮಾಯಕ ಹಜರತ್‌ ಅಲಿಯ ಸಂಸಾರಕ್ಕೆ ತಲೆಯ ಮೆಲೊಂದು ಸೂರನ್ನು ಒದಗಿಸುವುದಾಗಿದೆ ಈ ಬಗ್ಗೆ ಶಿಕಾರಿಪುರದ ಸಾರ್ವಜನಿಕರು ಹಜರತ್‌ ಅಲಿಯ ಬೆಂಬಲಕ್ಕೆ ನಿಲ್ಲಬೇಕಾಗಿದೆ ಮತ್ತು ಸರಕಾರದಿಂದ ಆತನಿಗೊಂದು ಸೂರನ್ನು ಮಂಜುರು ಮಾಡಲು ಆಗ್ರಹಿಸಬೇಕಾಗಿದೆ ಹಜರತ್‌ ಅಲಿಗೆ ಸೂರು ನಿರ್ಮಾಣವಾದರೆ ನಮ್ಮ ಕರಾವಳಿ ಸಮಾಚಾರದ ಈ ವರದಿಗೆ ಸಾರ್ಥಕತೆ ಒದಗುತ್ತದೆ ಎನ್ನುವುದು ನಮ್ಮ ಮಾತಾಗಿದೆ

WhatsApp
Facebook
Telegram
error: Content is protected !!
Scroll to Top