ಅಭ್ಯುದಯ ಮಹಿಳಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರಿಗೆ ಸಭೆ ನಡೆಸಲು ಅನುವುಮಾಡಿಕೊಟ್ಟ  ಸಹಕಾರಿ ಇಲಾಖೆಯ  A R

ಅಹೋರಾತ್ರಿ ಪ್ರತಿಭಟನೆ ಕೈಬಿಟ್ಟ ಅಧ್ಯಕ್ಷರ ತಂಡ

ಭಟ್ಕಳ: ಪಟ್ಟಣದ ಅಭ್ಯುದಯ ಮಹಿಳಾ ಪತ್ತಿನ ಸಹಕಾರಿ ಸಂಘ ನಿಯಮಿತದಲ್ಲಿ ನೂತನ ಪಧಾಧಿಕಾರಿಗಳಿಗೆ ಮಿಟಿಂಗ್ ನೋಟಿಸ್ ನೀಡಿ ಮಿಟಿಂಗ್ ನಡೆಸಲು ಅವಕಾಶ ನೀಡದ ಕಾರಣಕ್ಕೆ ಆಡಳಿತ ಮಂಡಳಿ ಅಧ್ಯಕ್ಷರ ಬಣದ ೭ ನಿರ್ದೇಶಕರು ಅಹೊರಾತ್ರಿ ಧರಣಿ ನಡೆಸಿ ಕೊನೆಗೂ ಸಭೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.


ಇತ್ತೀಚಿಗೆ ಇಲ್ಲಿನ ಮಹಿಳಾ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿತ್ತು. ಕಳೆದ ೩೩ವರ್ಷಗಳಿಂದ ಅಧ್ಯಕ್ಷ ಗಾದಿಯಲ್ಲಿದ್ದ ಲಕ್ಷಿ  ಮಂಜಪ್ಪ ನಾಯ್ಕ ಮತ್ತು ನಯನಾ ನಾಗೇಶ ನಾಯ್ಕ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದರು. ಅದರಲ್ಲಿ ನಯನಾ ನಾಯ್ಕ ಅವರು ವಿಜಯಿಯಾಗಿದ್ದರು. ಬಳಿಕ ಸೋಮವಾರ ಆಡಳಿತ ಮಂಡಳಿಯ ಸಭೆ ನಡೆಸಲು ಮಿಟಿಂಗ್ ಕರೆದಿದ್ದರು. ಇನ್ನೇನು ಮಿಟಿಂಗ್ ಆರಂಭವಾಗಬೇಕು ಎನ್ನುವಷ್ಟರಲ್ಲಿ ಲಕ್ಷಿö್ಮÃ ಮಂಜಪ್ಪ ನಾಯ್ಕ ಬಣದ ಸದಸ್ಯರಾದ ಚಂದ್ರಪ್ರಭಾ ಬಾಸ್ಕರ ನಾಯ್ಕ, ಲಕ್ಷಿö್ಮÃ ದುರ್ಗಪ್ಪ ನಾಯ್ಕ, ಲಕ್ಷಿö್ಮÃ ಮೋಹನ ಗೊಂಡ, ಬಿಬಿ ಹಾಜಿರಾ, ಭವಾನಿ ನಾಗರಾಜ ನಾಯ್ಕ ಮಿಟಿಂಗ್ ನಡೆಸದಂತೆ ಪ್ರಧಾನ ವ್ಯವಸ್ಥಾಪಕರಿಗೆ ಒತ್ತಡ ಹೇರಿದ್ದರು. ಈಗಾಗಲೆ ಹಾಲಿ ೭ ಮಂದಿಯ ನಿರ್ದೇಶಕರ ವಿರುದ್ದ ಎಆರ್ ಆಫಿಸ್‌ನಲ್ಲಿ ದೂರು ನೀಡಿದ್ದು ಅದು ಇತ್ಯರ್ಥವಾಗುವವರೆಗೂ ಸಭೆ ನಡೆಸಲು ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದಿದ್ದಾರೆ.
ಇದರಿಂದ ಆಕ್ರೋಶಗೊಂಡ ನೂತನ ಅಧ್ಯಕ್ಷೆ ಮಿಟಿಂಗ್ ನೋಟಿಸ್ ಜಾರಿ ಮಾಡಿದ ಮೇಲೆ ನಿಮ್ಮ ಕರ್ತವ್ಯ ನಿರ್ವಹಿಸಿ ಎಂದು ಪ್ರಧಾನ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಾನೂನಿನ ಪ್ರಕಾರ ನಮಗೆ ಸಭೆ ನಡೆಸಲು ಅವಕಾಶ ಇದ್ದು ನಮ್ಮ ಹಕ್ಕನ್ನು ಕಸಿಯದಂತೆ ಎಚ್ಚರಿಸಿದ್ದರು. ಮಿಟಿಂಗ್ ಮಾಡದೆ ನಾವು ಇಲ್ಲಿಂದ ಕದಲುವದಿಲ್ಲ ಎಂದು ಅಹೋರಾತ್ರಿ ಮಹಿಳಾ ಸಂಘದಲ್ಲಿ ಧರಣಿ ನಡೆಸಿದ್ದಾರೆ. . ಪಧಾಧಿಕಾರಿಗಳ ಆಯ್ಕೆಯಾದ ಮೇಲೂ ಸಭೆ ನಡೆಸಲು ಬಿಡುವದಿಲ್ಲ ಎಂದರೆ ಇಲ್ಲಿ ಅವ್ಯವಹಾರವಾದ ಶಂಕೆ ಇದೆ. ಇದನ್ನು ಖಂಡಿತ ನಾವು ಬಯಲಿಗೆಳೆಯುತ್ತೇವೆ ಯಾವುದೆ ಕಾರಣಕ್ಕೂ ಸಭೆ ನಡೆಸದೆ ನಾವು ಇಲ್ಲಿಂದ ಕದಲುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಉಪಾಧ್ಯಕ್ಷೆ ಸುಕನ್ಯಾ ನಾಯ್ಕ, ಶೋಭಾ ನಾಯ್ಕ, ರಾಧಾ ಶ್ರೀಧರ ಮೊಗೇರ, ವಿಜಯಾ ಜಯಂತ ನಾಯ್ಕ, ಸುನೀತಾ ರೈಮಂಡ್ ಡಿಸೋಜಾ, ವೀಣಾ ರಾಮಚಂದ್ರ ನಾಯ್ಕ ಅಧ್ಯಕ್ಷೆ ನಯನಾ ನಾಯ್ಕ ಅವರೊಂದಿಗೆ ಧರಣಿಗೆ ನಡೆಸಿದ್ದರು.
ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿದ್ದು ಮಂಗಳವಾರ ಬೆಳಿಗ್ಗೆ ಧರಣಿ ನಿರತ ಸ್ಥಳಕ್ಕೆೆ ತಹಸೀಲ್ದಾರ ತಿಪ್ಪೇಸ್ವಾಮಿ, ಎಆರ್ ಜಿ.ಕೆ. ಭಟ್ ಬೇಟಿ ನೀಡಿದ್ದಾರೆ. ತಮ್ಮದು ಬಹುಮತವಿದ್ದು ಕಾನೂನಿನ ಪ್ರಕಾರ ನಮಗೆ ಸಭೆ ನಡೆಸಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಬಳಿಕ ಎಆರ್ ಜಿ.ಕೆ. ಭಟ್ ಅಧ್ಯಕ್ಷರ ಹೇಳಿದಂತೆ ಮಿಟಿಂಗ್ ಮಾಡಲು ಅವಕಾಶ ನೀಡಿ ಎಂದು ಸಿಬ್ಬಂದಿಗೆ ಹೇಳಿದ್ದಾರೆ. ಬಳಿಕ ಆಡಳಿತ ಅಧ್ಯಕ್ಷೆ ನಯನಾ ನಾಯ್ಕ ಬಳಗದ ೭ ನಿರ್ದೇಶಕರು ಸಭೆ ನಡಿಸಿದ್ದಾರೆ.
ಪಟ್ಟಣದ ಅಭ್ಯುದಯ ಮಹಿಳಾ ಪತ್ತಿನ ಸಹಕಾರಿ ಸಂಘ ನಿಯಮಿತದಲ್ಲಿ ನೂತನ ಪಧಾಧಿಕಾರಿಗಳಿಗೆ ಮಿಟಿಂಗ್ ನೋಟಿಸ್ ನೀಡಿ ಮಿಟಿಂಗ್ ನಡೆಸಲು ಅವಕಾಶ ನೀಡದ ಹಿನ್ನಲೆಯಲ್ಲಿ ಭಟ್ಕಳ ತಹಸೀಲ್ದಾರ ಮಹಿಳಾ ಸಂಘಕ್ಕೆ ಬೇಟಿ ನೀಡಿದರು. ಅಧ್ಯಕ್ಷೆ ನಯನಾ ನಾಯ್ಕ ಇತರರು ಇದ್ದರು.

WhatsApp
Facebook
Telegram
error: Content is protected !!
Scroll to Top