ಭಟ್ಕಳ ಅಭ್ಯುದಯ ಮಹಿಳಾ ಪತ್ತಿನ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಉಪಾಧ್ಯಕ್ಷರನ್ನೊಳಗೊಂಡಂತೆ ಸದಸ್ಯರ ಅಹೊರಾತ್ರಿ ಪ್ರತಿಭಟನೆ

ಪ್ರತಿಭಟನೆಯ ಮದ್ಯೆಯೂ ಸ್ಥಳದಿಂದ ಕಾಲ್ಕಿತ್ತ ಸಂಘದ ಪ್ರಧಾನ ವ್ಯವಸ್ಥಾಪಕರು

ಭಟ್ಕಳ: ಪಟ್ಟಣದ ಅಭ್ಯುದಯ ಮಹಿಳಾ ಪತ್ತಿನ ಸಹಕಾರಿ ಸಂಘ ನಿಯಮಿತದಲ್ಲಿ ನೂತನ ಪಧಾಧಿಕಾರಿಗಳಿಗೆ ಮಿಟಿಂಗ್ ನೋಟಿಸ್ ನೀಡಿ ಮಿಟಿಂಗ್ ನಡೆಸಲು ಅವಕಾಶ ನೀಡದ ಪ್ರಧಾನ ವ್ಯವಸ್ಥಾಪಕರ ನಡೆಗೆ ಆಡಳಿತ ಮಂಡಳಿ ಅಧ್ಯಕ್ಷರ ಬಣದ ನಿರ್ದೇಶಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.


ಇತ್ತೀಚಿಗೆ ಇಲ್ಲಿನ ಮಹಿಳಾ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿತ್ತು. ಕಳೆದ ೩೩ವರ್ಷಗಳಿಂದ ಅಧ್ಯಕ್ಷ ಗಾದಿಯಲ್ಲಿದ್ದ ಲಕ್ಷಿö್ಮÃ ಮಂಜಪ್ಪ ನಾಯ್ಕ ಮತ್ತು ನಯನ ನಾಗೇಶ ನಾಯ್ಕ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದರು. ಅದರಲ್ಲಿ ನಯನಾ ನಾಯ್ಕ ಅವರು ವಿಜಯಿಯಾಗಿದ್ದರು. ಬಳಿಕ ಸೋಮವಾರ ಆಡಳಿತ ಮಂಡಳಿಯ ಸಭೆ ನಡೆಸಲು ಮಿಟಿಂಗ್ ಕರೆದಿದ್ದರು. ಇನ್ನೇನು ಮಿಟಿಂಗ್ ಆರಂಭವಾಗಬೇಕು ಎನ್ನುವಷ್ಟರಲ್ಲಿ ಲಕ್ಷ್ಮಿ ಮಂಜಪ್ಪ ನಾಯ್ಕ ಬಣದ ಸದಸ್ಯರಾದ ಚಂದ್ರಪ್ರಭಾ ಬಾಸ್ಕರ ನಾಯ್ಕ, ಲಕ್ಷಿö್ಮÃ ದುರ್ಗಪ್ಪ ನಾಯ್ಕ, ಲಕ್ಷ್ಮಿ ಮೋಹನ ಗೊಂಡ, ಬಿಬಿ ಹಾಜಿರಾ, ಭವಾನಿ ನಾಗರಾಜ ನಾಯ್ಕ ಮಿಟಿಂಗ್ ನಡೆಸದಂತೆ ಪ್ರಧಾನ ವ್ಯವಸ್ಥಾಪಕರಿಗೆ ತಡೆ ಒಡ್ಡಿದ್ದಾರೆ. ನಾವು ಈಗಾಗಲೆ ಹಾಲಿ ೭ ಮಂದಿಯ ವಿರುದ್ದ ಎಆರ್ ಆಫಿಸ್‌ನಲ್ಲಿ ದೂರು ನೀಡಿದ್ದು ಅದು ಇತ್ಯರ್ಥವಾಗುವವರೆಗೂ ಸಭೆ ನಡೆಸಲು ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದಿದ್ದಾರೆ.
ಇದರಿಂದ ಆಕ್ರೋಶಗೊಂಡ ನೂತನ ಅಧ್ಯಕ್ಷೆ ಮಿಟಿಂಗ್ ನೋಟಿಸ್ ಜಾರಿ ಮಾಡಿದ ಮೇಲೆ ನಿಮ್ಮ ಕರ್ತವ್ಯ ನಿರ್ವಹಿಸಿ ಎಂದು ಪ್ರಧಾನ ವ್ಯವಸ್ಥಾಪಕರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮಗೆ ಬೆದರಿಕೆ ಇದ್ದರೆ ಪೊಲೀಸ್ ಭದ್ರತೆ ಪಡೆಯಿರಿ, ಮಿಟಿಂಗ್ ಮಾಡದೆ ನಾವು ಇಲ್ಲಿಂದ ಕದಲುವದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪಧಾಧಿಕಾರಿಗಳ ಆಯ್ಕೆಯಾದ ಮೇಲೂ ಸಭೆ ನಡೆಸಲು ಬಿಡುವದಿಲ್ಲ ಎಂದರೆ ಮಹಿಳಾ ಸಂಘದಲ್ಲಿ ಎನೊ ಅವ್ಯವಹಾರವಾದ ಶಂಕೆ ಇದೆ ಎನ್ನುವದು ಮಲ್ನೋಟಕ್ಕೆ ಕಾಣುತ್ತಿದ್ದು ಯಾವುದೆ ಕಾರಣಕ್ಕೂ ಸಭೆ ನಡೆಸದೆ ನಾವು ಇಲ್ಲಿಂದ ಕದಲುವದಿಲ್ಲ ಎಂದು ಉಪಾಧ್ಯಕ್ಷೆ ಸುಕನ್ಯಾ ನಾಯ್ಕ, ಶೋಭಾ ನಾಯ್ಕ, ರಾಧಾ ಶ್ರೀಧರ ಮೊಗೇರ, ವಿಜಯಾ ಜಯಂತ ನಾಯ್ಕ, ಸುನೀತಾ ರೈಮಂಡ್ ಡಿಸೋಜಾ, ವೀಣಾ ರಾಮಚಂದ್ರ ನಾಯ್ಕ ಅಧ್ಯಕ್ಷೆ ನಯನಾ ನಾಯ್ಕ ಅವರೊಂದಿಗೆ ಧರಣಿಗೆ ಕುಳಿತಿದ್ದಾರೆ.
ಇಷ್ಟೇಲ್ಲಾ ಬೆಳವಣಿಗೆ ನಡೆಯುತ್ತಿದ್ದರೂ ಪ್ರಧಾನ ವ್ಯವಸ್ಥಾಪಕರು ಯಾವುದೆ ಮಾಹಿತಿ ನೀಡದೆ ಇಲ್ಲಿಂದ ತೆರಳಿದ್ದು ನಯನಾ ನಾಯ್ಕ ಬಣದ ಆಕ್ರೋಶಕ್ಕೆ ಕಾರಣವಾಗಿದೆ. ಮಹಿಳಾ ಸಂಘದ ಎರಡು ಬಣಗಳ ಜಗಳ ತಾರಕ್ಕೇರಿದ್ದು ಇದು ಯಾವ ಹಂತ ತಲುಪುವದೊ ಎನ್ನುವ ಕುತೂಹಲ ಏರ್ಪಟ್ಟಿದೆ. ಅಧ್ಯಕ್ಷರ ಬಣ ಸಂಘದಲ್ಲಿ ಅಹೋರಾತ್ರಿ ಪ್ರತಿಭಟನೆ ಮಾಡುವುದಾಗಿ ಪೊಲಿಸ್ ಇಲಾಖೆಯ ಗಮನಕ್ಕೆ ತಂದಿದ್ದು ಮಹಿಳಾ ಸಂಘಕ್ಕೆ ಪೊಲೀಸ್ ಬಂದೊಬಸ್ತು ಒದಗಿಸಲಾಗಿದೆ.

ಪ್ರತಿಭಟನಾ ಸ್ಥಳಕ್ಕೆ ಸಹಕಾರಿ ಸಂಘದ ಅಧಿಕಾರಿ ಬಾಸ್ಕರ್ ನಾಯ್ಕ ಪ್ರತಿಭಟನಾ ನಿರತ ಮಹಿಳಾ ಸದಸ್ಯರ ಮನವೊಲಿಸಲು ಪ್ರಯತ್ನಿಸಿದ್ದು ಅವರು ತಮ್ಮ ಪ್ರಯತ್ನದಲ್ಲಿ ವಿಪಲರಾಗಿದ್ದಾರೆ ಎನ್ನುವುದು ಗಮನಾರ್ಹ ಸಂಗತಿಯಾಗಿದೆ

ಸಂಘದ ಮಹಿಳಾ ಸದಸ್ಯರ ಈ ಪ್ರತಿಭಟನೆ ಯಾವ ಹಂತವನ್ನು ತಲುಪುತ್ತದೆ ಎನ್ನುವುದನ್ನು ಕಾದು ನೊಡಬೇಕಾಗಿದೆ

WhatsApp
Facebook
Telegram
error: Content is protected !!
Scroll to Top