ಸಿದ್ದಾಪುರದಲ್ಲಿ ಭುವನೇಶ್ವರಿ ತಾಳಮದ್ದಳೆ

ಸಿದ್ದಾಪುರ. ಪಟ್ಟಣ ವ್ಯಾಪ್ತಿಯ ಹೊಸೂರಿನ ಗುಡ್ಡೆಕೇರಿಯಲ್ಲಿರುವ ಎಂ.ಕೆ. ನಾಯ್ಕ ಹೊಸಳ್ಳಿ ಇವರ ಮನೆ ‘ಶ್ರೀಸಾವಿತ್ರಿ’ಯಲ್ಲಿ ಏಕಾದಶಿ ನಿಮಿತ್ತ ಶ್ರೀ ಭುವನೇಶ್ವರಿ ತಾಳಮದ್ದಳೆ ಕೂಟ ಗುಂಜಗೋಡು ಇವರಿಂದ ಕೃಷ್ಣ ಸಂಧಾನ ಎಂಬ ಆಖ್ಯಾನದ ತಾಳಮದ್ದಳೆ ನಡೆಯಿತು.

ಈ ಸಂದರ್ಭದಲ್ಲಿ ಯಕ್ಷ ಪ್ರೇಮಿ ಮತ್ತು ತಾಳಮದ್ದಳೆ ಅರ್ಥದಾರಿ ಎಂ. ಕೆ. ಹೆಗಡೆ ಹಳದೋಟ ಇವರನ್ನು ಎಂ.ಕೆ.ನಾಯ್ಕ ಹೊಸಳ್ಳಿ ಕುಟುಂಬದವರು ಸನ್ಮಾನಿಸಿದರು.ಖ್ಯಾತ ರಂಗಭೂಮಿ ಕಲಾವಿದ ಗಣಪತಿ ಬಿ ಹಿತ್ತಲಕೈ ಅಧ್ಯಕ್ಷತೆ ವಹಿಸಿದ್ದರು. ಸನ್ಮಾನಿತರ ಕುರಿತಾಗಿ ಜೈರಾಮ ಭಟ್ಟ ಅಭಿನಂದನಾ ನುಡಿಗಳನ್ನಾಡಿದರು. ಮಹಾಲಕ್ಷ್ಮಿ ಮತ್ತು ಎಂ.ಕೆ.ನಾಯ್ಕ ಹೊಸಳ್ಳಿ, ಗೀತಾಂಜಲಿ ಮತ್ತು ನಾಗೇಂದ್ರ ರಾವ್ ಬೆಂಗಳೂರು ಎಂ. ಕೆ. ಹೆಗಡೆ ಅವರನ್ನು ಸನ್ಮಾನಿಸಿದರು. ಗಣಪತಿ ಗುಂಜಗೋಡು ಸನ್ಮಾನ ಪತ್ರ ವಾಚಿಸಿದರು.ಸನ್ಮಾನ ಸ್ವೀಕರಿಸಿದ ಎಂ.ಕೆ.ಹೆಗಡೆ ಮಾತನಾಡಿ ಯಕ್ಷಗಾನ ಮತ್ತು ಭುವನೇಶ್ವರಿ ತಾಳಮದ್ದಳೆಕೂಟ ನನಗೆ ಬೌದ್ಧಿಕ ಬೆಳವಣಿಗೆ ಹಾಗೂ ಮಾನಸಿಕ ಸಂತೋಷ ನೀಡಿದೆ. ನನ್ನ ಮೇಲೆ ಅಭಿಮಾನ ಮತ್ತು ಪ್ರೀತಿಯಿಟ್ಟು ಸನ್ಮಾನಿಸಿದ್ದಕ್ಕೆ ಅತೀವ ಸಂತೋಷವಾಗಿದೆ ಎಂದರು. ಮುಖ್ಯ ಅತಿಥಿ ಸಾಹಿತಿ ಆರ್.ಕೆ.ಹೊನ್ನೆಗುಂಡಿ ಮಾತನಾಡಿ ಯಕ್ಷಗಾನ ಕಲಾವಿದರು ವಾಗ್ಮಿಗಳು ಮತ್ತು ವಿಶೇಷ ಚಿಂತಕರಾಗಿದ್ದಾರೆ. ಯಕ್ಷಗಾನ ಸಂಸ್ಕೃತಿಯ ನ್ನು ಉಳಿಸುತ್ತದೆ ಎಂದರು. ಹಿರಿಯರಾದ ಆನಂದ ಈರಾ ನಾಯ್ಕ, ಪಿ.ಬಿ.ಹೊಸೂರು, ಸಿ.ಎಸ್.ಗೌಡರ್, ಸುರೇಂದ್ರ ದಫೇದಾರ್, ಕನ್ನೇಶ ಕೋಲಸಿರ್ಸಿ, ಉಮೇಶ ಟಪಾಲ ಮುಂತಾದವರು ಉಪಸ್ಥಿತರಿದ್ದರು. ಗೀತಾಂಜಲಿ ಪ್ರಾರ್ಥನೆ ಹಾಡಿದರು. ನಾಗೇಂದ್ರರಾವ್ ಬೆಂಗಳೂರು ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ನಡೆದ ತಾಳಮದ್ದಳೆಯಲ್ಲಿ ಮಧುರ ಕಂಠದ ಭಾಗವತ ರಾಮಚಂದ್ರ ನಾಯ್ಕ, ಮದ್ದಳೆಯಲ್ಲಿ ಮಂಜುನಾಥ ಹೆಗಡೆ ಕಂಚಿಮನೆ ಹಿಮ್ಮೇಳಕ್ಕೆ ಬಲತುಂಬಿದರು. ಮುಮ್ಮೇಳದಲ್ಲಿ ಜಿ.ಕೆ.ಭಟ್ಟ ಕಶಿಗೆ ಮತ್ತು ಎಂ.ಕೆ.ನಾಯ್ಕ ಹೊಸಳ್ಳಿ(ಶ್ರೀ ಕೃಷ್ಣ) ಟಿ.ಎಂ.ರಮೇಶ(ಧರ್ಮರಾಯ) ಶ್ರೀಧರ ಭಟ್ಟ ಮುತ್ತಿಗೆ (ಅರ್ಜುನ) ಪ್ರಸಾದ ಹಲಗೇರಿ(ದ್ರೌಪದಿ) ಗಣಪತಿ ಗುಂಜಗೋಡು(ವಿದುರ)ಎಂ.ಕೆ.ಹೆಗಡೆ (ಕುಂತಿ)ಜೈರಾಮ ಭಟ್ಟ ಗುಂಜಗೋಡ(ಕೌರವ)ಎಂ.ಜಿ.ಭಟ್ಟ ಗುಂಜಗೋಡ (ದೂತ)ಪಾತ್ರನಿರ್ವಹಿಸಿ ತಾಳಮದ್ದಳೆಯನ್ನು ಪ್ರೇಕ್ಷಕರು ಆಸ್ವಾದಿಸುವಂತೆ ಮಾಡಿದರು.

WhatsApp
Facebook
Telegram
error: Content is protected !!
Scroll to Top