ವಿಶ್ವಕರ್ಮ ಗೆಳೆಯರ ಬಳಗ ಸಮಾಜ ಮುಖಿ ಕೆಲಸ ಮಾಡುತ್ತಿದೆ ಸಚಿವ ಮಂಕಾಳು ವೈದ್ಯರ ಮೆಚ್ಚುಗೆ

ಭಟ್ಕಳ :ಬಿಲ್ವಪತ್ರೆ ಅನೇಕ ರೋಗಕ್ಕೆ ಮದ್ದಿನಂತೆ ಕೆಲಸ ಮಾಡುತ್ತದೆ ಶಿವನಿಗೆ ಪ್ರೀಯವಾದ ಬಿಲ್ವಪತ್ರೆ ಮರದಡಿಯಲ್ಲಿ ಆರೋಗ್ಯ ಸಿಗುತ್ತದೆ ಎಲ್ಲರ ಮನೆಗಳಲ್ಲಿ ಬಿಲ್ವಪತ್ರೆ ಮರವಿದ್ದರೆ ಒಳ್ಳೆಯದು ಎಂದು ಜಿಲ್ಲಾ ಉಸ್ತುವಾರಿಗಳು ಮಿನುಗಾರಿಕಾ ಸಚಿವ ಮಂಕಾಳು ವೈದ್ಯರು ಹೇಳಿದರು

ವಿಶ್ವಕರ್ಮ ಗೆಳೆಯರ ಬಳಗ (ರಿ )ಭಟ್ಕಳ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಇವರ ಆಶ್ರಯದಲ್ಲಿ “ಮನೆಗೊಂದು ಗಿಡ” ಅಭಿಯಾನದಡಿ 6ನೇ ಹಂತದ ವನಮಹೋತ್ಸವ ಕಾರ್ಯಕ್ರಮವು ಮನೆ ಮನೆಗೆ ತೆರಳಿ 200ಗಿಡ ಕೊಡುವುದರ ಮೂಲಕ ನೆರವೇರಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶ್ರೀ ಮಂಕಾಳ ಎಸ್ ವೈದ್ಯ ರವರ ಗೃಹಕಛೇರಿ ಆವರಣದಲ್ಲಿ ಅವರ ಮುಖಾಂತರ ಗಿಡ ನೆಡುವುದರ ಮೂಲಕ ಪ್ರಾರಂಭಿಸಿ ಮಾತನಾಡಿದರು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ RNS ಪಾಲಿಟೆಕ್ನಿಕ್ ನ ಉಪ ಪ್ರಾಂಶುಪಾಲರಾಗಿರುವ ಕೆ ಮರಿಸ್ವಾಮಿಯವರು ಕಾರ್ಯಕ್ರಮ ದ ಬಗ್ಗೆ ಮಾತುಗಳನ್ನಾಡಿದರು.ಗಣೇಶ್ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಬೀಟ್ ಫಾರೆಸ್ಟ್ ಆಫೀಸರ್ ಆಗಿರುವ ಕಾಳಪ್ಪ ಗೋಳಭಾವಿ,ಭಟ್ಕಳ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೋಕ್ತೇಸರರಾಗಿರುವ ಶ್ರೀ ಗಜಾನನ ಎನ್ ಆಚಾರ್ಯ,ಶಿಕ್ಷಕರಾದ ಅಶೋಕ್ ಆಚಾರ್ಯ ಹಾಗೂ ವಿಶ್ವಕರ್ಮ ಗೆಳೆಯರ ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು.ಸುರೇಶ್ ಎನ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ರವಿ ಆರ್ ಆಚಾರ್ಯ ವಂದಿಸಿದರು

WhatsApp
Facebook
Telegram
error: Content is protected !!
Scroll to Top