ಭಟ್ಕಳ ಸಿ ಐ ಟಿ ಯು ವತಿಯಿಂದ ಪ್ರಧಾನ ಮಂತ್ರಿಗಳಿಗೆ ಮನವಿ

ಮಣಿಪುರ ಕುಕಿ ಜನಾಂಗದ ಮಹಿಳೆಯರ ಅತ್ಯಾಚಾರ ಬೆತ್ತಲೆ ಮೆರವಣಿಗೆ ವಿರುದ್ದ ಮನವಿ

ಭಟ್ಕಳ: ತಾಲೂಕಿನ ಮಣಿಪುರ ಕುಕಿ ಅದಿವಾಸಿ ಜನಾಂಗದ ಮೇಲೆ ದೌರ್ಜನ್ಯ ಮತ್ತು ಕುಕಿ ಅಮಾಯಕ ಮಹಿಳೆಯರ ಅತ್ಯಾಚಾರ ಬೆತ್ತಲೆ ಮೆರವಣಿಗೆ ನಡೆಸಿರುವ ವಿರುದ್ದ ಭಟ್ಕಳ ತಾಲೂಕ ಸಿ ಐ ಟಿ ಯು ಸಂಘಟನೆ ಬಿಸಿಯೂಟ ಸಂಘಟನೆಯ ವತಿಯಿಂದ ತಾಲೂಕ ತಹಶಿಲ್ದಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು

ದೇಶದ ಮಣಿಪುರ ಮೈತೆಯಿ ಜನಾಂಗ ಕುಕಿ ಆದಿವಾಸಿ ಜನಾಂಗದ ಮೇಲೆ ನಡೆಸಿರುವ ದೌರ್ಜನ್ಯ ಮತ್ತು ಕುಕಿ ಮಹಿಳೆಯರ ಮೇಲಿನ ಅಮಾನವಿಯ ಅಮಾನುಷ ಅತ್ಯಾಚಾರ ಬೆತ್ತಲೆ ಮೇರವಣಿಗೆ ನಡೆಸಿರುವುದರ ವಿರುದ್ದ ಸಿ ಐ ಟಿ ಯು ಅಂದರೆ Central of Indian trade unions ಮತ್ತು ಬಿಸಿಯೂಟ ಸಂಘಟನೆಯ ಸಹಯೋಗದಲ್ಲಿ ಭಟ್ಕಳ ತಾಲೂಕ ಸಹಾಯಕ ಆಯುಕ್ತರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು

ಈ ಸಂದರ್ಬದಲ್ಲಿ ಸಿ ಐ ಟಿ ಯು ತಾಲೂಕ ಅಧ್ಯಕ್ಷ ಪುಂಡಲಿಕ್ ನಾಯ್ಕ ತಾಲೂಕ ಪ್ರಧಾನ ಕಾರ್ಯದರ್ಶಿ ಅರ್ಜುನ್ ಮಲ್ಯ , ಬಿಸಿಯೂಟ ಸಂಘಟನೆಯ ಅಧ್ಯಕ್ಷರಾದ ಕೊಮಲಾ ನಾಯ್ಕ, ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು .

WhatsApp
Facebook
Telegram
error: Content is protected !!
Scroll to Top