ಕನ್ನಡ ಮಾಧ್ಯಮದಿಂದ ಹೆಚ್ಚು ಅಧಿಕಾರಿಗಳು ಸಾಹಿತಿಗಳು ರಾಜಕಾರಣಿಗಳು ಆಗಿದ್ದಾರೆ:ಜಿ ಐ ನಾಯ್ಕ್

ಸಿದ್ದಾಪುರ:- ನಮ್ಮ ಕನ್ನಡ ಭಾಷೆಯ ಪ್ರೌಢಿಮೆ ಅಪಾರವಾದದ್ದು ಮಾತೃಭಾಷೆಯಲ್ಲಿ ಶಕ್ತಿ ಇದೆ ಕನ್ನಡ ಮಾಧ್ಯಮದಿಂದ ಹೆಚ್ಚು ಅಧಿಕಾರಿಗಳು ಸಾಹಿತಿಗಳು ರಾಜಕಾರಣಿಗಳು ಆಗಿದ್ದಾರೆ. ನಮ ಭಾಷೆ ನಮ್ಮ ಹೆಮ್ಮೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಐ ನಾಯ್ಕ್ ಹೇಳಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ೨೦೨೨-೨೩ ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಪುರಸ್ಕಾರ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎಸ್ ಎಲ್ ಸಿ ಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದ ಎಲ್ಲರಿಗೂ ಇಲಾಖೆಯ ಪರವಾಗಿ ಅಭಿನಂದನೆಗಳು ಸಲ್ಲಿಸಿದರು.
ತಾಲೂಕು ೬ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಆರ್ ಕೆ ಹೊನ್ನೇಗುಂಡಿ ಅಭಿನಂದನಾ ನುಡಿಗಳನ್ನಾಡಿದರು.

ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಮಾತನಾಡಿ ಮೋಬೈಲ್ ದಿಂದ ದೂರ ಇರಿ, ಜ್ಞಾನಾರ್ಜನೆ ಮಾತ್ರ ಬಳಸಿ, ಐಎಎಸ್, ಕೆಎಎಸ್ ಪರೀಕ್ಷೆ ಕನ್ನಡ ದಲ್ಲಿ ಬರೆಯಲು ಅವಕಾಶ ಇದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬಿ ಆರ್ ಸಿ ಸಮನ್ವಯಾಧಿಕಾರಿ ಚೈತನ್ಯಕುಮಾರ್, ಅಕ್ಷರ ದಾಸೋಹ ದ ಭೂಮೇಶ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ,ನೌಕರರ ಸಂಘದ ಪ್ರಶಾಂತ್, ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಆರ್ ನಾಯ್ಕ, ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಪಕರ ಸಂಘದ ಅಧ್ಯಕ್ಷ ಎಸ್, ಎಸ್ ಪಮ್ಮಾರ , ಯಲ್ಲಾಪುರ ತಾಲೂಕು ಕ. ಸಾ. ಪ ಅಧ್ಯಕ್ಷ ಸುಬ್ರಮಣ್ಯ ಭಟ್, ಉ. ಕ. ಕ. ಸ. ಪಾ ಗೌರವ ಕಾರ್ಯದರ್ಶಿ ಜಾರ್ಜ ಫರ್ನಾಂಡೀಸ್, ಮಾತನಾಡಿದರು.
ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿಎನ್ ವಾಸರೆ ಅಧ್ಯಕ್ಷತೆ ವಹಿಸಿ ಅಭಿನಂದನ ನುಡಿಗಳನ್ನು ಆಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲ್ ನಾಯ್ಕ್ ಬಾಶಿ ಉಪಸ್ಥಿತರಿದ್ದರು
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಹಾಗೂ 2023ರ ಶೈಕ್ಷಣಿಕ ವರ್ಷದಲ್ಲಿ ಕನ್ನಡಕ್ಕೆ ನೂರಕ್ಕೆ ನೂರು ಪಡೆದ ವಿದ್ಯಾರ್ಥಿಗಳನ್ನು ಮತ್ತು ಅವರ ಶಿಕ್ಷಕರನ್ನು ಅಭಿನಂದಿಸಲಾಯಿತು
ನೂತನ ಶಿಕ್ಷಣಾಧಿಕಾರಿ ಜಿ ಐ ನಾಯ್ಕ, ತಾಲೂಕು ಪಂಚಾಯತ್ ಕಾರ್ಯನಿರ್ವಣ ಅಧಿಕಾರಿ ದೇವರಾಜ್ ಹಿತ್ಲುಕೊಪ್ಪ ಅವರನ್ನು ಕನ್ನಡ ಸಾಲು ಹೊದಿಸಿ ಗೌರಿವಿಸಲಾಯಿತು
ಬಿಬಿ ಹೊಸೂರ್ ಸ್ವಾಗತಿಸಿದರು. ಚಂದ್ರಶೇಖರ್ ಕುಂಬರಿ ಗದ್ದೆ ನಿರ್ವಹಿಸಿದರು ಅಣ್ಣಪ್ಪ ಸೀರಿಯಲ್ ವಂದಿಸಿದರು..

WhatsApp
Facebook
Telegram
error: Content is protected !!
Scroll to Top