ಭಟ್ಕಳ ಬೆಳಕೆ ಅರಣ್ಯ ಪ್ರದೇಶದಲ್ಲಿ ಅರಣ್ಯಸಸಿ ನಾಟಿ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭಟ್ಕಳ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಅರಣ್ಯ ಇಲಾಖೆ ಭಟ್ಕಳ ಇವರ ಸಹಯೋಗದೊಂದಿಗೆ ಪರಮ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಆಶಯದಂತೆ “ಸಾಮಾಜಿಕ ಅರಣ್ಯೀಕರಣ ” ಕಾರ್ಯಕ್ರಮ ಮೂಲಕ ತಾಲೂಕಿನ ಗಡಿ ಭಾಗವಾದ ಬೆಳಕೆ ಅರಣ್ಯ ಪ್ರದೇಶದಲ್ಲಿ ಅರಣ್ಯಸಸಿ ನಾಟಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ 55 ಜನ ಸ್ವಯಂ ಸೇವಕರು ಪಾಲ್ಗೊಂಡಿದ್ದು, ನಿಸ್ವಾರ್ಥ ವಾಗಿ ಗಿಡನಾಟಿಯಲ್ಲಿ ಪಾಲ್ಗೊಂಡ ಸ್ವಯಂ ಸೇವಕರ ಬಗ್ಗೆ ACF ಶ್ರೀ ಕೆ.ಟಿ.ಬೋರೆ ಗೌಡಾ ರವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಪ್ರತಿ ತಾಲೂಕಿನಲ್ಲಿಯೂ ವಿಪತ್ತು ನಿರ್ವಹಣಾ ತಂಡ ಕಟ್ಟಿದ ಪೂಜ್ಯರ ಆಲೋಚನೆ ಬಗ್ಗೆ ಶ್ಲಾಘನೀಯ ಎಂದರು.

ತಾಲೂಕು ಯೋಜನಾಧಿಕಾರಿ ಗಣೇಶ ಡಿ ನಾಯ್ಕ ಮಾತನಾಡಿ ಪೂಜ್ಯರ ಆಶಯ ಮತ್ತು ಮಾರ್ಗದರ್ಶನದಂತೆ ತಾಲೂಕಿನಲ್ಲಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿಯಲ್ಲಿ 5000 ಅರಣ್ಯ ಸಸಿ ನಾಟಿ ಗುರಿ ಇಟ್ಟುಕೊಂಡಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ RFO ಶ್ರೀ ಶರತ್ ಶೆಟ್ಟಿ, ಅರಣ್ಯ ಅಧಿಕಾರಿ ಶ್ರೀ ವಿನಾಯಕ ಹಾಗೂ ಸಿಬ್ಬಂದಿಗಳು, ವಿನೋದಾ ಸಮನ್ವಯಾಧಿಕಾರಿ, ಕೃಷಿ ಮೇಲ್ವಿಚಾರಕರಾದ ಮಹೇಶ ಹೆಗ್ಡೆ, ಮೇಲ್ವಿಚಾರಕರಾದ ಪ್ರಭಾಕರ, ವಿಪತ್ತು ನಿರ್ವಹಣಾ ಘಟಕದ ಟೀಮ್ ಮಾಸ್ಟರ್ ಶ್ರೀಕಾಂತ್ ನಾಯ್ಕ, ತಾಲೂಕಿನ ಎಲ್ಲಾ ಘಟಕದ ಸಂಯೋಜಕರು, ಘಟಕ ಪ್ರತಿನಿಧಿಗಳು ಹಾಗೂ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

WhatsApp
Facebook
Telegram
error: Content is protected !!
Scroll to Top