ನುಡಿದಂತೆ ನಡೆಯುತ್ತಿರುವ ಸಚಿವ ಮಂಕಾಳು ವೈಧ್ಯ

ವಿಧಾನ ಸಭಾ ಅಧಿವೇಶನ ನಡೆಯುತ್ತಿದ್ದರು ಕ್ಷೇತ್ರದ ಸಮಸ್ಯೆ ಮನಗಂಡು ಭಟ್ಕಳಕ್ಕೆ ಹಿಂತಿರುಗಿದ ಸಚಿವ ಮಂಕಾಳು ವೈದ್ಯ

ಭಟ್ಕಳ: ತಾಲೂಕಿನಲ್ಲಿ ಏರಡು ಮೂರು ದಿನಗಳಿಂದ ಅತಿವೃಷ್ಟಿಯಾಗುತ್ತಿದ್ದು ಜನ ಜೀವನ ಮೂರಾಬಟ್ಟೆಯಾಗಿ ಹೊಗಿದ್ದು ಅಧಿಕಾರಿಗಳು ಆಟಕ್ಕೂಂಟು ಎಲ್ಲಕ್ಕಿಲ್ಲ ಎಂಬಂತಾದ ಇದನ್ನು ಮನಗಂಡ ಸಚಿವ ಮಂಕಾಳ ವೈದ್ಯರು ವಿಧಾನ ಸಭಾ ಅಧಿವೇಶನದ ನಡೆವೆಯೆ ನನ್ನ ಕ್ಷೇತ್ರ ಭಟ್ಕಳಕ್ಕೆ ಆಗಮಿಸಿ ಜನರ ಸಮಸ್ಯೆಯನ್ನು ಬಗೆ ಹರಿಸಲು ಮುಂದಾಗಿ ಜನ ಸಾಮಾನ್ಯರಲ್ಲಿ ಬರವಸೆಯನ್ನು ಮೂಡಿಸಿದ್ದಾರೆ

ಹೌದು ವೀಕ್ಷಕರೆ ಈ ರಾಜಕಾರಣಿಗಳು ಸಮಸ್ಯೆ ಎದುರಾದಾಗ ಬಗೆಹರಿಸುವ ಗೋಜಿಗೆ ಹೋಗುವುದಿಲ್ಲಾ ಸಮಸ್ಯೆ ಉಲ್ಬಣಿಸಿ ಸಾರ್ವಜನಿಕರು ತೊಂದರೆಗೆ ಬಿದ್ದು ಸಾವುನೋವುಗಳು ಸಂಬವಿಸಿದ ನಂತರವೇ ಈ ರಾಜಕಾರಣಿ ಎನ್ನಿಸಿಕೊಂಡವರ ರಂಗಪ್ರವೇಶವಾಗುತ್ತದೆ ಆದರೆ ನಮ್ಮ ಭಟ್ಕಳ ತಾಲೂಕಿನ ಅಪರೂಪದ ರಾಜಕಾರಣಿ ಜಿಲ್ಲಾ ಉಸ್ತುವಾರಿ ಸಚಿವರು ಮೀನುಗಾರಿ ಇಲಾಖೆಯ ಮಂತ್ರಿಗಳು ಆದ ಮಂಕಾಳು ವೈದ್ಯರ ವರಸೆಯೇ ಬೇರೆ ಎಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿಯುತ್ತದೆಯೋ ಮೊದಲು ನಮ್ಮ ಸಚಿವರು ಆ ಸಮಸ್ಯೆಯ ನಿವಾರಣೆ ಬಂದು ನಿಲ್ಲುತ್ತಾರೆ ಇದಕ್ಕೆ ಒಂದು ಜ್ವಲಂತ ಉದಾಹರಣೆ ಎಂದರೆ ತನ್ನ ಕ್ಷೇತ್ರದಲ್ಲಿ ಸುರಿಯುತ್ತಿರುವ ಅತಿವೇಷ್ಟೀಯ ಕಾರಣ ಸಾರ್ವಜನಿಕರು ತೋಂದರೆ ಪಡುತ್ತಿರುವುದನ್ನು ಗಮನಿಸಿ ಬೆಂಗಳೂರಿನಲ್ಲಿ ವಿಧಾನ ಸಭಾ ಅಧಿವೇಶನ ನಡೆಯುತ್ತಿದ್ದರು ಆ ಅಧೀವೇಶನವನ್ನು ಅಲ್ಲಿಯೆ ಬಿಟ್ಟು ತನ್ನ ಕ್ಷೇತ್ರದ ಜನ ಸಾಮಾನ್ಯರ ಕಷ್ಟದಲ್ಲಿ ಬಾಗವಹಿಸಲು ಭಟ್ಕಳಕ್ಕೆ ಹಿಂತಿರುಗಿದ್ದಾರೆ ಇದು ಒಬ್ಬ ರಾಜಕಾರಣಿ ಅಥವಾ ಜನ ಪ್ರತಿನಿದಿಯಲ್ಲಿ ಇರಬೇಕಾದ ಜನಪರ ಕಾಳಜಿ ಆಗಿರುತ್ತದೆ ಇಂತ ರಾಜಕಾರಣಿಗೆ ತಾವು ಮತದಾನವನ್ನು ಮಾಡಿ ತುಂಬ ಒಳ್ಳೆಯ ಕೆಲಸವನ್ನೆ ಮಾಡಿದ್ದೆವೆ ಎಂದು ಜನ ಸಾಮಾನ್ಯರು ಮಾತಬಾಡಿಕೊಳ್ಳುತ್ತಿದ್ದಾರೆ

ತಾಲೂಕಿನಲ್ಲಿ ಈ ಹೆದ್ದಾರಿ ಪ್ರಾಧಿಕಾರದ ಅವೈಜ್ಙಾನಿಕ ರಸ್ತೆ ಕಾಮಗಾರಿ , ಪುರಸಭೆಯ ಬೆಜವಾಬ್ದಾರಿತನ ರಾಜಕಾಲುವೆಗಳ ಒತ್ತುವರಿ ಈ ಎಲ್ಲಾ ಕಾರಣದಿಂದ ಮಳೆಗಾಲದ ಸಂದರ್ಬದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪುರಸಭಾ ವ್ಯಾಪ್ತಿಯ ಅನೇಕ ಪ್ರದೇಶಗಳಲ್ಲಿ ಕ್ರತಕ ನೇರೆಹಾವಳಿ ಪ್ರಾರಂಬವಾಗಿ ಸಾರ್ವಜನಿಕರ ಜೀವನ ಮೂರಾಬಟ್ಟೆಯಾಗಿ ಹೊಗಿತ್ತು ಪ್ರತಿ ಮಳೆಗಾಲದ ಸಂದರ್ಬದಲ್ಲಿ ಸಾರ್ವಜನಿಕರ ಸ್ಥಿತಿ ತುಂಬ ಶೋಚನಿಯವಾಗಿ ಮಾರ್ಪಡುತ್ತಲೆ ಇರುತ್ತದೆ ಈ ಅಧಿಕಾರಿಗಳು ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಸಭೆಯ ಮೇಲೆ ಸಭೆ ಮಾಡುತ್ತಲೆ ಬರುತ್ತಿದ್ದಾರೆ ಫಲಿತಾಂಶ ಮಾತ್ರ ಶೂನ್ಯ ಆದರೆ ಈ ಭಾರಿ ತಾವು ಅಧಿಕಾರದ ಗದ್ದುಗೆಯನ್ನು ಹಿಡಿದ ಮಂಕಾಳು ವೈದ್ಯರು ತನ್ನ ಕ್ಷೇತ್ರದ ಈ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ಒದಗಿಸಲು ನಿಂತಿರುವುದು ಸಾರ್ವಜನಿಕರಲ್ಲಿ ಒಂದು ಆಶಾ ಭಾವನೆಯನ್ನು ಮೂಡಿಸಿದೆ ಸಚಿವ ಮಂಕಾಳು ವೈದ್ಯ ತಾನು ಜನಪರ ರಾಜಕಾರಣಿ ಜನ ಸ್ನೇಹಿ ಜನಪ್ರತಿನಿದಿ ಎನ್ನುವುದನ್ನು ಮತ್ತೋಮ್ಮೆ ರುಜುವಾತು ಮಾಡಿದ್ದಾರೆ .

ಕ್ಷೇತ್ರಕ್ಕೆ ಆಗಮಿಸಿದ್ದ ಸಚಿವ ಮಂಕಾಳು ವೈದ್ಯರು ಜಿಲ್ಲೆಯಲ್ಲಿ ಸುರಿಯುತ್ತಿರುವ ಅತಿವೃಷ್ಟಿಯ ಕಾರಣ ಜಿಲ್ಲೆಯಲ್ಲಿ ಅನೇಕ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಮುಖ್ಯವಾಗಿ ಭಟ್ಕಳದಲ್ಲಿ ತಲೆದೂರಿರುವ ಕ್ರತಕ ನೇರೆಹಾಳಿ ಬಗ್ಗೆ ಚರ್ಚೆಯನ್ನು ನಡೆಸಿ ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ತಲೆದೂರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಾಕಿತು ಮಾಡಲಾಯಿತು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿವರ್ಷ ಮಳೆಗಾಲದ ಸಂದರ್ಬದಲ್ಲಿ ಕ್ರತಕ ನೇರೆಹಾವಳಿ ಆಗುತ್ತಿದೆ ಎಂದರೆ ಅದಕ್ಕೆ ನೇರಹೋಣೆ ಹೆದ್ದಾರಿ ಪ್ರಾದಿಕಾರ ನಡೆಸುತ್ತಿರುವ ಅವೈಜ್ಙಾನಿಕ ಕಾಮಗಾರಿ ಈ ಬಗ್ಗೆ ಸಚಿವ ಮಂಕಾಳು ವೈದ್ಯರು ಕಾಮಗಾರಿ ನಡೆಸುತ್ತಿರುವ ಐ ಆರ್‌ ಬಿ ಕಂಪನಿಯ ಅಧಿಕಾರಿಗಳನ್ನು ತರಾಟೆಗೆ ತೇಗೆದುಕೊಂಡರು ಹಾಗು ಕೂಡಲೆ ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಕಿತು ಮಾಡಿದರು ಹಾಗು ಮುಂದಿನ ಭಾರಿ ಇಂತಹ ಕ್ರತಕ ನೇರೆಹಾವಳಿ ಸ್ರಷ್ಟೀಯಾಗುವುದಿಲ್ಲಾ ಎಂಬ ಭರವಸೆಯನ್ನು ಸಾರ್ವಜನಿಕರಿಗೆ ನೀಡಿದರು ಒಂದುವೇಳೆ ಇಂತ ಸಮಸೈಎ ಮರುಕಳಿಸಿದರೆ ಇದಕ್ಕೆ ಸಂಬಂದಿಸಿದವರ ವಿರುದ್ದ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು

ಸಭೆಯಲ್ಲಿ ತಾಲೂಕಿನಲ್ಲಿ ಎದ್ದಿರುವ ಯೂಜಿಡಿ ಕಾಮಗಾರಿಯಿಂದ ತಲೆದೂರಿರುವ ಸಮಸ್ಯೆಯ ಬಗ್ಗೆ ಮುಖಂಡರು ಸಚಿವರ ಗಮನಕ್ಕೆ ತಂದ ಸಂದರ್ಬದಲ್ಲಿ ಸಚಿವರು ಈಗ ಸಮಯದ ಅಭಾವವಿದೆ ನನಗೆ ಪುನಃ ಅಧಿವೇಶನಕ್ಕೆ ತೆರಳುವ ಅವಶ್ಯಕತೆ ಇದೆ ಯೂಜಿಡಿ ಸಮಸ್ಯೆಯ ಬಗ್ಗೆ ಅತಿಶಿಘ್ರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತದೆ ಎಂಬ ಬರವಸೆಯನ್ನು ನೀಡಿದರು ಇಲ್ಲಿ ಮುಖ್ಯವಾಗಿ ತಾಲೂಕಿನಲ್ಲಿ ಈ ಯೂಜಿಡಿ ಕಾಮಗಾರಿಯ ಹಿನ್ನೆಲೆಯಲ್ಲಿ ಅನೇಕ ಅವಾಂತರಗಳು ಉದ್ಬವವಾಗಿದ್ದು ಇಲ್ಲಿ ಕೊಟಿಗಟ್ಟಲೆ ಅವ್ಯವಹಾರ ನಡೆದ ವಾಸನೆ ಬರುತ್ತಿದ್ದು ಈ ಬಗ್ಗೆ ನಮ್ಮ ಕರವಾಳಿ ಸಮಾಚಾರ ವರದಿಯನ್ನು ಬಿತ್ತರಿಸಿತ್ತು ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವರ್ಗ ತನಿಖೆಗೆಗೂ ಮುಂದಾಗಿತ್ತು ಆದರೆ ಪಲಿತಾಂಶ ಮಾತ್ರ ಎಲ್ಲಿಯು ದೊರೆಯಲಿಲ್ಲ ಮಾನ್ಯ ಸಚಿವರು ಬರವಸೆ ಕೊಟ್ಟಂತೆ ಈ ಬಗ್ಗೆ ಸಭೆ ನಡೆಸಿ ಇಲ್ಲಿ ನಡೆದಿರುವ ಅವ್ಯವಹಾರಕ್ಕೆ ತಕ್ಕ ಕ್ರಮವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎನ್ನುವುದು ನಮ್ಮ ಕರಾವಳಿ ಸಮಾಚಾರದ ಆಗ್ರಹವಾಗಿದೆ ಸಭೆ ನಡೆಯುವ ಸಂದರ್ಬದಲ್ಲಿ ಈ ಯೂಜಿಡಿ ಕಾಮಗಾರಿಯಿಂದ ತೊಂದರಗೆ ಒಳಗಾದ ಸಾರ್ವಜನಿಕರು ಸಚಿವರ ಮುಂದೆ ಬಂದು ತಮ್ಮ ಅವಹಾಲನ್ನು ತೋಡಿಕೊಳ್ಳಬಹುದಾಗಿದೆ

ಒಟ್ಟಾರೆ ಸಚಿವ ಮಂಕಾಳು ವೈದ್ಯರು ಕಳೆದ ಬಾರಿ ಶಾಸಕರಿರುವಾಗ ಇಡಿ ರಾಜ್ಯ ರಾಜಕಾರಣದಲ್ಲಿ ರಾಜ್ಯದಲ್ಲೆ ತಮ್ಮ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ತಂತ ಶಾಸಕರು ಎಂಬ ಹೆಗ್ಗಳಿಕೆಯನ್ನು ಗಳಿಸಿದವರಾಗಿದ್ದಾರೆ ನಮ್ಮ ಭಟ್ಕಳದವರೆ ಆದ ಸಚಿವ ಮಂಕಾಳು ವೈದ್ಯರು ತಮ್ಮ ಜನಪರ ಕಾಳಜಿ ಅಭಿವೃದ್ದಿ ಕಾರ್ಯಗಳಿಂದ ರಾಜ್ಯದ ರಾಜಕಾರಣಿಗಳಿಗೆ ಮಾದರಿ ರಾಜಕಾರಣಿ ಎಂದು ಭಟ್ಕಳಿಗರಾದ ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎನುವುದು ತಾಲೂಕ ಸಾರ್ವಜನಿಕರ ಮಾತಾಗಿದೆ

WhatsApp
Facebook
Telegram
error: Content is protected !!
Scroll to Top