ಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರತಕ ನೇರೆ ನಿರ್ಮಾಣ;

ಸಾರ್ವಜನಿಕ ಸಭೆ ನಡೆಸಿದ ಜಿಲ್ಲಾಧಿಕಾರಿ

ಸಮಸ್ಯೆಗೆ ಪರಿಹಾರ ದೊರೆಯಲಿದೆಯೆ ಅಥವಾ ಜಿಲ್ಲಾಧಿಕಾರಿಗಳ ಸಭೆ ಕಣ್ಣೊರೆಸುವ ತಂತ್ರವೆ ಯಕ್ಷ ಪ್ರಶ್ನೇ

ಭಟ್ಕಳ: ಕಳೆದ ಎರಡು ಮೂರು ದಿನದಿಂದ ಸುರಿಯುತ್ತಿರುವ ಮಳೆಯಿ೦ದಾಗಿ ನಗರ ಭಾಗದ ಪ್ರಮುಖ ಸ್ಥಳಗಳು ಜಲಾ ವ್ರತಗೊ೦ಡಿದ್ದು, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಇಲ್ಲಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ತುರ್ತು ಸಭೆ ನಡೆಸಿದರು.

ಸಭೆಯಲ್ಲಿ ಸಾರ್ವಜನಿಕರು ಮಳೆಯಿಂದಾದ ಸಾಕಷ್ಟು ಅನಾಹುತಗಳನ್ನು ವಿವರಿಸಿ ಪರಿಹರಿಸಿಕೊಡಬೇಕಾಗಿ ತಾಕೀತು ಮಾಡಿದರು. ತಾಲೂಕು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸತೀಶಕುಮಾರ, ಸದ್ಯ ಮಳೆಯಿಂದ ರಸ್ತೆಯ ತುಂಬೆಲ್ಲ ನೀರು ನಿಂತಿರುವದಕ್ಕೆ ಐ‌ರ್‌ ಬಿ. ಕ೦ಪನಿಯು ಸೃಷ್ಟಿಸಿದ ಕೃತಕ ನೆರೆಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಜಂಟಿಯಾಗಿ ಜವಾಬ್ದಾರಿ ಹತ್ತು ಮುಖ್ಯವಾಗಿ ರಸ್ತೆ ಅಗಲೀಕರಣದಿಂದ ಮುಚ್ಚಲ್ಪಟ್ಟ ಚರಂಡಿಯನ್ನು ಸಮರ್ಪಕವಾಗಿ ನೀರಿನ ಹರಿವಿಗೆ ವ್ಯವಸ್ಥೆ ಮಾಡಿದಲ್ಲಿ ರಸ್ತೆಯಲ್ಲಿ ನೀರು ನಿಲ್ಲುವುದಿಲ್ಲ ಎಂದರು.

ಪುರಸಭೆ ಸದಸ್ಯ ಅಲ್ತಾಫ್ ಖರೂರಿ, ಮಳೆಗಾಲಕ್ಕೂ ಪೂರ್ವದಲ್ಲಿ ಪುರಸಭೆಗೆ ಚರಂಡಿಗಳ ಸ್ವಚ್ಚತೆ ಬಗ್ಗೆ ಹಾಗೂ ನೀರು ನಿಲ್ಲದಂತೆ ಮನವಿ ನೀಡಿದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲದಿರುವದು ಈಗ ನಮ್ಮ ವಾರ್ಡನಲ್ಲಿ ನೀರು ನಿಲ್ಲುವಂತಾಗಿದ್ದು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಹೇಳಿದರು

ತಂಜಿಮ್ ಅಧ್ಯಕ್ಷ ಶಾಬಂದ್ರಿ, ನಗರದಲ್ಲಿ ನೀರು ನಿಂತ ಕಡೆಗೆ ಯಾವ ರೀತಿ ಬೇರೆ ಮಾರ್ಗದಲ್ಲಿ ನೀರಿನ ಹರಿವಿನ ಮಾಡಬಹುದು. ಎಂದು ಸಲಹೆ ನೀಡಿದ ಅವರು ರಂಗೀನ ಕಟ್ಟೆಯಲ್ಲಿ ಕಾಂಪ್ಲೆಕ್ಸ್ ಜಮಾವಣೆಗೊಂಡ ನೀರನ್ನು ಕಡವಿನ ಕಟ್ಟೆಗೆ ಹಾಗೂ ಸಂಶುದ್ದೀನ್ ಸರ್ಕಲನಲ್ಲಿ ಜಮಾವಣೆಗೊಂಡ ನೀರನ್ನು ಶರಾಬಿಹೊಳೆಗೆ ಸಂಪರ್ಕ ಕಲ್ಪಿಸಿದ್ದಲ್ಲಿ ಭಟ್ಕಳ ನಗರ ಪ್ರದೇಶದ ಮುಳುಗಡೆಯಿಂದ ತಪ್ಪಲಿದೆ ಎಂದರು.

ಭಟ್ಕಳದಲ್ಲಿ ಈ ಹಿಂದೆ ಇದ್ದ ಸಾಕಷ್ಟು ರಾಜಕಾಲುವೆಗಳ ಒತ್ತುವರಿಯಾಗಿದ್ದು, ಅವೆಲ್ಲವುಗಳನ್ನು ತೆಗೆದು ಕಟ್ಟಡ ಮಾಡಲಾಗಿದೆ. ಮೊದಲು ಅವೆಲ್ಲವನ್ನು ತೆರವು ಮಾಡಿದರೆ ಭಟ್ಕಳ ನಗರ ಭಾಗವು ಜಲಾವ್ರತಗೊಳ್ಳುವುದು ನಿಲ್ಲಲಿದೆ ಎಂದು ಕೃಷ್ಣ ನಾಯ್ಕ ಆಸರಕೇರಿ ಹೇಳಿದರು

ಪುರಸಭೆ ಮುಖ್ಯಾಧಿಕಾರಿ ಸುರೇಶ ಕೆ. ಇದೇ ಸಂದರ್ಭದಲ್ಲಿ ನಗರ ಭಾಗದಲ್ಲಿ ನೀರಿನ ಹರಿವು ಸಮರ್ಪಕವಾಗಿ ಹೋಗುವಂತೆ ಮಾಡಬಹುದಾದ ಪರಿಹಾರದ ಬಗ್ಗೆ, ಜಿಲ್ಲಾಧಿ ಕಾರಿಗಳ ಮುಂದಿಟ್ಟರು. ಇದ ಕ್ಕೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪ್ರತಿಕ್ರಿಯಿಸಿ, ಭಟ್ಕಳದ

ನೆರೆ ಸಮಸ್ಯೆಯ ಬಗ್ಗೆ ಗಮನಕ್ಕೆ ಬಂದಿರುವ ಹಿನ್ನೆಲೆ ಭೇಟಿ ನೀಡಿದ್ದೇವೆ. ಸಾರ್ವಜನಿಕರು ಹಾಗ ಸಂಘಸಂಸ್ಥೆಗಳ ಪ್ರಮುಖರು ನಗರದ ನೆರೆ ಸಮಸ್ಯೆಯ ಬಗ್ಗೆ ನಿಮ್ಮಲ್ಲಿ ಏನಾದರು ಪರಿಹಾರಗಳಿದ್ದು ಅವು ಎಲ್ಲರಿಗೂ ಸಹಮತವಿದ್ದಲ್ಲಿ ನಮಗೆ ತಿಳಿಸಿರಿ ಹಾಗೂ ಇದಕ್ಕೆ ಒಂದು ಪರಿಹಾರ ಕಲ್ಪಿಸುವ ಬಗ್ಗೆ ಕ್ರಮಕ್ಕೆ ಸೂಚಿಸಲಿದ್ದೇವೆ ಎಂದರು.

ಒಟ್ಟಾರೆ ಊರು ಕೊಳ್ಳೆ ಹೊಡೆದನಂತರ ಕೊಟೆ ಬಾಗಿಲು ಹಾಕಿದರು ಎಂಬಂತೆ ತಾಲೂಕಿನಲ್ಲಿ ವರುಣಾರ್ಬದಿಂದ ಸಾರ್ವಜನಿಕರ ಜೀವನ ಅಸ್ತವ್ಯಸ್ತವಾದ ನಂತರವೆ ಜಿಲ್ಲಾಧಿಗಳೋ ಅಥವಾ ಇತರ ಅಧಿಕಾರಿಗಳ ನೇತ್ರತ್ವದಲ್ಲಿ ಸಭೆಯ ಮೇಲೆ ಸಭೆ ನಡೆಯುತ್ತದೆ ಮುಂಜಾಗ್ರತ ಕ್ರಮವಾಗಿ ತಾಲೂಕಿನಲ್ಲಿ ಯಾವುದೇ ಕ್ರಮವನ್ನು ಕೈಗೊಳ್ಳುವುದಿಲ್ಲ ಈ ಕಾರಣ ಹೊದ ವರುಷ ಅತಿವೃಷ್ಟಿಯ ಕಾರಣ ನಾಲ್ಕು ಜೀವಗಳು ತಮ್ಮ ಉಸಿರನ್ನು ಚೆಲ್ಲಿಬಿಟ್ಟವು ನಂತರ ಅಂದಿನ ಮುಖ್ಯಮಂತ್ರಿ ಸ್ಥಳಕ್ಕೆ ಬೇಟಿನೀಡಿ ಪರಿಹಾರದ ಮೇಲೆ ಪರಿಹಾರ ಘೋಷೀಸಿದ್ದರು ಆ ಪರಿಹಾರ ಎಷ್ಟರಮಟ್ಟಿಗೆ ನೊಂದವರನ್ನು ತಲುಪಿದೆ ಎನ್ನುವುದನ್ನು ಈ ಅಧಿಕಾರಿಗಳೆ ಹೇಳಬೇಕಾಗಿದೆ ಈ ಇನ್ನೋಂದು ಮಳೆಗಾಲ ಪ್ರಾರಂಬವಾಗಿದ್ದು ತಾಲೂಕಿನಲ್ಲಿ ಯತಾಸ್ಥಿತಿ ಕ್ರತಕ ನೇರೆ ಹಾವಳಿ ಸಾರ್ವಜನಿಕರ ಜೀವನ ಮೂರಾಬಟ್ಟೆ ಆಗಿದೆ ಜಿಲ್ಲಾದಿಕಾರಿಗಳು ಪ್ರತಿವರ್ಷದ ವಾಡಿಕೆಯಂತೆ ಸಾರ್ವಜನಿಕರೊಂದಿಗೆ ಸಭೆ ನಡೆದಿದ್ದಾರೆ ಈ ಸಭೆಯಿಂದ ಎಷ್ಟು ಉಪಯೋಗವಾಗಿದೆ ಅಥವಾ ಈ ಸಭೆಯು ಕೂಡ ಕಣ್ಣೋರೆಸುವ ತಂತ್ರವೆ ಎಂಬುವುದನ್ನು ಮುಂದಿನ ದಿನಗಳಲ್ಲಿ ಕಂಡುಕೊಳ್ಳ ಬೇಕಾಗಿದೆ

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಡಾ.ನಯನ ತಿಪ್ಪೇಸ್ವಾಮಿ, ತಾಲೂಕಿನ ವಿವಿಧ ಸಮುದಾಯದ ಮುಖಂಡರು, ಸಾರ್ವಜನಿಕರು ಇದ್ದರು.

WhatsApp
Facebook
Telegram
error: Content is protected !!
Scroll to Top