ರಾಷ್ಟ್ರೀಯ ಲೋಕ ಅದಾಲತ್ ಜುಲೈ 8ರಂದು

ಸಿದ್ದಾಪುರ ಸಿದ್ದಾಪುರದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಜುಲೈ 8ರಂದು ಹಮ್ಮಿಕೊಳ್ಳಲಾಗಿದೆ ಇಲಾಖೆಯವರು, ಮಾಧ್ಯಮ ಮಿತ್ರರು, ವಕೀಲರ ಸಂಘದವರು, ವಿವಿಧ ಸಂಘಟನೆಗಳು, ಸಾರ್ವಜನಿಕರು ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಜೆಎಂಎಫ್‌ಸಿ ಸಿವಿಲ್ ನ್ಯಾಯಾಧೀಶರಾದ ತಿಮ್ಮಯ್ಯ ಜಿ ತಿಳಿಸಿದರು


ಅವರು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಚೆಕ್ ಬೌನ್ಸ್ ಪಕರಣಗಳು ವೈವಾಹಿಕ ಪ್ರಕರಣಗಳು ಮೋಟಾರು ವಾಹನದ ಅಪಘಾತ ಪರಿಹಾರದ ಪ್ರಕರಣಗಳು ಭೂಸ್ವಾಧೀನ ಪ್ರಕರಣಗಳು ಹಾಗೂ ರಾಜಿಯಾಗುವ ವಂತ ಎಲ್ಲಾ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಲೋಕಧಾಲಕ್ ಮೂಲಕ ವೇದಿಕೆಯನ್ನು ಕಲ್ಪಿಸಿಕೊಡಲಾಗಿದೆ ಸಂಬಂಧಪಟ್ಟ ಕಕ್ಷಿದಾರರು ಸಾರ್ವಜನಿಕರು ತಮ್ಮ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಲೋಕಅದಾಲತನಲ್ಲಿ ಬಗೆರಿಸಿಕೊಂಡು ತಮ್ಮ ಅಮೂಲ್ಯವಾದ ಹಣ ಮತ್ತು ಸಮಯದ ಉಳಿತಾಯದೊಂದಿಗೆ ನೆಮ್ಮದಿಯ ಜೀವನ ನಡೆಸುವಂತೆ ಹಾಗೂ ಸದರಿ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಅದಾಲತನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ತಮ್ಮ ಪರ ನ್ಯಾಯವಾದಿಗಳು, ಹಾಗೂ ಸೇವಾ ಸಮಿತಿಗೆ ಭೇಟಿ ನೀಡಬಹುದೆಂದು ತಿಳಿಸಿದರು.
ಕಳೆದ ಬಾರಿ ಸಿವಿಲ್ ಮತ್ತು ಕ್ರಿಮಿನಲ್ 71 ಪ್ರಕರಣ ಪೇಂಟಿಂಗ್ ಇದ್ದು, ವ್ಯಾಜ್ಯ ಪೂರ್ವ 175 ಪ್ರಕರಣ, 43 ಪಿಟ್ಟಿ ಕೇಸ್ ಪ್ರಕರಣ ಗಳನ್ನು ಇತ್ಯರ್ಥ ಪಡಿಸಲಾಗಿದೆ, ಈ ಬಾರಿ ಒಟ್ಟು 200 ಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವದು ಎಂದರು.
ಹಿಂದಿನ ಅದಾಲತನಲ್ಲಿ ಉತ್ತಮ ಸಹಕಾರ ಬಂದಿದೆ. ಮುಂದೆಯೂ ಇದೇ ರೀತಿಯ ಸಹಕಾರ ಎಲ್ಲರಿಂದಲೂ ಬೇಕು. ಅದಾಲತ್ ಯಶಸ್ವಿಗೊಳಿಸಬೇಕು ಎಂದರು.
ಪೋಟೋ:5ಎಸಡಿಪಿ 1
ಪ್ರತ್ಯಕ್ಷ ಪರೋಕ್ಷ ಸಹಕಾರ ನೀಡಿದ ವರಿಗೆಲ್ಲಾ ಧನ್ಯವಾದಗಳು, ಈಗಲೂ ್ದೇ ರೀತಿಯ ಸಹಕಾರ ನೀಡುವಂತೆ ವುನಂತಿಸಿದ್ದಾರೆ

WhatsApp
Facebook
Telegram
error: Content is protected !!
Scroll to Top