ಭಟ್ಕಳ ಚೌಥನಿಯ ಶಕ್ತಿ ಪೀಠ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಕಾಳ ಹಸ್ತೇoದ್ರ ಸರಸ್ವತೀಪರಮಪೂಜ್ಯ ಅನಂತ ಶ್ರೀ ವಿಭೂಷಿತ ಕಾಳ ಹಸ್ತೇoದ್ರ ಸರಸ್ವತೀ ಸ್ವಾಮೀಜಿ ಬೇಟಿ

ಭಟ್ಕಳದ ಶಕ್ತಿ ಪೀಠ ಗಳಲ್ಲಿ ಒಂದಾದ ಚೌಥನಿಯ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಚಾತುರ್ಮಾಸ್ಯ ದ ಪೂರ್ವ ಭಾವಿಯಾಗಿ ಶ್ರೀಮತ್ ಜಗದ್ಗುರು ಆನೆಗುಂದಿ ಸರಸ್ವತೀ ಪೀಠದ ಮಠಾಧೀಶರಾದ ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಕಾಳ ಹಸ್ತೇoದ್ರ ಸರಸ್ವತೀ ಮಹಾಸ್ವಾಮಿಗಳವರು ಭೇಟಿಯಾಗಿ ಅಶೀರ್ವಚನ ನೀಡಿದರು.

ಉಡುಪಿ ಜಿಲ್ಲೆಯ ಪಡುಕುತ್ಯಾರುವಿನಲ್ಲಿ ಜುಲೈ 3 ರಿಂದ ಸೆಪ್ಟೆಂಬರ್ 29ರ ವರೆಗೆ 19ನೆಯ ವರ್ಷದ ಶೋಭಕೃತ್ ಸಂವತ್ಸರದ ಚಾತುರ್ಮಾಸ್ಯ ವೃತಾಚರಣೆ ನಡೆಯಲಿದ್ದು ಪೂರ್ವಭಾವಿ ಯಾಗಿ ಭಟ್ಕಳಕ್ಕೆ ಆಗಮಿಸಿದ್ದರು. ಶ್ರೀ ಗಳು “ಚಾತುರ್ಮಾಸ್ಯ ದ ವಿಶೇಷತೆಯನ್ನು ವಿವರಿಸುವದರ ಜೊತೆಗೆ ಹಿಂದೂ ಸಮಾಜದ ಹದಿ ಹರೆಯದವರಲ್ಲಿ ದೇವಸ್ಥಾನಕ್ಕೆ ಬರುವುದರ ಆಸಕ್ತಿಯನ್ನು ಹೆಚ್ಚಿಸುವ ಪ್ರಯತ್ನವನ್ನು ಎಲ್ಲ ಪಾಲಕ ಪೋಷಕರು ಮಾಡಬೇಕಾಗಿ ವಿನಂತಿಸಿದರು. ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಸರ್ವ ಪ್ರಯತ್ನ ಹಿರಿಯವರದಾಗಬೇಕು, ಯುವಕ ಯುವತಿಯರು ಸರಿಯಾದ ಸನ್ಮಾರ್ಗದಲ್ಲಿ ಭವಿಷ್ಯವನ್ನು ರೂಪಿಸುವಂತೆ ಕರೆ ನೀಡಿದರು.ಭಟ್ಕಳದ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಗಜಾನನ ಎನ್ ಆಚಾರ್ಯ,ಕಾರ್ಯದರ್ಶಿ ವೆಂಕಟೇಶ ಆರ್ ಆಚಾರ್ಯ,ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷರಾದ ವಡೇರ ಹೋಬಳಿ ಶ್ರೀ ವಿ. ಶ್ರೀಧರ ಆಚಾರ್ಯ. ಹಾಗೂ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ, ಬಿ,ಆಚಾರ್ಯ, ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಳಿ ಚಂದ್ರಯ್ಯ ಆಚಾರ್ಯ, ಸುಧಾಕರ ಆಚಾರ್ಯ ತ್ರಾಸಿ , ಹಾಗೂ ಶ್ರೀ ಕ್ಷೇತ್ರದ ಆಡಳಿತ ಸಮಿತಿ, ಮತ್ತು ಸರ್ವ ಸಮಿತಿಗಳು, ಸಮಾಜ ಬಾಂಧವರು ಆಗಮಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.

WhatsApp
Facebook
Telegram
error: Content is protected !!
Scroll to Top