ಸಚಿವ ಮಂಕಾಳ ವೈದ್ಯರಿಂದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ

ಅರಣ್ಯ ನಮ್ಮೆಲ್ಲರ ಸಂಪತ್ತು ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ; ಮಂಕಾಳು ವೈದ್ಯ

ಭಟ್ಕಳ : ನಮ್ಮ ಉತ್ತರ ಕನ್ನಡದಲ್ಲಿ 80% ದಷ್ಟು ಅರಣ್ಯ ಭೂಮಿ ಇದೆ ಈ ಸಂಪತ್ತನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ ಅರಣ್ಯ ರಕ್ಷಣೆ ಕೇವಲ ಅರಣ್ಯ ಇಲಾಖೆಯದಷ್ಟೆ ಅಲ್ಲಾ ನಮ್ಮ ಕರ್ತವ್ಯವು ಹೌದು ಎಂದು ಸಚಿವ ಮಂಕಾಳು ವೈದ್ಯರು ಹೇಳಿದರು.

ಅವರು ಭಟ್ಕಳ ತಾಲೂಕಿನ ಸಾಗರ ರಸ್ತೆಯಲ್ಲಿರುವ ಗ್ರೀನ್ ಪಾರ್ಕ ಅಲ್ಲಿ ಅರಣ್ಯ ಇಲಾಖೆ ಆಯೋಜನೆ ಮಾಡಿದ್ದ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ ನಮ್ಮ ಉತ್ತರ ಕನ್ನಡ ಸಂಪನ್ನಬರಿತವಾದ ಪ್ರದೇಶವಾಗಿದೆ ಜಿಲ್ಲೆಯಲ್ಲಿ ಸುಮಾರು 80 ಶೇಕಡದಷ್ಟು ಅರಣ್ಯ ಪ್ರದೇಶವಿದೆ ಇದನ್ನು ನಾವು ಉಳಿಸಿಕೊಂಡ ಹೊಗಬೇಕಿದೆ ನಮ್ಮ ಜಿಲ್ಲೆಯಲ್ಲಿ ಸಾವಿರಗಟ್ಟಲೆ ಅರಣ್ಯ ಅತಿಕ್ರಮಣದಾರರಿದ್ದಾರೆ ಅವರು ಅರಣ್ಯವನ್ನು ರಕ್ಷಿಸುವ ಕೆಲಸ ಮಾಡಬೇಕು ಅತಿಕ್ರಮಣದಾರರಿಗೆ ಶೀಘ್ರದಲ್ಲಿ ಹಕ್ಕು ಪತ್ರ ಒದಗಿಸಲಾಗುವುದು ಆದರೆ ಯಾರು ಹೊಸ ಅತಿಕ್ರಮಣಕ್ಜೆ ಅವಕಾಶ ಮಾಡಿಕೊಡಬೇಡಿ ಕಾಡು ಇದ್ದರೆ ನಾಡು ಈ ಸತ್ಯವನ್ನು ನಾವು ತಿಳಿದುಕೊಳ್ಳ ಬೇಕಾಗಿದೆ ಎಂದು ಹೇಳಿದರು

ಕಾರ್ಯಕ್ರಮದ ಕೊನೆಯಲ್ಲಿ ಸಚಿವ ಮಂಕಾಳು ವೈದ್ಯರು ಅರಣ್ಯ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಕುಶಲೊಪರಿಯನ್ನು ವಿಚಾರಿಸಿದರು ಮತ್ತು ಸಾರ್ವಜನಿಕರೊಂದಿಗೆ ಆತ್ಮಿಯತೆಯಿಂದ ಬೇರೆತು ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು

ಈ ಸಂದರ್ಬದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು .

WhatsApp
Facebook
Telegram
error: Content is protected !!
Scroll to Top