ಭಟ್ಕಳ ಬೆಳ್ಕೆ ಸರಕಾರಿ ಪ್ರೌಡಶಾಲೆಯಲ್ಲಿ ಯೋಗ ದಿನಾಚರಣೆ

ಒತ್ತಡ, ಆತಂಕವನ್ನು ಕಡಿಮೆ ಮಾಡಲು ಹಾಗೂ ಏಕಾಗ್ರತೆಯನ್ನು ಹೆಚ್ಚಿಸಲು ಯೋಗವು ಸಹಕಾರಿ ಎಂದು ಸರಕಾರಿ ಪ್ರೌಢಶಾಲೆ ಬೆಳಕೆಯ ಮುಖ್ಯಾಧ್ಯಾಪಕರಾದ ಶಾಲಿನಿ ನಾಯಕ ಹೇಳಿದರು

ಅವರು ಪ್ರೌಢಶಾಲೆಯ ಎನ್ ಎಸ್ ಎಸ ಘಟಕದ ಅಡಿಯಲ್ಲಿ ಜರುಗಿದ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪ್ರತಿ ದಿನ ಬೆಳಿಗ್ಗೆ ಯೋಗಾಭ್ಯಾಸ ಮಾಡುವುದರಿಂದ ತಮ್ಮ ಆರೋಗ್ಯದ ಜೊತೆ, ಮಾನಸಿಕವಾಗಿ ಸದೃಢರಾಗಬಹುದು. ಆ ಮೂಲಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಾಧ್ಯ ಎಂದು ಹೇಳಿದರು. ಕಾರ್ಯವನ್ನು ಉದ್ಘಾಟಿಸಿದ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಲೋಕೇಶ ನಾಯ್ಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಎಸ್ ಡಿ ಎಂ ಸಿ ಸದಸ್ಯ ವೆಂಕಟೇಶ ನಾಯ್ಕ, ಪಾಲಕರಾದ ಶ್ರೀಧರ ನಾಯ್ಕ, ಗೀತಾ ನಾಯ್ಕ, ಸಾವಿತ್ರಿ ನಾಯ್ಕ, ಶಿಕ್ಷಕ ವೃಂದದವರು ಉಪಸ್ಥಿತಿತರಿದ್ದರು. ಪ್ರಾರಂಭದಲ್ಲಿ ತನುಜಾ ಸಂಗಡಿಗರು ಯೋಗ ಗೀತೆಯನ್ನು ಹಾಡಿದರು. ಎನ್ ಎಸ್ ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಯೋಗದಿನಾಚರಣೆಯ ಬಗ್ಗೆ ಪ್ರಾಸ್ತಾವಿಕ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಸಿ ಎಸ್ ಬೈಲೂರ ವಂದನಾರ್ಪಣೆ ಮಾಡಿದರು. ಭಾರತಿ ಶಾನಭಾಗ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಆಸನಗಳ ಪ್ರದರ್ಶನ ಮಾಡಲಾಯಿತು

WhatsApp
Facebook
Telegram
error: Content is protected !!
Scroll to Top