ಭಟ್ಕಳ ಬೆಳ್ಕೆಯಲ್ಲಿ ಸಚಿವ ಮಂಕಾಳ ವೈದ್ಯರ ಅಭಿಮಾನಿಗಳ ಶುಭಹಾರೈಕೆಯ ಕಟೌಟರ್ ದ್ವಂಸ ಮಾಡಿದ ಕಿಡಿಗೇಡಿಗಳು

ಪೋಲಿಸರಿಗೆ ದೂರು ತನಿಖೆಯಲ್ಲಿ ತೊಡಗಿರುವ ಪೊಲಿಸ್ ಇಲಾಖೆ

ಭಟ್ಕಳ ತಾಲೂಕಿನ ಬೆಳ್ಕೆಯಲ್ಲಿ ಸಚಿವ ಮಂಕಾಳ ವೈದ್ಯರ ಅಭಿಮಾನಿಗಳು ವೈದ್ಯರಿಗೆ ಶುಭಹಾರೈಕೆಗೆ ಹಾಕಿರುವ ಕೌಟೌಟರಗಳನ್ನು ಕಿಡಿಗೇಡಿಗಳು ದ್ವೇಷದಿಂದ ದ್ವಂಸ ಮಾಡಿದ್ದು ಈ ಬಗ್ಗೆ ಸಚಿವ ವೈದ್ಯರ ಅಭಿಮಾನಿ ಬಳಗ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಿಡಿಗೇಡಿಗಳ ಪತ್ತೆಗೆ ತನಿಖೆಯನ್ನು ನಡೆಸುತ್ತಿದ್ದಾರೆ

ತಾಲೂಕಿ ಬೆಳ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಚಿವ ಮಂಕಾಳ ವೈದ್ಯರಿಗೆ ಅಭಿನಂದನೆ ಸಲ್ಲಿಸಲು ವೈದ್ಯರ ಅಭಿಮಾನಿ ಬಳಗ ನಿಲ್ಲಿಸಿದ್ದ ಆಳೆತ್ತರದ ಕೌಟೌಟ್ ಮತ್ತು ಬ್ಯಾನರಗಳನ್ನು ದಿನಾಂಕ 18/06/2023 ರವಿವಾರ ಮದ್ಯರಾತ್ರಿ ಕೆಲವು ಕಿಡಿಗೇಡಿಗಳು ದ್ವಂಸಮಾಡಿರುವುದು ಬೆಳಕಿಗೆ ಬಂದಿದೆ ಈ ಹಿನ್ನೆಲೆಯಲ್ಲಿ ಸಚಿವ ವೈದ್ಯರ ಅಭಿಮಾನಿ ಬಳಗ ಗ್ರಾಮೀಣ ಠಾಣೆಗೆ ದೂರು ಕೊಟ್ಟಿದ್ದು ಗ್ರಾಮೀಣ ಪೊಲಿಸ್ ಠಾಣಾ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ ಪ್ರಕರಣವನ್ನು ಪೋಲಿಸ್ ಇಲಾಖೆ ಎಷ್ಟು ಗಂಬಿರವಾಗಿ ಪರಿಗಣಿಸಿದೆ ಎಂದರೆ ಘಟನಾ ಸ್ಥಳಕ್ಕೆ ಕುದ್ದು ಡಿ ವೈ ಎಸ್ ಪಿ ಅವರು ಬೇಟಿ ನಿಡಿದ್ದು ತಪ್ಪಿತಸ್ಥರ ಮೇಲೆ ಕ್ರಮವಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ

ಪ್ರಕರಣದ ಬಗ್ಗೆ ಬೆಳ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ ನಾಯ್ಕ ಮಾತನಾಡಿ ನಮ್ಮ ಸಚಿವ ಮಂಕಾಳ ವೈದ್ಯರು ಜನಪರವಾಗಿ ಕೆಲಸ ಮಾಡುತ್ತಿದ್ದು ಅವರ ಜನಪ್ರೀಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇದನ್ನು ಸಹಿಸದ ಕೆಲವು ಕಿಡಿಗೇಡಿಗಳು ವೈದ್ಯರಿಗೆ ಶುಭಕೊರಲು ಹಾಕಿದ್ದ ಕೌಟೌಟಗಳನ್ನು ದ್ವಂಸಮಾಡಿದ್ದಾರೆ ಈ ಬಗ್ಗೆ ಈಗಾಗಲೆ ಪೊಲಿಸರಿಗೆ ದೂರು ನಿಡಿದ್ದು ಪೊಲಿಸರು ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಹೇಳಿದರು

WhatsApp
Facebook
Telegram
error: Content is protected !!
Scroll to Top