ರೈತರ ಹೊಟ್ಟೆಯ ಮೇಲೆ ಬರೆ ಎಳೆಯಿತೆ ಭಟ್ಕಳ ತೋಟಗಾರಿಕಾ ಇಲಾಖೆ?

ಮೈಲು ತುತ್ತೆಗೆ ಬಂದ ಸಬ್ಸಿಡಿ ಬೇಡವೆಂದರೆ ತೋಟಗಾರಿಕಾ ಇಲಾಖಾ ಅಧಿಕಾರಿ?

ಕರಾವಳಿ ಸಮಾಚಾರದ ಸ್ಟೀಂಗ್ ಆಪರೇಷನ್

ಭಟ್ಕಳ ತಾಲೂಕಿನಲ್ಲಿ ರೈತರ ಮೈಲುತುತ್ತೆಯ ಸಬ್ಸಿಡಿ ಹಣ ರೈತರನ್ನು ತಲುಪದೆ ರೈತರು ಪರದಾಡುತ್ತಿದ್ದು ಮೊದಲೆ ಸಂಕಷ್ಟದಲ್ಲಿದ್ದ ರೈತವರ್ಗ ತೊಟಗಾರಿಕಾ ಇಲಾಖೆಯ ಬೆಜವಬ್ದಾರಿತನ ಕರಾವಳಿ ಸಮಾಚಾರದ ಸ್ಟಿಂಗ್ ಆಪರೇಷನ್ ಇಂದ ಬಯಲಾಗಿದೆ

ಇಂದು ಈ ಸರಕಾರಿ ಇಲಾಖಾ ಅಧಿಕಾರಿಗಳು ಯಾವ ಮಟ್ಟದಲ್ಲಿ ಬೇಜವಬ್ದಾರಿತನವನ್ನು ತೊರಿಸುತ್ತಿದ್ದಾರೆ ಎಂದರೆ ದೇವರು ಕೊಟ್ಟರು ಪುಜಾರಿ ಕೊಡ ಎಂಬ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಭಟ್ಕಳ ತಾಲೂಕಿನಲ್ಲಿ 2022,23 ರ ಸಾಲಿನಲ್ಲಿ ರೈತರಿಗೆ ತೊಟಗಾರಿಕಾ ಇಲಾಖೆಯಿಂದ ಕೊಡುವ ಮೈಲುತುತ್ತೆಯ ಸಬ್ಸಿಡಿ ಹಣಕ್ಕಾಗಿ ಸುಮಾರು 35 ರಿಂದ 40 ಕ್ಕೂ ಅಧಿಕ ರೈತರು ಎಲ್ಲಾ ದಾಖಲೆ ಸಹಿತ ತೋಟಗಾರಿಕಾ ಇಲಾಖೆಗೆ ಸಲ್ಲಿಸಿದ್ದರು ಆದರೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಹೆಚ್ ಕೆ ಬಿಳಗಿ ಅವರು ರೈತರಿಂದ ಎಲ್ಲಾ ದಾಖಲೆ ತೆಗೆದುಕೊಂಡಿದ್ದರು ಸಮಯದ ಅಭಾವ ಎಂಬ ಸಭೂಬಬನ್ನು ಮುಂದಿಟ್ಟುಕೊಂಡು ಅನುದಾನ ಬಂದಿದ್ದರು ಕೊನೆಯ ಸಮಯದಲ್ಲಿ ಅನುದಾನವನ್ನೆ ತಿರಸ್ಕರಿಸಿದ್ದಾರೆ.

2022 23 ರ ಸಾಲಿನ ಮೈಲುತುತ್ತೆ ಅನುದಾನಗಳು ತಮಗೆ ದೊರೆಯದ ಕಾರಣ ರೈತರು ನಮ್ಮ ವಾಹಿನಿಯನ್ನು ಸಂಪರ್ಕಿಸಿ ಅನುದಾನ ದೊರಕಿಸಿಕೊಡುವ ಬೆಡಿಕೆಯನ್ನು ಇಡುತ್ತಲೆ ಬರುತ್ತಿದ್ದರು ರೈತರ ಆಗ್ರಹದ ಮೇರೆಗೆ ನಮ್ಮ ವಾಹಿನಿ ತೋಟಗಾರಿಕೆ ಇಲಾಖೆಯ ಸತ್ಯಾಸತ್ಯತೆಯ ಬಗ್ಗೆ ಒಂದು ಸ್ಟಿಂಗ್ ಆಪರೇಷನ್ ನಡೆಸುವ ನಿರ್ಧಾರವನ್ನು ಮಾಡಿತ್ತು ಈ ಸ್ಟೀಂಗ್ ಆಪರೇಷನ್ ಫಲವೆ ರೈತರು  ತಮಗೆ ಮೈಲೂತುತ್ತೆ  ಸಬ್ಸಿಡಿ ಹಣ ನೀಡುವಂತೆ  ಎಲ್ಲಾ ದಾಖಲೆ ಸಹಿತ  ತೋಟಗಾರಿಕಾ ಇಲಾಖೆಗೆ  ಸಲ್ಲಿಸಿದ್ದರೂ ಹಿರಿಯ ಸಹಾಯಕ  ತೋಟಗಾರಿಕಾ ನಿರ್ದೇಶಕರಾದ ಹೆಚ್ ಕೆ ಬಿಳಗಿ ಅವರು  ರೈತರಿಂದ ಎಲ್ಲಾ ದಾಖಲೆ ತೆಗೆದುಕೊಂಡಿದ್ದರು ಅನುದಾನ ಬಂದಿದ್ದರು ಕೊನೆಯ ಸಮಯದಲ್ಲಿ ಅನುದಾನವನ್ನೆ ತಿರಸ್ಕರಿಸಿದ್ದಾರೆ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ

ಈ ಬಗ್ಗೆ ಅಧಿಕಾರಿಯಲ್ಲಿ ವಿಚಾರಿಸಿದರೆ ಈ ಬಗ್ಗೆ ವಿಚಾರಿಸಿದರೆ ನಮಗೆ ದಾಖಲೆ ಒದಗಿಸಲು ಸಮಯದ ಅಭಾವವಾದ ಕಾರಣ ನಾವು ಅದನ್ನು ಬೆಡವೆಂದು ಹೆಳಬೇಕಾಯಿತು ಮುಂದಿನ ದಿನಗಳಲ್ಲಿ 2022,23 ಮತ್ತು 2023,24 ಎರಡು ಅವದಿಯ ಅನುದಾನವನ್ನು ಒಟ್ಟಿಗೆ ರೈತರಿಗೆ ಒದಗಿಸಲಾಗುವುದು ಎಂಬ ಹಸಿ ಸುಳ್ಳನ್ನು ಹೇಳುತ್ತಾರೆ ಇದೆಂತಾ ಅವಸ್ತೆ ಸ್ವಾಮಿ ಮೊದಲೆ ರೈತರು ಸರಿಯಾದ ಮಳೆ ಬೆಳೆ ಇಲ್ಲದೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಇದರ ಮಧ್ಯ ಇಂತ ಹೊಣೆಗೇಡಿ ಅಧಿಕಾರಿಯಿಂದ ರೈತನ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ ಒಟ್ಟಾರೆ ಈ ಬಾರಿ ಮೈಲುತುತ್ತೆಯ ರೈತರ ಸಬ್ಸಿಡಿಗೆ ಕತ್ತರಿ ಬಿದ್ದಿರುವುದು ಮಾತ್ರ ಸತ್ಯ ಈ ಬಗ್ಗೆ ಭಟ್ಕಳದ ಕ್ಷೇತ್ರದ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯರು ಸೂಕ್ತ ಕ್ರಮ ವಹಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ

WhatsApp
Facebook
Telegram
error: Content is protected !!
Scroll to Top