ಶಿಕ್ಷಕರು ದೇಶ ಕಟ್ಟುವ ಕೆಲಸ ಮಾಡುತ್ತಾರೆ ಸಚಿವ ಮಂಕಾಳ ವೈದ್ಯ

ಮಕ್ಕಳ ಭವಿಷ್ಯವನ್ನು ರೂಪಿಸುವ ಕೆಲಸದಲ್ಲಿ ನನಗೆ ಸಹಾಯ ಮಾಡಿ ಶಿಕ್ಷಕ ವರ್ಗದಲ್ಲಿ ಸಚಿವ ಮಂಕಾಳು ವೈದ್ಯರ ಕೊರಿಕೆ

ಭಟ್ಕಳ: ಶಿಕ್ಷಕರು ಜವಾಬ್ದಾರಿಯುತ ಪ್ರಜೇಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ನಾನು ಇಂತಹ ಶಿಕ್ಷಕರಿಗೆ ಮಹತ್ವವನ್ನು ನೀಡುತ್ತೆನೆ ಉತ್ತಮ ಶಿಕ್ಷಕರಾದವರು ತಮ್ಮ ಕರ್ತವ್ಯವನ್ನು ನಿಷ್ಟೇಯಿಂದ ಪಾಲಿಸಬೇಕು ನಾನೂ ಕೂಡ ನಿಮ್ಮನ್ನು ಗುರುವಿನ ಸ್ಥಾನದಲ್ಲಿಟ್ಟು ಗೌರವಿಸುತ್ತೆನೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು

ಒಂದು ಶಾಲೆ ಒಂದು ದೇವಸ್ಥಾನಕ್ಕೆ ಸಮಾನ ಶಾಲೆಯಲ್ಲಿ ದೇಶ ಕಟ್ಟುವ ಭಾವಿ ಪ್ರಜೇಗಳು ತಯಾರಾಗುತ್ತಾರೆ ಗುರುವಿನ ಸ್ಥಾನದಲ್ಲಿರುವ ಶಿಕ್ಷಕ ಮಕ್ಕಳ್ಳನ್ನು ತನ್ನ ಮಕ್ಕಳಂತೆ ಅವರ ತಪ್ಪು ಒಪ್ಪುಗಳನ್ನು ತಿದ್ದಿ ತೀಡಿ ಅವರ ಭವಿಷ್ಯವನ್ನು ರೂಪಿಸ ಬೇಕು ಇದು ಪ್ರತಿಯೋಬ್ಬ ಶಿಕ್ಷಕನ ಕರ್ತವ್ಯವಾಗಿರುತ್ತದೆ ನಾನು ಸಚಿವನಾಗಿದ್ದರು ಕೂಡ ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೆನೆ ಮಕ್ಕಳ ಭವಿಷ್ಯವನ್ನು ರೂಪಿಸೋಣ ನನಗೆ ನಿಮ್ಮ ಸಹಾಯ ಸಹಕಾರ ಬೇಕಾಗಿದೆ ಶಿಕ್ಷಣದ ವಿಷಯಲ್ಲಿ ರಾಜಕಿಯವನ್ನು ಬದಿಗಿಡೋಣ ನಾನು ನಿನ್ನೆ ಮೊನ್ನೆಗಳ ವಿಷಯದ ಬಗ್ಗೆ ಮಾತನಾಡುವುದಿಲ್ಲಾ ಮುಂದಿನ ದಿನದಲ್ಲಿ ನಾವು ಎಲ್ಲರೂ ಸೇರಿ ಮಕ್ಕಳ ಭವಿಷ್ಯದ ಬಗ್ಗೆ ಗಂಬಿರವಾಗಿ ಯೋಚಿಸೊಣ

ನನ್ನಿಂದ ನಿಮಗೆ ಯಾವುದೆ ಸಹಾಯ ಸಹಾಕಾರ ಬೇಕಿದ್ದರು ಯಾರು ಬೇಕಾದರೂ ನೇರವಾಗಿ ಕೇಳಿ ನನ್ನ ಕ್ಷೇತ್ರದ ಮಕ್ಕಳು ವಿಧ್ಯೆಯಿಂದ ವಂಚಿತರಾಗುವುದನ್ನು ನಾನು ಸಹಿಸುವುದಿಲ್ಲಾ ಶಾಲೆಗಳು ಶೌಚಾಲಯಗಳು ಸುಸಜ್ಜಿಯವಾಗಿರ ಬೇಕು ಮೂಲ ಭೂತ ಸೌಕರ್ಯಗಳು ಎಲ್ಲ ಮಕ್ಕಳಿಗೂ ದೋರೆಯ ಬೇಕು ಎಂದು ಹೇಳಿದರು

ಸಭೆಯಲ್ಲಿ ಅನೇಕ ಶಿಕ್ಷಕರು ತಮ್ಮ ತಮ್ಮ ಶಾಲೆಗಳಲ್ಲಿರುವ ಅನಾನೂಕೂಲತೆಯ ಬಗ್ಗೆ ಸಚಿರ ಮುಂದೆ ತೊಡಿಕೊಂಡರು ಹಾಗು ಸಚಿವರು ನಾಳೆಯಿಂದ ಕೊರತೆ ನಿಗಿಸುವ ಕಾರ್ಯಪ್ರಾರಂಬವಾಗುತ್ತಿದ್ದು ಏನೆ ಸಮಸ್ಯೆಗಳಿದ್ದರು ತಮ್ಮನ್ನು ಸಂಪರ್ಕಿಸ ಬಹುದು ಎಂದು ಹೇಳಿದರು

ಈ ಸಂದರ್ಬದಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಪ್ರಭಾಕರ ಚಿಕ್ಕನ‌ ಮನೆ , ಪ್ರಭಾರೆ ಕ್ಷೇತ್ರ ಶಿಕ್ಷಣಾ ಅಧಿಕಾರಿ ಶಾರದ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top