ವಿಪತ್ತು ನಿರ್ವಹಣೆಗೆ ಸಜ್ಜಾದ ಧರ್ಮಸ್ಥಳ ಶೌರ್ಯ ವಿಪತ್ತು ಘಟಕ

ತಾಲೂಕಿನ 90 ಜನ ಸ್ಥಳೀಯ ಸ್ವಯಂ ಸೇವಕರು ತಂಡ

ಭಟ್ಕಳ ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಭಟ್ಕಳ ತಾಲೂಕು ವತಿಯಿಂದ ತಾಲೂಕಿನಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಭೆ ಆಯೋಜನೆ ಮಾಡಲಾಯಿತು.


ಮಳೆಗಾಲದ ಸಂದರ್ಭದಲ್ಲಿ ಸಂಭವಿಸುವ ವಿಪತ್ತಿನ ಕಾಲದಲ್ಲಿ ಜನ, ಜಾನುವಾರಗಳ ರಕ್ಷಣೆಗಾಗಿ, ಪರಿಸರ ಸಂರಕ್ಷಣೆಗಾಗಿ ಸ್ವಯಂ ಇಚ್ಛೆಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಈ ಸಭೆಯಲ್ಲಿ ವಿಪತ್ತು ನಿರ್ವಹಣೆ ತರಬೇತಿ ಪಡೆದ ಸ್ಥಳೀಯ 90 ಜನ ಸ್ವಯಂ ಸೇವಕರ ತಂಡ ಪಾಲ್ಗೊಂಡು ಸಮಾಲೋಚನೆ ನಡೆಸಿದರು.

ಸಭೆಯನ್ನು ಅಗ್ನಿ ಶಾಮಕ ಧಳದ ಠಾಣಾಧಿಕಾರಿ ರಮೇಶ ಶೆಟ್ಟಿಯವರು ಉದ್ಘಾಟಿಸಿ ಪೂಜ್ಯರ ಸಾಮಾಜಿಕ ಕಳಕಳಿಯ ಬಗ್ಗೆ ಶ್ಲಾಘಿಸಿದರು. ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ಮಾನ್ಯ ಪ್ರಾದೇಶಿಕ ನಿರ್ದೇಶಕರು ಜನಜಾಗೃತಿ ವೇದಿಕೆ ಹಾಗೂ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ರವರು ಸಭೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಬಗ್ಗೆ ತಮ್ಮ ಪ್ರಾಸ್ತಾವಿಕ ನುಡಿಯ ಮೂಲಕ ಪೂಜ್ಯರ ದೂರದೃಷ್ಟಿಯ ಆಲೋಚನೆಯ ಫಲವೇ ರಾಜ್ಯದಲ್ಲಿ ವಿಪತ್ತು ನಿರ್ವಹಣಾ ಘಟಕ ಸ್ಥಾಪಿಸಲಾಗಿದೆ ಎಂದರು. ವಿಪತ್ತು ಘಟಕದ ಸ್ವಯಂ ಸೇವಕರ ಸೇವೆಯ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಿದರು. ಪೂಜ್ಯರ ಮಾರ್ಗದರ್ಶನದಂತೆ ತಾಲೂಕಿನ ಘಟಕಗಳಿಗೆ ಉತ್ತಮ ರೂಪರೇಷು ನೀಡುವ ದೃಷ್ಟಿಯಿಂದ ಭಟ್ಕಳ ತಾಲೂಕಿನ 6 ವಿಪತ್ತು ಘಟಕದ ಪದಾಧಿಕಾರಿಗಳು ಆಯ್ಕೆ ಮಾಡುವ ಮೂಲಕ ತಾಲೂಕಿನ ಈ ಟೀಮ್ ಗೆ ಓರ್ವ ಮಾಸ್ಟರ್ ಮತ್ತು ಕ್ಯಾಪ್ಟನ್‌ ಆಯ್ಕೆ ಮಾಡಲಾಯಿತು. ತಾಲೂಕಿನ ಟೀಮ್ ನ ಮಾಸ್ಟರ್ ಆಗಿ ಮಾಜಿ ಸೈನಿಕರಾದ, ಭಟ್ಕಳ ವಿಪತ್ತು ಘಟಕದ ಸದಸ್ಯರಾದ ಶ್ರೀ ಶ್ರೀಕಾಂತ್ ನಾಯ್ಕ, ಹಾಗೂ ಕ್ಯಾಪ್ಟನ್ ಆಗಿ ಬೇಂಗ್ರೆ ಘಟಕದ ಸ್ವಯಂ ಸೇವಕರಾದ ಜ್ಯೋತಿ ಯವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಸತೀಶ್ ಶೇಟ್, ಸದಸ್ಯರಾದ ಶ್ರೀಧರ ನಾಯ್ಕ ಆಸರಕೇರಿ, ನಾಮಧಾರಿ ಅಧ್ಯಕ್ಷರಾದ ಶ್ರೀಕೃಷ್ಣ ನಾಯ್ಕ ಆಸರಕೇರಿ, ಅಗ್ನಿ ಶಾಮಕ ದಳದ ಸಿಬ್ಬಂದಿ ಕುಮಾರ ನಾಯ್ಕ, ವಿಪತ್ತು ನಿರ್ವಹಣಾ ವಿಭಾಗ ಯೋಜನಾಧಿಕಾರಿ ಜೈವಂತ್ ಪಟಗಾರ, ಜನಜಾಗೃತಿ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ ಆಚಾರ್ಯ ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ಗಣೇಶ ಡಿ ನಾಯ್ಕ ಸ್ವಾಗತಿಸಿದರು. ಮೇಲ್ವಿಚಾರಕರ ಪ್ರಭಾಕರ ಪೂಜಾರಿ ನಿರೂಪಿಸಿದರು. ತಾಲೂಕಿನ ಎಲ್ಲಾ ವಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top