ನಾವು ಎಷ್ಟು ವರ್ಷ ಬದುಕುತ್ತೇವೆ ಎನ್ನುವುದು ಮುಖ್ಯವಲ್ಲ ಎಷ್ಟು ಜನರಿಗೆ ಸಹಾಯ ಮಾಡಿದ್ದೆವೇ ಎನ್ನುವುದು ಮುಖ್ಯ ಸಚಿವ ಮಂಕಾಳ ವೈದ್ಯ

ಹೊನ್ನಾವರ: ಅಧಿಕಾರ ಸಿಕ್ಕಿದೆ ಎಂದ ಮೇಲೆ ಜನ ಸೇವೆ ಮಾಡಲೇ ಬೇಕು ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸಿಕೊಡಬೇಕು ಎನ್ನುವುದು ನನ್ನ ಉದ್ದೇಶವಾಗಿದೆ ಎಂದು ಮೀನುಗಾರಿಕಾ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಅವರು ಹೇಳಿದರು.

ತಾಲೂಕಿನ ನಾಗಯಕ್ಷೇ ಸಭಾಭವನದಲ್ಲಿ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ, ಹಿತೈಷಿಗಳಿಗೆ ಭಟ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿ ನನ್ನ ಕ್ಷೇತ್ರದಲ್ಲಿ ಈಗ ನಿಶ್ಚಿಂತೆಯಿಂದ ಒಬ್ಬ ಬಡವ ಮನೆ ಕಟ್ಟುತ್ತಾನೆ. ಒಬ್ಬ ಬಡ ವಿದ್ಯಾರ್ಥಿ ಅಮೆರಿಕಾದಲ್ಲಿ ಶಿಕ್ಷಣ ಮುಗಿಸಲು ಸಾಧ್ಯವಾಗುತ್ತದೆ. ಜನತೆ ಸುರಕ್ಷಿತ ವಾಗಿ, ಸಮರ್ಪಕವಾಗಿ ಏನು ಬೇಕಾದರು ಮಾಡಲು ಸಾಧ್ಯವಿದೆ. ಅದು ಮಂಕಾಳ ವೈದ್ಯರಿಂದ ಸಾಧ್ಯ ಆಗುತ್ತದೆ ಎಂದು ನನ್ನಲ್ಲಿ ಶಕ್ತಿ ತುಂಬಿದ್ದಾರೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿನಮ್ಮ ಕಾರ್ಯಕರ್ತರಿಗೆ, ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಅಂತವರು ರಾಜಕೀಯ ವಾಗಿ ಬೆಳೆಯುವುದು ಕಷ್ಟ ನನ್ನ ಅಧಿಕಾರವನ್ನು ಬಡವರಿಗಾಗಿ, ಕಷ್ಟದಲ್ಲಿದ್ದವರಿಗಾಗಿ ಮೀಸಲಿಡುತ್ತೇನೆ. ಎಂದರು.

ವೈದ್ಯರು ಕಾರ್ಯಕರ್ತರಿಗೆ ಕಿವಿಮಾತು ಹೇಳುತ್ತಾ

ಯಾರನ್ನು ದ್ವೇಷ ಮಾಡಲು ಹೋಗಬೇಡಿ ಅದರಿಂದ ಯಾರು ಸಹ ಯಶಸ್ಸು ಕಂಡಿಲ್ಲ. ನೀವು ತಪ್ಪು ಮಾಡಿದರೆ ನನಗೆ ಕಷ್ಟವಾಗುತ್ತದೆ. ನನಗೆ ನೋವಾಗುತ್ತದೆ. ಇದರಿಂದ ನನ್ನ ನಂಬಿದ ಮತದಾರರಿಗೂ ಬೇಸರವಾಗುತ್ತದೆ.ದಯವಿಟ್ಟು ಯಾರು ಸಹ ನಮ್ಮ ಅಧಿಕಾರವನ್ನು ದುರ್ಬಳಕೆ ಮಾಡಬೇಡಿ ಎಂದು ಸಚಿವ ಮಂಕಾಳ ವೈದ್ಯ ಅವರು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

.

ಈ ಸಂದರ್ಬದಲ್ಲಿ ಸಚಿವ ಮಂಕಾಳ ವೈದ್ಯರ ಧರ್ಮಪತ್ನಿ ಪುಷ್ಪಲತಾ ವೈದ್ಯ ಸುಪುತ್ರಿ ಬಿನಾ ವೈದ್ಯ, ನಾಮದಾರಿ ಸಮಾಜದ ಮುಖಂಡ ಆರ್ ಎಸ್ ನಾಯ್ಕ ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ ದೇವಾಡಿಗ ಮಾತನಾಡಿದ್ದರು

ವೇದಿಕೆಯಲ್ಲಿ ಕಾಂಗ್ರೇಸ್ ಪಕ್ಷದ ವಿವಿದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top