ಭಟ್ಕಳ ಚೌತನಿ ಕಾಳಿಕಾಂಬಾ ದೇವಸ್ಥಾನದಲ್ಲಿ ವಿಶ್ವಕರ್ಮ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರ

ಭಟ್ಕಳದ ಚೌಥನಿಯ ಶ್ರೀ ಕಾಳಿಕಾಂಬಾ ದೇವಸ್ಥಾನದ ವಿಶ್ವಕರ್ಮ ಬ್ರಾಹ್ಮಣ ಯುವಕ ಸಂಘದ ಆಶ್ರಯದಲ್ಲಿ ಒಂದು ವಾರಗಳ ಕಾಲ ವಿಶ್ವಕರ್ಮ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರ ನಡೆಯಿತು.

ಶಿಬಿರದಲ್ಲಿ 135ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಯೋಗ, ಧ್ಯಾನ, ಕರಾಟೆ, ಚಿತ್ರಕಲೆ, ಪೇಪರ್ ಕ್ರಾಫ್ಟ್,ನಿತ್ಯಪೂಜಾ ವಿಧಾನ,ಭಜನೆ,ಸ್ಪೋಕನ್ ಇಂಗ್ಲೀಷ್,ಕಾನೂನು ಮಾಹಿತಿ,, ವೈದ್ಯಕೀಯ ಮಾಹಿತಿ,ಪಂಚ ಕುಲ ಕಸುಬಿನ ಮಹತ್ವ,ಹೀಗೆ ಹಲವಾರು ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಯಿತು. ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ನಡೆಸಿದ ಈ ಶಿಬಿರಕ್ಕೆ ಹಲವಾರು ದಾನಿಗಳು ಸಹಕಾರ ನೀಡಿದರು.ಒಂದು ವಾರದ ಭೋಜನ ವ್ಯವಸ್ಥೆ ಹಾಗೂ ಉಪಹಾರದ ವ್ಯವಸ್ಥೆ ಕೂಡ ಮಾಡಲಾಗಿತ್ತು.ಸಮಾರೋಪ ಸಮಾರಂಭದಲ್ಲಿ ವಿಶ್ವಕರ್ಮ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ಶ್ರೀ ಚಂದ್ರಶೇಖರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀ ಗಜಾನನ ಎನ್ ಆಚಾರ್ಯ ದೀಪ ಬೆಳಗಿಸಿ ಯುವಕ ಸಂಘಕ್ಕೆ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತ ಸಂಘದ ಮಾಜಿ ಜಿಲ್ಲಾಧ್ಯಕ್ಷ ಶ್ರೀ ರಾಧಾಕೃಷ್ಣ ಭಟ್ ಹಾಗೂ ಚಿತ್ರಕಲಾ ಶಿಕ್ಷಕ ಶ್ರೀ ಸಂಜಯ್ ಗುಡಿಗಾರ ಆಗಮಿಸಿ ಈ ಅದ್ಭುತ ಕಾರ್ಯಕ್ರಮ ದ ಬಗ್ಗೆ ಶ್ಲಾಘನೀಯ ಮಾತುಗಳ್ಳನ್ನಾಡಿದರು. ಶ್ರೀ ಕ್ಷೇತ್ರದ ಎರಡನೇ ಆಡಳಿತ ಮೊಕ್ತೇಸರ ಶ್ರೀ ಗೋವಿಂದ ಆಚಾರ್ಯ, ಮೂರನೆಯ ಆಡಳಿತ ಮೊಕ್ತೇಸರ ಶ್ರೀ ಶಿವರಾಮ್ ಆಚಾರ್ಯ, ದೇವಸ್ಥಾನದ ಭೂದಾನ ಯೋಜನಾ ಸಮಿತಿಯ ಗೌರವಾಧ್ಯಕ್ಷ ಶ್ರೀಧರ ಆಚಾರ್ಯ ಮುಂಬೈ ಹಾಗೂ ಶ್ರೀ ಕಾಳಿಕಾಂಬಾ ಮಹಿಳಾ ಸಂಘದ ಅಧ್ಯಕ್ಷೆ ಸುನಂದಾ ಸಿ ಆಚಾರ್ಯ,ಶ್ರೀ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಶ್ರೀ ವೆಂಕಟೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಾಗತ, ಪ್ರಾರ್ಥನೆ, ವಂದನಾರ್ಪಣೆ ಮತ್ತು ನಿರೂಪಣೆ ಎಲ್ಲವನ್ನೂ ಶಿಬಿರರಾರ್ಥಿಗಳಿಂದ ಇಂಗ್ಲೀಷ್ ನಲ್ಲಿಯೇ ಮಾಡಿಸಿರುವುದು ಕಾರ್ಯಕ್ರಮದ ವಿಶೇಷವಾಗಿತ್ತು. ದೇವಸ್ಥಾನದ ಇತಿಹಾಸದಲ್ಲಿ ಒಂದು ಸುಂದರವಾದ ಕಾರ್ಯಕ್ರಮ ಇದಾಗಿದ್ದು ಸಮಾಜ ಬಂಧುಗಳ ಮೆಚ್ಚುಗೆಗೆ ಪಾತ್ರವಾಯಿತು.

WhatsApp
Facebook
Telegram
error: Content is protected !!
Scroll to Top