ಹಿಂದೂ ನಾಮದಾರಿ ಯುವಕ ಶಂಕರ್ ನಾಯ್ಕ ಗಡಿಪಾರಿಗೆ ತಡೆಯಾಜ್ಞೆ ನೀಡಿದ ಹೈಕೋರ್ಟ

ಮುರ್ಡೆಶ್ವರದಲ್ಲಿ ಶಂಕರ್ ನಾಯ್ಕ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದ ಭಟ್ಕಳ ಹಿಂದೂ ಮುಖಂಡರು ಮತ್ತು ಕಾರ್ಯಕರ್ತರು

ಭಟ್ಕಳ ತಾಲೂಕಿನ ಕಟ್ಟಾ ಹಿಂದೂವಾದಿ ಶಂಕರ್ ನಾಯ್ಕ ಚೌತನಿ ಅವರ ಗಡಿಪಾರು ಆದೇಶಕ್ಕೆ ಹೈಕೋರ್ಟ ತಡೆಯಾಜ್ಞೆಯನ್ನು ನೀಡಿದ್ದು ಭಟ್ಕಳ ಹಿಂದೂ ಮುಖಂಡರ ಹೊರಾಟಕ್ಕೆ ಜಯ ದೊರೆತಂತಾಗಿದೆ

ಭಟ್ಕಳ ತಾಲೂಕಿನಲ್ಲಿ ಹಿಂದೂ ನಾಮದಾರಿ ಯುವಕ ಶಂಕರ್ ನಾಯ್ಕ ಅವರು ಹಿಂದೂತ್ವಕ್ಕಾಗಿ ತಮ್ಮ ಜೀವನವನ್ನೆ ಸವೆಸಿದ ಹೊರಾಟಗಾರರಾಗಿದ್ದಾರೆ ಆದರೆ ಹಿಂದೂತ್ವದ ಗುರಾಣಿ ಹಿಡಿದಿರುವ ಬಿಜೆಪಿ ಪಕ್ಷದ ಅದಿಕಾರದ ಅವದಿಯ ಸಮಯದಲ್ಲೆ ಪ್ರಶ್ನೆ ಮಾಡಿದ ಎಂಬ ಒಂದೆ ಒಂದು ಕಾರಣಕ್ಕೆ ವರ್ಷಗಳಿಂದ ಹಿಂದೂ ಧರ್ಮಕ್ಕಾಗಿ ಹಾಗು ತಮ್ಮ ನಾಮದಾರಿ ಸಮಾಜದ ಮೇಲೆ ಅನ್ಯಾಯವಾದಾಗಲೆಲ್ಲ ಯಾವುದೇ ಅಪೇಕ್ಷೇ ಇಲ್ಲದೆ ಹೊರಾಟಕ್ಕೆ ಇಳಿಯುತ್ತಿದ್ದ ಶಂಕರ್ ನಾಯ್ಕ ಚೌತನಿ ಅವರನ್ನು ಗಡಿಪಾರು ಮಾಡಲಾಗುತ್ತದೆ ಬಿಜೆಪೀಗೆ ಹೊರಾಟಕ್ಕೆ ಕಾರ್ಯಕರ್ತರು ಬೇಕು ಆದರೆ ಆ ಕಾರ್ಯಕರ್ತ ಪ್ರಶ್ನೇ ಮಾಡುವಂತಿಲ್ಲಾ ಪ್ರಶ್ನೇ ಮಾಡಿದರೆ ಆತ ತಮ್ಮ ಕಾರ್ಯಕರ್ತನೆ ಅಲ್ಲ ಎಂದು ಹೇಳಲಾಗುತ್ತದೆ ಹೆಚ್ಚಿನ ಮಟ್ಟದ ಪ್ರತಿಭಟನೆ ಮಾಡಿದರೆ ಅಂತವರನ್ನು ಕಾನೂನು ಸುವ್ಯವಸ್ಥೆ ಎಂಬ ನೆಪವನ್ನು ಮುಂದಿಟ್ಟುಕೊಂಡು ಗಡಿಪಾರು ಮಾಡಲಾಗುತ್ತದೆ ಇನ್ನಾದರು ಅಮಾಯಕ ಯುವಕರು ಈ ನಕಲಿ ಹಿಂದೂತ್ವದ ಪಾಠವನ್ನು ಕೇಳದೆ ತಮ್ಮ ತಮ್ಮ ಭವಿಷ್ಯದ ಬಗ್ಗೆ ಯೋಚನೆಯನ್ನು ಮಾಡಿ ಎಂದು ತಾಲೂಕಿನ ಅನುಭವಿ ಹಿರಿಯರು ಹೇಳುತ್ತಿದ್ದಾರೆ ಶಂಕರ್ ನಾಯ್ಕ ಗಡಿಪಾರನ್ನು ಪ್ರಶ್ನೀಸಿ ಹೈಕೊರ್ಟ ಮೋರೆ ಹೊಗಲಾಗಿತ್ತು ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಪರಿಶೀಲಿಸಿ ಗಡಿಪಾರಿನ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿದೆ

ಒಟ್ಟಾರೆ ನಮ್ಮ ನ್ಯಾಯ ವ್ಯವಸ್ಥೆ ಹಾಗು ನಮ್ಮ ಸಂವಿಧಾನ ದೇಶದ ಪ್ರಜೇಗಳ ತಲೆ ಕಾಯುತ್ತದೆ ಎನ್ನುವುದಕ್ಕೆ ಇದೆ ಸ್ಪಷ್ಟ ನಿದರ್ಶನ ಆದರೆ ಹೊರಾಟದ ಛಲವಿರಬೇಕು ಎನ್ನುವುದು ಹೊರಾಟಗಾರರ ಮಾತಾಗಿದೆ

WhatsApp
Facebook
Telegram
error: Content is protected !!
Scroll to Top