ಭಟ್ಕಳದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸೇರಿ 14 ಮಂದಿ ಕಾಂಗ್ರೇಸ್ ಸೇರ್ಪಡೆ

ನನ್ನ ಕ್ಷೇತ್ರದ ಜನರ ಪ್ರೀತಿಗೆ ನಾನು ಯಾವಾಗಲು ಚಿರಖುಣಿ : ಮಾಜಿ ಶಾಸಕ ಮಂಕಾಳ ವೈದ್ಯ

ಭಟ್ಕಳ : ನಾವು ಯಾರನ್ನು ದ್ವೇಷಿಸುವುದು ಬೇಡ ದ್ವೇಷದಿಂದ ಯಾರನ್ನು ಗೆಲ್ಲಲು ಸಾಧ್ಯವಿಲ್ಲ ಪ್ರೀತಿಯಿಂದ ಯಾರನ್ನು ಬೇಕಾದರು ಗೆಲ್ಲಬಹುದು ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಸಾರ್ವಜನಿಕರು ಮತ್ತು ಮತದಾರರು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ನಾನು ಚಿರಖುಣಿಯಾಗಿದ್ದೆನೆ ಎಂದು ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಮಾಜಿ ಶಾಸಕರ ಮಂಕಾಳ ವೈದ್ದರ ನಾಯಕತ್ವದ ಮೇಲೆ ಕಾಂಗ್ರೇಸ್ ಪಕ್ಷವನ್ನು ಸೇರಿದ ಸಂದರ್ಬದಲ್ಲಿ ಮಾಜಿ ಶಾಸಕ ಮಂಕಾಳು ವೈದ್ಯ ಹೇಳಿದರು

ರವಿವಾರ ಭಟ್ಕಳ ತಾಲೂಕಿನ ಬ್ಲಾಕ್ ಕಾಂಗ್ರೇಸ್ ಕಛೇರಿಯಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸೇರಿ ಬರೊಬ್ಬರಿ 14 ಮಂದಿ ಕಾಂಗ್ರೇಸ್ ಅನ್ನು ಸೆರ್ಪಡೆಯಾಗಿದ್ದಾರೆ. ಈ ಸಂದರ್ಬದಲ್ಲಿ ಕಾರ್ಯಕ್ರಮದ ನಾಯಕತ್ವವನ್ನು ವಹಿಸಿದ್ದ ಮಾಜಿ ಶಾಸಕ ಮಂಕಾಳು ವೈದ್ಯರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ನನ್ನ ಕ್ಷೇತ್ರದ ಜನರು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿ ವಿಶ್ವಾಸ ನನ್ನನ್ನು ಮುಕವಿಸ್ಮಿತನನ್ನಾಗಿಸಿದೆ ಜನರ ಪ್ರೀತಿ ನನಗೆ ಪ್ರೇರಣೆಯನ್ನು ತಂದಿಟ್ಟಿದ್ದೆ ಅವರ ಸೇವೆಯನ್ನು ಮಾಡಲು ನನಗೆ ತುಡಿತ ಇನ್ನಷ್ಟು ಹೆಚ್ಚಾಗಿದೆ ಜನರ ಈ ಪ್ರೀತಿ ವಿಶ್ವಾಸವನ್ನು ನೋಡಿ ನಾನು ಕಳೆದ ಬಾರಿ ಶಾಸಕನಾಗಿರುವ ಸಂದರ್ಬ ನಾನು ಮಾಡಿರುವ ಜನ ಸೇವೆ ಕಡಿಮೇ ಆಯಿತೆನೋ ಎಂದು ಅನ್ನಿಸುತ್ತಿದೆ ಮುಂದಿನ ಭಾರಿ ಶಾಸಕನಾದಾಗ ನಾನು ನನ್ನ ಜನರ ಸೇವೆಗೆ ಹಗಲಿರುಳು ಶ್ರಮಿಸುತ್ತೆನೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೆರ್ಪಡೆಯಾದ ಬಿಜೆಪಿಯ ನಾಮದಾರಿ ಸಮಾಜದ ಯುವ ಮುಖಂಡರು ಮಾವಳ್ಳಿ 2 ಪಂಚಾಯತ್ ಅಧ್ಯಕ್ಷ ರಾಘವೇಂದ್ರ ನಾಯ್ಕ ದೀವಗೇರಿ ಮಾತನಾಡಿ ಮನುಷ್ಯರಿಗೆ ಅನಾರೋಗ್ಯ ಉಂಟಾದಾಗ ಹೇಗೆ ಡಾಕ್ಟರಗಳು ನೆನಪಾಗುತ್ತಾರೋ ಹಾಗೆ ಭಟ್ಕಳ ಹೊನ್ನಾವರ ಕ್ಷೇತ್ರದ ಬಡ ಜನರಿಗೆ ಸಂಕಷ್ಟಗಳು ಬಂದಾಗ ಮಾಜಿ ಶಾಸಕ ಮಂಕಾಳ ವೈದ್ಯರು ನೆನಪಾಗುತ್ತಾರೆ ಕಾರಣ ಮಂಕಾಳು ವೈದ್ಯರು ಯಾವಾಗಲೂ ಬಡವರ ಕಷ್ಟಕ್ಕೆ ಮುಂಚುಣಿಯಲ್ಲಿ ನಿಂತಿರುತ್ತಾರೆ ನಾವು ಹಿಂದೆ ಅವರ ಸೊಲಿಗೆ ಕಾರಣವಾಗಿ ನಾಲ್ಕು ವರೆ ವರ್ಷ ಪಶ್ಚಾತಾಪವನ್ನು ಪಟ್ಟಿದ್ದೆವೆ ಸಾಮಾನ್ಯ ಜನರು ಕಷ್ಟಕ್ಕೆ ಒಳಗಾಗಿದ್ದರು ಆ ಹಿಂದೆ ಮಾಡಿದ ತಪ್ಪನ್ನು ಈಗ ಸರಿ ಮಾಡುವ ಕಾಲ ಬಂದಿದೆ ಮಂಕಾಳ ವೈದ್ಯರು ಬಲಗೈಯಲ್ಲಿ ಕೊಟ್ಟದಾನ ಬಲಗೈಗೆ ಗೊತ್ತಾಗದಂತೆ ನಿಸ್ವಾರ್ಥದಿಂದ ಸೇವೆಯನ್ನು ಸಲ್ಲಿಸುತ್ತಾರೆ ಇವರ ನಿಸ್ವಾರ್ಥ ಸೇವೆಗೆ ನಾವು ಸೊತು ಇಂದು ಕಾಂಗ್ರೇಸ್ ಸೆರ್ಪಡೆಯಾಗಿದ್ದೆವೆ ಅವರ ಶಾಸಕತ್ವದ ಕಾಲದ ಸಂದರ್ಬದಲ್ಲಿ ಅವರು ಮಾಡಿರುವ ಅಭಿವೃದ್ದಿ ಈಗಲೂ ಕ್ಷೇತ್ರದ ಜನರು ಹೇಳುತ್ತಾರೆ . ಕಳೆದ ಬಾರಿ ವೈದ್ಯರ ವಿರುದ್ದ ಅಪಪ್ರಚಾರ ಮಾಡಿ ಓಟನ್ನು ಪಡೆದು ಮಂಕಾಳ ವೈದ್ಯರನ್ನು ಸೋಲಿಸಲಾಯಿತು . ಆದರೆ ಈ ಭಾರಿ ನಮ್ಮ ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ ನಾವು ಮಂಕಾಳ ವೈದ್ಯರನ್ನು ಅತಿ ಹೆಚ್ಚಿನ ಮತಗಳು ದೊರೆಯುವಂತೆ ಮಾಡಿ ಬಹುಮತದಿಂದ ಆರಿಸಿ ತರುತ್ತೆವೆ ಮುಂದಿನ ಶಾಸಕರು ಮಂಕಾಳ ವೈದ್ಯರಾಗುವು ಶತಸಿದ್ದ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಾಮದಾರಿ ಸಮಾಜದ ಮಾಜಿ ಅಧ್ಯಕ್ಷ ಎಲ್ ಎಸ್ ನಾಯ್ಕ ಅವರು ಮಾತನಾಡಿ ಒಂದು ಪಕ್ಷದ ಆಸ್ತಿ ಕಾರ್ಯಕರ್ತರೆ ಆಗಿದ್ದಾರೆ ಭಟ್ಕಳ ಕೇತ್ರದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಮಂಕಾಳ ವೈದ್ಯರ ಅಭಿಮಾನಿ ಬಳಗದವರು ಹಗಲಿರುಳು ಶ್ರಮಿಸುತ್ತಿದ್ದಾರೆ ನಾನು ಕಳೆದ ಬಾರಿ ಹಿಂದಿನ ಚುನಾವಣೆಯ ಸಂದರ್ಬದಲ್ಲಿ ನಾನು ಈಗಿನ ಶಾಸಕರ ಬೆನ್ನಿಗೆ ನಿಂತು ದೊಡ್ಡ ತಪ್ಪನ್ನು ಮಾಡಿದಂತಾಗಿದೆ ಆದರೆ ಈ ಬಾರಿ ಅಂತಹ ತಪ್ಪನ್ನು ಮಾಡುವುದಿಲ್ಲಾ ನಾನು ಮೂಲತ ಕಾಂಗ್ರೇಸನವನಾಗಿದ್ದು ಈ ಭಾರಿ ಮಂಕಾಳ ವೈದ್ಯರನ್ನು ಆರಿಸಿತರುವ ಕೆಲಸ ಮಾಡಲಾಗುತ್ತದೆ. ನಾನು ಮಂಕಾಳ ವೈದ್ಯರಿಗೆ ಸಪೊರ್ಟ ಮಾಡುತ್ತೆನೆ ಎಂಬ ಒಂದೆ ಒಂದು ಕಾರಣಕ್ಕೆ ನನಗೆ ಬೇರೆ ಬೇರೆ ತರದಲ್ಲಿ ಬೆದರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈಗಾಗಲೆ ನನಗೆ ನೊಟಿಸನ್ನು ನಿಡಲಾಗಿದೆ ಆದರೆ ನಾನು ಇದಕ್ಕೆಲ್ಲಾ ಹೆದರುವ ಘಟವಲ್ಲಾ ಏನು ಮಾಡುತ್ರಾರೋ ಮಾಡಲಿ ನಾನು ಮುಂದಿಟ್ಟಿರುವ ಹೆಜ್ಜೆ ಹಿಂದೆ ತೆಗೆಯುವ ಪ್ರಶ್ನೇಯೆ ಇಲ್ಲ ಇದು ಶತಸಿದ್ದ ಹಾಗೆ ಮತದಾರರೆಲ್ಲರು ಕ್ಷೇತ್ರದ ಹಿತದ್ರಷ್ಟಿಯಿಂದ ಮಂಕಾಳ ವೈದ್ಯರಿಗೆ ಮತದಾನವನ್ನು ಮಾಡಬೇಕು. ಕಾರ್ಯಕರ್ತರು ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿ ಅವರಿಗೆ ಗೆಲುವನ್ನು ತಂದುಕೊಡಬೇಕು ಎಂದು ಹೇಳಿದರು

ಕಾರ್ಯಕ್ರಮದಲ್ಲಿ 14 ಮಂದಿ ಬಿಜೆಪಿ ಮುಖಂಡರು ಕಾರ್ಯಕರ್ತರು ಆದ ರಾಘವೇಂದ್ರ ಗೊಯ್ದಪ್ಪ ನಾಯ್ಕ ದೀವಗೇರಿ, ರಮೇಶ ನಾಗಪ್ಪ ನಾಯ್ಕ ದಿವಗೇರಿ, ಮಂಜುನಾಥ ನಾಯ್ಕ ಸಂತೋಷ ನಾಯ್ಕ, ರಾಜು ನಾಯ್ಕ , ತುಳಸಿದಾಸ ನಾಯ್ಕ ವಸಂತ ನಾಯ್ಕ, ದಿನೇಶ ಹರಿಕಾಂತ , ಸೀತಾರಾಮ ದೇವಾಡಿಗ , ಗಣೇಶ ದೇವೆಂದ್ರ ನಾಯ್ಕ ಗೀತಾ ನಾಯ್ಕ ಹೀಗೆ ಅನೇಕ ಮುಖಂಡರು ಕಾರ್ಯಕರ್ತರು ಮಂಕಾಳ ವೈದ್ಯರ ಮೇಲಿನ ಅಭಿಮಾನದಿಂದ ಕಾಂಗ್ರೇಸ್ ಪಕ್ಷಕ್ಕೆ ಸೆರ್ಪಡೆಯಾಗಿದ್ದಾರೆ

ಈ ಸಂದರ್ಬದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಯಶ್ರೀ ಮೊಗೇರ್ , ಬ್ಲಾಕ್ ಕಾಂಗ್ರೇಸ್ ಮಹಿಳಾ ಅಧ್ಯಕ್ಷರಾದ ನಯನಾ ನಾಯ್ಕ , ವಿಷ್ಣು ದೇವಾಡಿಗ , ಕಾಂಗ್ರೇಸ್ ಅಲ್ಪ ಸಂಖ್ಯಾತ ವಿಭಾಗದ ಮಾಜಿದ್ ನಾರಾಯಣ ನಾಯ್ಕ , ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top