ಮಾಜಿ ಶಾಸಕ ಮಂಕಾಳ ವೈದ್ಯರ ವಿರುದ್ದ ರಾಜಕಿಯ ದುರುದ್ದೇಶದಿಂದ ಕಾವೇರಿ ಸುದ್ದಿವಾಹಿನಿ ಹೆಸರಲ್ಲಿ ನಕಲಿ ಖಾತೆ ಸ್ರಷ್ಟಿಸಿ ಅವಹೇಳ ಮಾಡಿದ ಕಿಡಿಗೇಡಿಗಳ ವಿರುದ್ದ non bailable ಪ್ರಕರಣ ದಾಖಲು

ಶಾಸಕ ಸುನಿಲ್ ನಾಯ್ಕ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಚಂದ್ರು ನಾಯ್ಕ ಮತ್ತು ನಾಗರಾಜ ಪಟಗಾರ ಬಂದನ ಬೀತಿಯಲ್ಲಿ

ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಮಂಕಾಳ ವೈದ್ಯರ ವಿರುದ್ದ ರಾಜಕಿಯ ದುರುದ್ದೇಶದಿಂದ ಹಾಲಿ ಶಾಸಕ ಸುನಿಲ್ ನಾಯ್ಕ ಆಪ್ತ ವಲಯದಲ್ಲಿ ಗುರುತಿಸಿ ಕೊಂಡಿದ್ದ ಅವರ ಡ್ರೈವರ್ ಚಂದ್ರು ನಾಯ್ಕ ಮತ್ತು ನಾಗರಾಜ ಪಟಗಾರ ಎಂಬ ಇಬ್ಬರು ಕಾವೇರಿ ಸುದ್ದಿವಾಹಿನಿ ಹೆಸರಲ್ಲಿ ನಕಲಿ ಖಾತೆ ಸೃಷ್ಟೀಸಿ ಅವರ ವಯಕ್ತಿಕ ತೆಜೋವದೆ ಮಾಡಿದ ಹಿನ್ನೆಲೆಯಲ್ಲಿ IPC 1860 (U/s-505(1)(C)); INFORMATION TECHNOLOGY ACT 2008 (U/s-66(C)) ಅಡಿಯಲ್ಲಿ ದೂರು ದಾಖಲಾಗಿದ್ದು ಈ ಇಬ್ಬರು ಕಿಡಿಗೇಡಿಗಳು ಈಗ ಬಂದನ ಭೀತಿಯಲ್ಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ

ವೀಕ್ಷಕರೆ ಸ್ಪರ್ದೆಗಳು ಪ್ರತಿಸ್ಪರ್ಧೆಗಳು ಆರೋಗ್ಯ ಪೂರ್ಣವಾಗಿರ ಬೇಕು ಯಾವಾಗ ಅವು ಆರೋಗ್ಯ ಪೂರ್ಣವಾಗಿರುವುದಿಲ್ಲವೋ ಅದು ದ್ವೇಶಕ್ಕೆ ತಿರುಗುತ್ತದೆ ಹಾಗು ಸಮಾಜದಲ್ಲಿ ದ್ವೇಶ ಅಸೂಯೆ ವಿದ್ರೋಹವನ್ನು ಹೆಚ್ಚಿಸಲು ಕಾರಣವಾಗುತ್ತದೆ ನಮ್ಮ ಭಟ್ಕಳದ ರಾಜಕಿಯ ಕ್ಷೇತ್ರದಲ್ಲಿ ಸ್ಪರ್ದೇಗಳು ಆರೋಗ್ಯ ಪೂರ್ಣವಾಗಿಲ್ಲ ಎಂದರೆ ತಪ್ಪಾಗಲಿಕ್ಕಿ ಭಟ್ಕಳದಲ್ಲಿ ಕೆಲವು ಕಿಡಿಗೇಡಿಗಳು ದುಷ್ಟತನದ ಪರಮಾವದಿಯನ್ನೆ ದಾಟಿದ್ದಾರೆ ರಾಜಕಿಯ ಕ್ಷೇತ್ರದಲ್ಲಿ ಯಾರಾದರು ತಮ್ಮ ವಿರುದ್ದ ಸ್ಪರ್ದಿಸುತ್ತಾರೆ ತಮ್ಮನ್ನು ಒವರ್ ಟೇಕ್ ಮಾಡುತ್ತಾರೆ ಎಂದು ತಿಳಿದರೆ ಸಾಕು ಈ ದುಷ್ಟರು ಅಂಥವರ ವಿರುದ್ದ ಅಥವಾ ಅವರ ಮನೆ ಹೆಣ್ಣು ಮಕ್ಕಳ ವಿರುದ್ದ ಅಸಹ್ಯವಾಗಿ ಅಮಾನವಿಯವಾಗಿ ಸಾಮಾಜಿಕ ಜಾಲತಾಣದಲ್ಲಿ ಮಾನ ಹಾನಿಗೆ ಮುಂದಾಗುತ್ತಾರೆ ಈ ನೀಚರು ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದರೆ 5 ಅಥವಾ 6 ವರ್ಷದ ಹಸುಳೆಯರ ಬಗ್ಗೆಯು ಬರೆದು ಆ ಹೆಣ್ಣು ಮಕ್ಕಳ ಮಾನ ಹರಣಕ್ಕೆ ಮುಂದಾಗುತ್ತಾರೆ ಇಂಥ ನೀಚರಾಗಿದ್ದಾರೆ ಕೆಲವು ದುರುಳರು ಭಟ್ಕಳದ ರಾಜಕಿಯ ಎಂದರೆ ಮರ್ಯಾದಸ್ಥರು ಮಾರು ದೂರ ನಿಲ್ಲುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಕೆಲವು ದುರುಳರು

ಇದು ಒಂದು ಕಡೆ ಯಾದರೆ ಭಟ್ಕಳದಲ್ಲಿ ಯಾವ ರೀತಿಯಲ್ಲಿ ಇನ್ನೊಬ್ಬರ ಮಾನಹಾನಿ ಮಾಡುತ್ತಾರೆ ಎನ್ನುವುದಕ್ಕೆ ಇನ್ನೊಂದು ಉದ್ದಾಹರಣೆ ನಿಮ್ಮ ಮುಂದಿಡುತ್ತಿದ್ದೆನೆ ವಿಕ್ಷಕರೇ ಭಟ್ಕಳ ಶಾಸಕ ಸುನಿಲ್ ನಾಯ್ಕ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಾಸಕರ ಡ್ರೈವರ್ ಚಂದ್ರು ನಾಯ್ಕ ಗುಮ್ಮನ ಹಕ್ಲು ಮತ್ತು ಶಾಸಕರ ಇನ್ನೊಬ್ಬ ಆಪ್ತ ನಾಗರಾಜ ಪಟಗಾರ ಎಂಬ ಇಬ್ಬರು ದುರ್ಥರು ಮಾಜಿ ಶಾಸಕ ಮಂಕಾಳ ವೈದ್ಯರ ವಯಕ್ತಿಕ ಕೌಟುಂಬಿಕ ಜೀವನ ಬಗ್ಗೆ ಅಸಹ್ಯವಾಗಿ ಮರ್ಯಾದಸ್ಥರು ತಲೆ ತಗ್ಗಿಸುವ ಮಟ್ಟದಲ್ಲಿ ಕಾವೇರಿ ಸುದ್ದಿವಾಹಿನಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಬರೆದು ಅದನ್ನು ವೈರಲ್ ಮಾಡುದರ ಮೂಲಕ ವಿಕ್ರತಿಯನ್ನು ಮೇರೆದಿದ್ದಾರೆ ಎಂಬ ಮಾತು ಕೇಳಿಬಂದಿದೆ

ಈ ದುರುಳರು ದಿನಾಂಕ: 05/04/2023 ರಂದು ಕಾವೇರಿ ನ್ಯೂಸ್ ಎಂಬ ನಕಲಿ ಪೇಸ್ ಬುಕ್ ಖಾತೆಯನ್ನು ತೆರೆದು ಮಾಜಿ ಶಾಸಕ ಮಂಕಾಳ ವೈದ್ಯರ ಕುಟುಂಭದ ಕುರಿತು ಅವಹೇಳನಕಾರಿಯಾದ ಸುಳ್ಳು, ಸುದ್ದಿಯನ್ನು ಪ್ರಸಾರ ಮಾಡಿರುತ್ತಾರೆ, ಸದರಿ ಆರೋಪಿತರು ಈ ಹಿಂದೆಯೂ ಹಲವು ಬಾರಿ ಮಂಕಾಳ ವೈದ್ಯರವರ ಹೆಸರನ್ನು ಸಾಮಾಜಿಕ ಜಾಲತಾಣಗಳಲ್ಲಿ, ಕೆಡಿಸುವ ಪ್ರಯತ್ನ ಸತತವಾಗಿ ಮಾಡುತ್ತಾ ಬಂದಿರುತ್ತಾರೆ. ಮುಂಬರುವ ವಿಧಾನ ಸಭಾ ಚುನಾವಣೆಯ ಸಂಧರ್ಭದಲ್ಲಿ, ಮಂಕಾಳು ವೈದ್ಯರಿಗೆ ಹಾಗೂ ಮಂಕಾಳು ವೈದ್ಯರ ಅಭಿಮಾನಿ ಬಳಗಕ್ಕೆ ಹೆಸರನ್ನು ಕೆಡಿಸುವ ಹಾಗೂ ಅವರ ತೇಜೋವಧೆಯನ್ನು ಮಾಡುವ ಹುನ್ನಾರವನ್ನು ಸದರಿ ಆರೋಪಿತರು ಮಾಡುತ್ತಿದಾರೆ, ಹೇಗಾದರು ಮಾಡಿ ಅವರ ಹೆಸರನ್ನು ಹಾಳು ಮಾಡಿ ಅವರಿಗೆ ಚುನಾವಣೆಯಲ್ಲಿ ಹಿನ್ನಡೆಯನ್ನು ಮಾಡುವುದೇ ಆರೋಪಿತರ ಉದ್ದೇಶವಾಗಿರುತ್ತದೆ ಸದರಿ ಆರೋಪಿತರುಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಹೊನ್ನಾವರದ ಹಡಿನಬಾಳ್ ರಮೇಶ ಮಂಜುನಾಥ ನಾಯ್ಕ ಹೊನ್ನಾವರ ಪೋಲಿಸ್ ಠಾಣೆಗೆ ದೂರನ್ನು ದಾಖಲಿಸಿದ್ದಾರೆ

ವೀಕ್ಷಕರೆ ನಮ್ಮ ವಾಹಿನಿಯಲ್ಲಿ ದುರುಳರು ಹರಿಬಿಟ್ಟಿರು ಸಂಪೂರ್ಣ ವಿವರವನ್ನು ಪ್ರಸಾರ ಮಾಡುತ್ತಿಲ್ಲಾ ಕಾರಣ ಅದು ಮರ್ಯಾದಸ್ಥರು ಕೆಳುವಂತಿಲ್ಲಾ ಆ ಮಟ್ಟದಲ್ಲಿ ಈ ದುರುಳರು ಅವಮಾನವನ್ನು ಎಸಗಿದ್ದಾರೆ

ಈ ಆರೋಪಿಗಳ ವಿರುದ್ದ ಈಗ ಮುರ್ಡೆಶ್ವರ ಪೋಲಿಸ್ ಠಾಣೆಯಲ್ಲಿ IPC 1860 (U/s-505(1)(C)); INFORMATION TECHNOLOGY ACT 2008 (U/s-66(C)) ಅಡಿಯಲ್ಲಿ ಜಾಮಿನು ರಹಿತ ಪ್ರಕರಣ ದಾಖಲಾಗಿದ್ದು ಆರೋಪಿಗಳು ಈಗ ಬಂದನದ ಬೀತಿಯಲ್ಲಿದ್ದಾರೆ

ಒಟ್ಟಾರೆ ಭಟ್ಜಳ ಹೊನ್ನಾವರ ವಿಧಾನ ಸಭಾ ಅಖಾಡ ದ್ವೇಶದ ರಾಜಕಾರಣಕ್ಕೆ ಬಲಿಯಾಗಿ ಸಮಾಜದಲ್ಲಿ ಇನ್ನೆಂತಹ ಸ್ಥಿತಿ ನಿರ್ಮಾಣವಾಗಲಿದೆಯೋ ಎಂಬ ಬೀತಿ ಎದುರಾಗಿದೆ ಕಾರಣ ಚುನಾವಣಾ ಮದ್ಯ ಪ್ರವೇಶಿ ಇಂಥಹ ದುರುಳರನ್ನು ಚುನಾವಣೆ ಮುಗಿಯುವ ತನಕ ಹೊರ ಬಿಡದಂತೆ ಜಾಗ್ರತೆ ವಹಿಸಿ ಸಮಾಜದ ಸ್ವಾಸ್ಥವನ್ಬು ಕಾಯ್ದುಕೊಳ್ಳಲು ಸಹಕರಿಸ ಬೇಕು ಎನ್ನುವುದೆ ಸಮಸ್ಥ ನಾಗರಿಕರ ಕಳಕಳಿಯಾಗಿದೆ

WhatsApp
Facebook
Telegram
error: Content is protected !!
Scroll to Top