ಶಾಸಕ ಸುನಿಲ್ ನಾಯ್ಕ ಕಾಮಗಾರಿ ಹೆಸರಲ್ಲಿ ಕೋಟಿ ಕೋಟಿ ಅವ್ಯವಹಾರ ಮಾಡಿದ್ದಾರೆ: ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಆಕ್ರೋಶ

ಭಟ್ಕಳ: ತಾಲೂಕ ಶಾಸಕ ಸುನಿಲ್ ನಾಯ್ಕ ಅವರು ಅಭಿವೃದ್ದಿಯ ಹೆಸರಲ್ಲಿ ಸರಕಾರದ ಅನುಧಾನಗಳನ್ನು ತಮ್ಮ ಸ್ವ ಹಿತಾಸಕ್ತಿಗಾಗಿ ತಮ್ಮ ಐಶಾರಾಮಿ ರೆಸೊರ್ಟಿಗೆ ರಸ್ತೆ ಮಾಡಿಸಲು ವ್ಯಯಮಾಡಿ ಸಾರ್ವಜನಿಕರ ಕೋಟಿ ಕೋಟಿ ಅನುದಾನವನ್ನು ನುಂಗಿ ನೀರು ಕುಡಿದಿದ್ದಾರೆ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಭಟ್ಕಳ ಘಟಕದ ಪ್ರಧಾನ ಕಾರ್ಯದರ್ಶಿ ನಾಗೇಶ್ ನಾಯ್ಕ ಆಕ್ರೋಶವನ್ನು ವ್ಯಕ್ತಪಡಿಸಿದರು

ಭಟ್ಕಳ ಶಾಸಕ ಸುನಿಲ್ ನಾಯ್ಕ ಅವರ ವಿರುದ್ದ ಒಂದಿಲ್ಲೋಂದು ಆರೋಪಗಳು ಕೇಳಿ ಬರುತ್ತಿದ್ದು ಈ ಹಿಂದೆ ಶಾಸಕರು ತಾವೇಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇವೆ ಎಂಬ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದರು ಅದರಲ್ಲಿ 40 ಲಕ್ಷದ ಸಿ ಸಿ ರಸ್ತೆ ಮಾಡಿಸಿರುದಾಗಿ ತೋರಿಸಿದ್ದರು ಆದರೆ ಅಲ್ಲಿ 300 ಮಿಟರ್ ಉದ್ಧದ ರಸ್ತೆ ಕೂಡ ಮಾಡಿಸದೆ 40 ಲಕ್ಷ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದರ ಬಗ್ಗೆ ನಮ್ಮ ವಾಹಿನಿಯೆ ಸುದ್ದಿ ಪ್ರಸಾರ ಮಾಡಿತ್ತು ಈ ಬಗ್ಗೆ ತಾಲೂಕಿನಾಧ್ಯಂತ ಸಾರ್ವಜನಿಕರ ಆಕ್ರೋಶಗಳು ಕೇಳಿಬಂದಿತ್ತು ಈ ಪ್ರಕರಣ ಇನ್ನು ಹಸಿಯಾಗಿರುವಾಗಲೆ ಇದೆ ಶಾಸಕರು ಸರಕಾರ ಬಿಡುಗಡೆ ಮಾಡುವ ಕೊಟಿ ಕೊಟಿ ಅನುದಾನವನ್ನು ಅಭಿವೃದ್ದಿಯ ಹೆಸರಲ್ಲಿ ತಮ್ಮ ಸ್ವ ಹಿತಾಸಕ್ತಿಗಳಿಗಾಗಿ ತಾವು ಸ್ವಂತಕ್ಕೆ ಉಪಯೋಗಿಸುವುದರ ಮೂಲಕ ಸಾರ್ವಜನಿಕರು ಕಟ್ಟುವ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಪ್ರಧಾನ‌ ಕಾರ್ಯದರ್ಶಿ ನಾಗೇಶ ನಾಯ್ಕ ಕಾರವಾರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟೀಯಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದರು.

ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸುನೀಲ್ ಬಿ ನಾಯ್ಕ ಇವರು ತಮ್ಮ ಶಾಸಕ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡು ಭಟ್ಕಳ ತಾಲೂಕಿನ ಜಾಲಿ ಗ್ರಾಮದಲ್ಲಿರುವ ಯದುವೀರ ಹೆಸರಿನ ತಮ್ಮ ಖಾಸಗಿ ಫಾರ್ಮ್ ಹೌಸಿಗೆ ನಲವತ್ತು ಲಕ್ಷ ಮೌಲ್ಯದ ರಸ್ತೆಯನ್ನು ಮತ್ತು ತಡೆ ಗೋಡೆ ಹೆಸರಿನಲ್ಲಿ ಸರ್ಕಾರಿ ಹಣ ಒಂದು ಕೋಟಿ ತೊಂಭತ್ತೊಂದು ಲಕ್ಷ ಹಾಗು ಸರ್ಕಾರಿ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ

ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಲೆಕ್ಕ ಶೀರ್ಷಿಕೆಯಡಿ ನಲವತ್ತು ಲಕ್ಷ  ಮೌಲ್ಯದ  516.90 ಮೀ. ಉದ್ದ ಹಾಗೂ 370 ಮೀ ಅಗಲದ ಕಾಂಕ್ರಿಟ್ ರಸ್ತೆಯನ್ನು ಸಾರ್ವಜನಿಕ ಉಪಯೋಗಕ್ಕೆ ಎಂದು ದಾಖಲೆಗಳಲ್ಲಿ ತೋರಿಸಿ ವಾಸ್ತವದಲ್ಲಿ ಆ ರಸ್ತೆಯನ್ನು ತಮ್ಮ  ಜಾಗದಲ್ಲಿ ಸ್ವಂತ ಉಪಯೋಗದ ರಸ್ತೆಗೆ ದುರುಪಯೋಗ ಪಡಿಸಿಕೊಂಡಿದ್ದಾರೆ. ಹೀಗೆ ನಿರ್ಮಿಸಿದ ರಸ್ತೆ ಅವರ ಫಾರ್ಮ್‌ ಹೌಸಿನ ಏಕೈಕ ಖಾಸಗಿ ಉಪಯೋಗಕ್ಕೆ ಮೀಸಲಾಗಿದ್ದು, ಸಾರ್ವಜನಿಕ ಬಳಕೆಗೆ ನಿರ್ಭಂಧಿಸಿ ಗೇಟ್ ಹಾಕಲಾಗಿದೆ. ಸದ್ರಿ ದಾಖಲೆಯಲ್ಲಿ ತೋರಿಸಿದಂತೆ ಈ ರಸ್ತೆ 516,90 ಮೀ ಉದ್ದ ಮತ್ತು 3.70 ಮೀ ಅಗಲ ಇದ್ದು, ವಾಸ್ತವದಲ್ಲಿ ನಿರ್ಮಾಣವಾಗಿದ್ದು, ಕೇವಲ ಅಂದಾಜು 160 ಮೀ ಮಾತ್ರ ಇರುತ್ತದೆ. ಅಂದಾಜು 356 ಮೀ ಉದ್ದದ ಕಾಂಕ್ರಿಟ್ ರಸ್ತೆ ನಿರ್ಮಾಣವಾಗದೇ ಇದ್ದರು ದಾಖಲೆಗಳನ್ನು ಫೋರ್ಜರಿ ಮಾಡಿ ಅಧಿಕಾರಿಗಳ ಮೇಲೆ ಒತ್ತಡ ತಂದು ಶಾಮೀಲಾಗಿ 356 ಮೀ ಉದ್ದ ರಸ್ತೆಯ ಹಣವನ್ನು ಶಾಸಕರು ವೈಯಕ್ತಿಕವಾಗಿ ಪಡೆದಿದ್ದಾರೆ.

ಇನ್ನು ಬಂದರು ಮತ್ತು   ಒಳನಾಡುಜಿಲ್ಲಾ ಸಾರಿಗೆಯ ಇಲಾಖೆಯ ಲೆಕ್ಕ ಶೀರ್ಷಿಕೆಯ 4611 ರಡಿಯಲ್ಲಿ ಭಟ್ಕಳ ತಾಲೂಕು ಬೆಳಕೆ ಗ್ರಾಮಕ್ಕೆ ಮಂಜೂರಿಯಾದ  ಒಂದು ಕೋಟಿ ಐವತ್ತೊಂದು ಲಕ್ಷ ಮೊತ್ತದ ಸಮುದ್ರ ತಡೆ ಗೋಡೆಯ ಅನುದಾನವನ್ನು ಶಾಸಕ ಸುನೀಲ್ ನಾಯ್ಕ ಇವರು ತಮ್ಮ ಸ್ಥಾನ ಪ್ರಭಾವ ದುರುಪಯೋಗ ಪಡಿಸಿಕೊಂಡು ಈ ಅನುದಾನವನ್ನು ಜಾಲಿ ಗ್ರಾಮದಲ್ಲಿರುವ ತನ್ನ ಯದುವೀರ ಹೆಸರಿನ ಖಾಸಗಿ ಫಾರ್ಮ್ ಹೌಸ್‌ಗೆ ತಡೆಗೋಡೆ ನಿರ್ಮಿಸಲು ಬಳಸಿಕೊಂಡಿದ್ದಾರೆ. ಅಕ್ಕಪಕ್ಕದಲ್ಲಿ ತೀವ್ರವಾದ ಕಡಲು ಕೊರೆತ ಇರುವ ಸ್ಥಳಗಳು, ಇದ್ದರೂ ಕೂಡ ಈ ಅನುದಾನವನ್ನು ತನ್ನ ಸ್ವಂತ ಫಾರ್ಮ್ ಹೌಸನ ಅಂದಾಜು 45 ಮೀ ಉದ್ದದ ತಡೆಗೋಡೆಗೆ ಬಳಸಿಕೊಳ್ಳಲಾಗಿದೆ. ಇಲ್ಲೂ ಕೂಡ ಕೇವಲ 45 ಮೀ ಉದ್ದದ ತಡೆಗೋಡೆ ನಿರ್ಮಿಸಿ ಉಳಿದ ಹಣವನ್ನು ಶಾಸಕರು ವ್ಯಯಕ್ತಿವಾಗಿ ಪಡೆದಿದ್ದಾರೆ.

ಈ ರೀತಿಯಲ್ಲಿ ಶಾಸಕ ಸುನೀಲ್ ನಾಯ್ಕ ಇವರು ಒಟ್ಟು 1,91,00,000/- (ರೂಪಾಯಿ ಒಂದು ಕೋಟಿ ತೊಂಭತ್ತೊಂದು ಲಕ್ಷ ಮಾತ್ರ) ಸಾರ್ವಜನಿಕ ಹಣವನ್ನು ತನ್ನ ವೈಯಕ್ತಿಕ ಉದ್ದೇಶಕ್ಕೆ ಬಳಸಿಕೊಂಡಿದ್ದು, ಇದು ಕಾನೂನು ಬಾಹಿರವಾಗಿರುತ್ತದೆ. ಮತ್ತು ದಾಖಲೆಗಳಲ್ಲಿ ತೋರಿಸಿದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದ ಕಾಮಗಾರಿ ನಡೆದಿದ್ದು, ಇಲ್ಲು ಕೂಡ ಬದಲಾವಣೆಯ ಮೊತ್ತದಷ್ಟು ಹಣವನ್ನು ವೈಯಕ್ತಿಕವಾಗಿ, ಶಾಸಕರು ಪಡೆದುಕೊಂಡಿದ್ದಾರೆ. ಆದ್ದರಿಂದ ಈ ಕೂಡಲೆ ಸರ್ಕಾರ ಶಾಸಕ ಸುನೀಲ್ ನಾಯ್ಕ ಮತ್ತು ಸಂಭಂಧಿತ ಅಧಿಕಾರಿಗಳು ಹಾಗೂ ಕಾಮಗಾರಿ ಮಾಡಿದವರ ವಿರುದ್ಧ ಸರ್ಕಾರಿ ಅನುದಾನದ ದುರುಪಯೋಗ ದಾಖಲೆಗಳ ಮೋರ್ಜರಿ, ಸರ್ಕಾರಕ್ಕೆ ಮೋಸ, ಸಾರ್ವಜನಿಕರಿಗೆ ಮೋಸ ಎಸಗಿದ ಆರೋಪದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು, ಮತ್ತು ದುರ್ಬಳಕೆ ಮಾಡಿಕೊಂಡ 1,91,00,000/- (ರೂಪಾಯಿ ಒಂದು ಕೋಟಿ ತೊಂಭತ್ತೊಂದು ಲಕ್ಷ ಮಾತ್ರ) ಹಣವನ್ನು ಶಾಸಕರು ಪುನಃ ಸರ್ಕಾರಿ ಖಜಾನೆಗೆ ಭರಣ ಮಾಡಬೇಕು ಎಂದು ರಾಜ್ಯಮಾಹಿತಿ ಹಕ್ಕು  ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಪತ್ರಿಕಾಗೋಷ್ಟಿಯಲ್ಲಿ ಆಕ್ರೋಶವನ್ನು  ವ್ಯಕ್ತಪಡಿಸಿದೆ

ವೀಕ್ಷಕರೆ ಭಟ್ಕಳ ಹೊನ್ನಾವರದ ಇಂದಿನ ಪರಿಸ್ಥಿತಿ ಯಾರದ್ದೊ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತಾಗಿದೆ ಇಲ್ಲಿ ಹಣ ಅಧಿಕಾರ ಇದ್ದು ಬಿಟ್ಟರೆ  ಏನು ಬೇಕಾದರು ಮಾಡಬಹುದು  ಎಂಬ  ವಾತಾವರಣ ನಿರ್ಮಾಣವಾಗಿದೆ ಎಂದರೆ ತಪ್ಪಿಲ್ಲಾ   ಇನ್ನಾದರು ಸಾರ್ವಜನಿಕರು ಎಚ್ಚೆತ್ತುಕೊಂಡಾರೆ ಹಾಗು ಸಂಬಂದಿಸಿದ  ಇಲಾಖಾ  ಅಧಿಕಾರಿಗಳು ಕ್ರಮ ಕೈಗೊಂಡಿಯಾರೆ ಎಂದು ಕಾದು ನೊಡಬೇಕಾಗಿದೆ

WhatsApp
Facebook
Telegram
error: Content is protected !!
Scroll to Top