ಬಾಂಬ್, ಪೀಟರ್ ಮತ್ತು ಶಾಸಕ ಸುನಿಲ್ ನಾಯ್ಕ ಪಾಲಿಟಿಕ್ಸ

ಎತ್ತ ಸಾಗುತ್ತಿದೆ ಭಟ್ಕಳ ಹೊನ್ನಾವರ ಬಿಜೆಪಿ ಪಕ್ಷ. ?


ಭಟ್ಕಳ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಜೆಡಿಎಸ್ ಕಾರ್ಯಕರ್ತ ಪೀಟರ್ ಇಂದ ಬಿಜೆಪಿ ಪಕ್ಷದ ವೇದಿಕೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಮತ್ತು ಪತ್ರಕರ್ತರಿಗೆ ಬಿಟ್ಟಿ ಉಪದೇಶ. ಇದೇನಾ ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳು. ?
ಬಿಜೆಪಿ ನಾಯಕರುಗಳೆ ನಿಮಗೆ ಬದ್ಧತೆ ಇದೆ ಎನ್ನುವುದಾದರೆ ಭಟ್ಕಳ ಹೊನ್ನಾವರದಲ್ಲಿ ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳ ಅವನತಿಯನ್ನು ನಿಲ್ಲಿಸಿ. ಎಂದು ಪಕ್ಷಾತೀತವಾಗಿ ಕಾಂಗ್ರೇಸ್ ಮತ್ತು ಬಿಜೆಪಿ ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ವಿಕ್ಷಕರೆ ಈ ಬಾಂಬ್ ಬ್ಲಾಸ್ಟ ಸ್ಟೋರಿ ಎನು ಯಾರು ಈ ಪೀಟರ್ ಇವನ ಸಂಪೂರ್ಣ ಸ್ಟೊರಿಯನ್ನು ನಿಮ್ಮ ಮುಂದಿಡುವ ಪ್ರಯತ್ನವನ್ನು ಮಾಡುತ್ತಿದ್ದೆನೆ

ವಿಕ್ಷಕರೆ ಈ ಪಿಟರ್ ಬಗ್ಗೆ ಹೇಳಬೇಕು ಎಂದರೆ ಈ ಪಿಟರ್ ಹಾಗು ಬಿಜೆಪಿ ಪಕ್ಷಕ್ಕೆ ಯಾವುದೆ ಸಂಬಂದವಿಲ್ಲ ಈತ ಜೆಡಿಎಸ್ ಮೂಲದವನು ಎನ್ನಲಾಗುತ್ತಿದೆ ಹಾಗಾದರೆ ಬಿಜೆಪಿ ಪ್ರಚಾರ ಸಭೆಯಲ್ಲಿ ಇತನಿಗೆನು ಕೆಲಸ ಎನ್ನುತ್ತಿರಾ ಅದೆ ನೋಡಿ ಈಗ ಬಿಜೆಪಿ ಮೂಲ ಕಾರ್ಯಕರ್ತ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ ಬಿಜೆಪಿ ಮೊದಲಿನ ತತ್ವ ಸಿದ್ದಾಂತವನ್ನು ಹೊಂದಿಲ್ಲಾ ಅದಿಕಾರ ಹಿಡಿಯುವ ಆಸೆಗಾಗಿ ತತ್ವಗಳನ್ನು ಹೊಂದಿಲ್ಲದ ವ್ಯಕ್ತಿಗಳನ್ನೆಲ ಪಕ್ಷಕ್ಕೆ ಸೇರಿಸಿಕೊಂಡು ಬಿಜೆಪಿ ಮುಳುಗುವ ಹಡಗಾಗಿ ಪರಿವರ್ತನೆಯಾಗಿದೆ ಎಂಬ ಆಕ್ರೋಶ ಕೇಳಿಬರುತ್ತಿದೆ

ಇನ್ನು ನಾವು ಇಲ್ಲಿ ಹೇಳಲು ಹೊರಟಿರುವುದೆ ಯಾವುದೆ ವ್ಯಕ್ತಿಯನ್ನು ಅಪರಾದಿ ಎಂದು ಬಿಂಬಿಸಲು ಹೊರಟಿಲ್ಲಾ ವ್ಯಕ್ತಿಯ ಮೇಲಿರು ಆರೋಪ ಹಾಗು ಬಿಜೆಪಿ ಮತ್ರು ಕಾಂಗ್ರೇಸ್ ಕಾರ್ಯಕರ್ತರ ಆಕ್ರೋಶಗಳನ್ನು ನಿಮ್ಮ ಮುಂದಿಡುವ ಪ್ರಯತ್ನವನ್ನು ಮಾಡುತ್ತಿದ್ದೆವೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ Mankal S Vaidya ರವರು ಹೊನ್ನಾವರದ ಮಾವಿನಕುರ್ವೆ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರವನ್ನು ಹಮ್ಮಿಕೊಂಡಿದ್ದ ವೇಳೆ ಕಾರ್ಯಕ್ರಮದ ವೇದಿಕೆಯ ಅಣತಿ ದೂರದಲ್ಲಿ ಬಾಂಬ್ ಸ್ಫೋಟಗೊಂಡಿತ್ತು.
ಬಾಂಬ್ ಸ್ಫೋಟಗೊಂಡ ತೀವ್ರತೆ ಎಷ್ಟಿತ್ತೆಂದರೆ ಒಬ್ಬನ ಕೈ ತುಂಡಾಗಿ ಇನ್ನೊಬ್ಬ ಗಾಯಗೊಂಡಿದ್ದ.
ಈ ದುರ್ಘಟನೆಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಕಾಳು ವೈದ್ಯ ಮತ್ತು ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಲವಾರು ಗಣ್ಯರು ಮತ್ತು ಸಾರ್ವಜನಿಕರು ಹಾಗೂ ಸಾವಿರಾರು ಕಾರ್ಯಕರ್ತರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು.

ಆ ಕೂಡಲೇ ಸ್ಥಳಕ್ಕಾಗಮಿಸಿದ್ದ ಪೊಲೀಸರು ಈ ಪ್ರಕರಣದ ಮಾಸ್ಟರ್ ಮೈಂಡ್ ಪೀಟರ್ ಎನ್ನುವಾತನನ್ನು ಹಾಗೂ ಆತನ ಕುತಂತ್ರಕ್ಕೆ ಬಲಿಯಾಗಿ ಬಾಂಬ್ ಎಸೆಯುವಾಗ ಸ್ಪೋಟಗೊಂಡು ಕೈ ಕಳೆದುಕೊಂಡಿದ್ದ ವ್ಯಕ್ತಿಯನ್ನು ಮತ್ತು ಆತನಿಗೆ ಸಹಕರಿಸಿದ್ದವನನ್ನು ಪೊಲೀಸರು ಬಂಧಿಸಿ ವಿಚಾರಣೆ ಸಲ್ಲಿಸಿ ಕಾರವಾರ ಜಿಲ್ಲಾ ಕಾರಾಗೃಹಕ್ಕೆ ಅಟ್ಟಿದ್ದರು.

ನಿಮಗಿದು ಗೊತ್ತಿರಲಿ,
ರಾಜಕೀಯ ಮೇಲಾಟದಲ್ಲಿ ಹತ್ಯಾ ರಾಜಕಾರಣವನ್ನು ಹುಟ್ಟು ಹಾಕಲಿಕ್ಕಾಗಿಯೇ ಸ್ವಾರ್ಥ ರಾಜಕಾರಣಿಯೊಬ್ಬ ಮಂಕಾಳು ವೈದ್ಯರನ್ನು ಹತ್ಯೆ ಮಾಡಿ ಚುನಾವಣೆಯಲ್ಲಿ ಪ್ರಬಲ ವಿರೋಧಿ ಅಭ್ಯರ್ಥಿ ಇಲ್ಲದೇ ಗೆದ್ದು ಅಧಿಕಾರಕ್ಕೇರಲು ಯತ್ನಿಸಿದ್ದ ಎನ್ನುವುದು ಅಂದು ಸಾರ್ವಜನಿಕರಿಂದ ವ್ಯಾಪಕವಾಗಿ ಕೇಳಿ ಬಂದಿತ್ತು ಎನ್ನಲಾಗಿದೆ.

ಅದರ ಮುಂದುವರಿದ ಭಾಗವೇ ಈ ಬಾಂಬ್ ಬ್ಲಾಸ್ಟ್ ಯೋಜನೆ.
ಆ ಸ್ವಾರ್ಥ್ ರಾಜಕಾರಣಿಯ ಪಿತೂರಿಗೆ ಕೈ ಜೋಡಿಸಿದ್ದು ಈ ಪೀಟರ್ ಎನ್ನುವ ಅಭಿಪ್ರಾಯವೂ ಕೂಡಾ ಸಾರ್ವಜನಿಕರಿಂದ ವ್ಯಾಪಕವಾಗಿ ಕೇಳಿ ಬಂದಿತ್ತು ಎನ್ನಲಾಗಿದೆ.
ಮಾವಿನಕುರ್ವೆಯ ಬ್ರಿಡ್ಜ್ ವಿವಾದ ಇಲ್ಲಿ ಕೇವಲ ನೆಪ ಮಾತ್ರ ಹಾಗೂ ಈ ಪೀಟರನ ದುರಾಸೆಗೆ ಬಲಿಯಾಗಿ ಕೈ ಕಳೆದುಕೊಂಡಿದ್ದು ಒಬ್ಬ ಅಮಾಯಕ ಹಿಂದೂ ಮತ್ತು ಆತನ ಜೊತೆ ಕೇಸ್ ಹಾಕಿಸಿಕೊಂಡು ಜೈಲಿಗೆ ಹೊದವನು ಕೂಡಾ ಮತ್ತೊಬ್ಬ ಅಮಾಯಕ ಎನ್ನುವ ಅಭಿಪ್ರಾಯ ಕೂಡಾ ಸಾರ್ವಜನಿಕರಿಂದ ಅಂದು ವ್ಯಾಪಕವಾಗಿ ಕೇಳಿ ಬಂದಿತ್ತು ಎನ್ನಲಾಗಿದೆ.

ಆ ರಾಜಕಾರಣಿಯ ಕುತಂತ್ರದಿಂದಾಗಿ ಅದೃಷ್ಟವಶಾತ್ ಬಾಂಬ್ ಮಂಕಾಳು ವೈದ್ಯರ ಮೇಲೆ ಎಸೆಯುವಾಗ ಮಿಸ್ಸಾಗಿ ಎಸೆದವನ ಕೈಯ್ಯಲ್ಲೇ ಸ್ಫೋಟಗೊಂಡ ಪರಿಣಾಮ ಮಂಕಾಳು ವೈದ್ಯ ಸೇರಿದಂತೆ ಆ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಜೀವಂತವಾಗಿ ಉಳಿಯುವಂತಾಯಿತು ಹಾಗೂ ಬಾಂಬ್ ಎಸೆದವನ ಕೈ ತುಂಡಾಯಿತು ಎನ್ನಲಾಗಿದೆ.
ಮುಂದೆ ಈ ಪ್ರಕರಣದ ಪ್ರಮುಖ ಆರೋಪಿ ಪೀಟರ್ ಸೇರಿದಂತೆ ಒಟ್ಟು ೩ ಜನ ಆರೋಪಿಗಳು ಜೈಲು ಸೇರಿ ನಂತರ ನ್ಯಾಯಾಲಯದಿಂದ ಜಾಮೀನು ಪಡೆದು ಈಗ ಹೊರಗಿದ್ದಾರೆ.
ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿದೆ.

ಇಂಥಾ ಕರಾಳ ಹಿನ್ನೆಲೆ ಇರುವ ಈ ಪೀಟರ್ ನನ್ನು ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ Sunil Naik ಹೊನ್ನಾವರದ ಮಾವಿನಕುರ್ವೆ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಬಿಜೆಪಿ ಪಕ್ಷದ ವೇದಿಕೆಯ ಮೇಲೆ ಬಿಟ್ಟುಕೊಂಡು ಆತನಿಂದ ಬಿಜೆಪಿ ಕಾರ್ಯಕರ್ತರಿಗೆ ಬಿಟ್ಟಿ ಉಪದೇಶ ಮತ್ತು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ಮಾಧ್ಯಮಗಳ ಪ್ರತಿನಿಧಿಗಳ ವಿರುದ್ಧ ಅವಹೇಳನ ಮಾಡಲು ಅವಕಾಶ ನೀಡಿದ್ದು ಯಾಕೆ. ? ಒಬ್ಬ ಜನ ಪ್ರತಿನಿದಿ ಎನ್ನಿಸಿಕೊಂಡವರ ಹತ್ಯಾ ಪ್ರಯತ್ನದ ಆರೋಪವನ್ನು ಹೊತ್ತಿರುವ ಈ ಪಿಟರ್ ಪತ್ರಕರ್ತರಿಗೆ ಪಾಠ ಮಾಡುವಷ್ಟು ಬುದ್ದಿವಂತನೆ ಶಾಸಕರಿಗೆನು ಮಂಡೆ ಕೆಟ್ಟಿದೆಯೆ ಎಂದು ಕಾಂಗ್ರೇಸಿಗರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ .

ಇಷ್ಟಕ್ಕೂ ಈ ಪೀಟರ್ ಬಿಜೆಪಿ ಕಾರ್ಯಕರ್ತನೂ ಅಲ್ಲಾ ಮತ್ತು ಬಿಜೆಪಿ ಪಕ್ಷಕ್ಕೆ ಸೇರಿದವನೂ ಅಲ್ಲಾ.
ಈ ಪೀಟರ್ ಅಂದಿನಿಂದ ಇಂದಿನವರೆಗೂ ಜೆಡಿಎಸ್ ಪಕ್ಷದ ಕಾರ್ಯಕರ್ತ.
ಸಾಮಾನ್ಯವಾಗಿ ಬಿಜೆಪಿ ತತ್ವ ಸಿದ್ಧಾಂತಗಳ ಪ್ರಕಾರ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಅಥವಾ ಅಪರಾಧಿಗಳನ್ನು ಬಿಜೆಪಿ ಪಕ್ಷ ಸನಿಹವೂ ಬಿಟ್ಟುಕೊಳ್ಳುವುದಿಲ್ಲಾ ಮತ್ತು ಅಂಥವರನ್ನು ಬೇರೆಯದ್ದೇ ದೃಷ್ಟಿ ಕೋನದಲ್ಲಿ ನೋಡಲಾಗುತ್ತದೆ.
ಮಂಕಾಳು ವೈದ್ಯ ಕಾಂಗ್ರೆಸ್ ಪಕ್ಷದವರೇ ಆಗಿರಬಹುದು.
ಆದರೇ,
ರಾಜಕೀಯ ಮೇಲಾಟಕ್ಕಾಗಿ ಈ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಿ ಆ ಮೂಲಕ ಹತ್ಯಾ ರಾಜಕಾರಣವನ್ನು ಪ್ರತಿಪಾದಿಸುವ ಈ ಪೀಟರ್ ನಂಥವರನ್ನು ಒಪ್ಪಿಕೊಳ್ಳಲು ಭಾರತೀಯರಾದ ನಮಗೆ ನಿಮಗೆ ಸಾಧ್ಯವೇ ನೀವೇ ಹೇಳಿ. ?

ಒಟ್ಟಾರೆ ಈ ರಾಜಕಿಯ ಪಕ್ಷಗಳಿಗೆ ರಾಜ ಕಾರಣಿಗಳಿಗೆ ತತ್ವ ಸಿದ್ದಾಂತಗಳೆ ಇಲ್ಲಾ ಅಧಿಕಾರಕ್ಕಾಗಿ ಎಂಥಹ ಹೇಸಿಗೆ ಕೆಲಸಕ್ಕೂ ಮುಂದಾಗುತ್ತಾರೆ ಎಂಬುವುದನ್ನು ಶಾಸಕ ಸುನಿಲ್ ನಾಯ್ಕ ಜೋತೆ ಜೊತೆಗೆ ಬಿಜೆಪಿ ಪಕ್ಷವು ಸಾಬಿತು ಮಾಡಿದೆ ಎಂದರೆ ತಪ್ಪಿಲ್ಲಾ ಎನ್ನುವುದು ಸಾರ್ವಜನಿಕರ ಮಾತಾಗಿದೆ

WhatsApp
Facebook
Telegram
error: Content is protected !!
Scroll to Top