ಭಟ್ಕಳ ತಾಲೂಕಿನಲ್ಲಿ ರಸ್ತೆ ಹಾಗು ನೀರು ಸರಬರಾಜು ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

40 ಲಕ್ಷ ಕಾಮಗಾರಿಯಲ್ಲಿ ಗೊಲ್ಮಾಲ್ ಕಾಮಗಾರಿ ನಡೆಸದೆ ಲಕ್ಷಗಟ್ಟಲೆ ನುಂಗಿ ನೀರು ಕುಡಿದ ಅಧಿಕಾರಿಗಳು ಜನ ಪ್ರತಿನಿದಿಗಳು.

ಭಟ್ಕಳ: ತಾಲೂಕಿನ ಕಡವಿನಕಟ್ಟೆಯಲ್ಲಿ ಕಾಂಕ್ರೇಟ್ ಸಿ ಸಿ ರಸ್ತೆ ಮತ್ರು ಕುಡಿಯುವ ನೀರಿನ 40 ಲಕ್ಷಕ್ಕೂ ಅಧಿಕ ಅನುದಾನದ ಕಾಮಗಾರಿ ಯೊಜನೆಯಲ್ಲಿ ಭ್ರಷ್ಟಾಚಾರ ಸಾರ್ವಜನಿಕರ ಆಕ್ರೋಶ

ತಾಲೂಕಿನಲ್ಲಿ ಶಾಸಕ ಸುನಿಲ್ ನಾಯ್ಕ ಅವರ ಹೇಳಿಕೆಯಂತೆ ನಮ್ಮ ವಿಧಾನಸಭಾ ಕ್ಷೇತ್ರಕ್ಕೆ ಸಾವಿರ ಕೊಟಿ ಕಾಮಗಾರಿ ಅನುಧಾನ ಬಿಡುಗಡೆಯಾಗಿದೆ ಎಂಬ ಮಾತುಗಳು ಕೆಳಿಬರುತ್ತಿದ್ದೆ ಆದರೆ ಬಿಡುಗಡೆಯಾಗಿರುವ ಸಾವಿರಾರು ಕೊಟಿ ಅನುದಾನ ಕಾಮಗಾರಿಯಲ್ಲಿ ಸಮರ್ಪಕವಾಗಿ ವಿನಿಯೋಗವಾಗುತ್ತಿಲ್ಲಾ ಎಂಬ ಆಕ್ರೋಶದ ಮಾತುಗಳು ತಾಲೂಕಿನಾಧ್ಯಂತ ಕೇಳಿ ಬರುತ್ತಿದೆ ಕಾಮಗಾರಿಯನ್ನು ನಡೆಸದೆ, ಬಿಲ್ಗಳನ್ನು ಪಾಸ್ ಮಾಡಲಾಗುತ್ರಿದೆ ಎಂಬ ಗುಸು ಗುಸು ತಾಲೂಕಿನಾಧ್ಯಂತ ಕೇಳಿಬರುತ್ತಿದೆ. ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ಕಡವಿನಕಟ್ಟಾ ನೀರಿನ ಟ್ಯಾಂಕ್ ಇಂದ ಎಲ್ ಎಸ್ ನಾಯ್ಕ ಮನೆಯವರೆ 40 ಲಕ್ಷ ಅನುದಾನದಲ್ಲಿ ಸಿ ಸಿ ರಸ್ತೆ ನಿರ್ಮಾಣದ ಕಾಮಗಾರಿ ಈ ಕಾಮಗಾರಿ ಹೆಸರಿಗಷ್ಟೆ ದಾಖಲೆಯಲ್ಲಿದೆ ಅರ್ಧದಷ್ಟು ಕಾಮಗಾರಿ ನಡೆಸಿ 40 ಲಕ್ಷಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿದೆ ದಾಖಲೆಯಲ್ಲಿ ಇರುವ ಕಾಮಗಾಗಾರಿಗಳೆ ಬೇರೆ ವಾಸ್ತವವಾಗಿ ಅಲ್ಲಿ ನಡೆದಿರುವ ಕಾಮಗಾರಿಗಳೆ ಬೇರೆಯಾಗಿರುತ್ತದೆ ಆದರೆ ಅನುಧಾಗಳು ಮಾತ್ರ ಲಕ್ಷಗಟ್ಟಲೆ ಕೊಟಿಗಟ್ಟಲೆ ಖರ್ಚಾಗಿರುತ್ತದೆ.

ಇನ್ನು ಕಡವಿನಕಟ್ಟೆ ಪಂಪ ಹೌಸ್ ಇಂದ ಗಣಪತಿ ಮನೆಯವರೆಗೆ 220000 ಕುಡಿಯುವ ನೀರು ಪೂರೈಸಲು ಸಾರ್ವಜನಿಕ ತೆರೆದ ಬಾವಿ ನಿರ್ಮಾಣ ಈ ಕಾಮಗಾರಿ ಕೇವಲ ದಾಖಲೆಯಲ್ಲಿ ಮಾತ್ರ ಇದೆ ವಾಸ್ತವವಾಗಿ ಕಾಮಗಾರಿ ನಡೆದೆ ಇಲ್ಲಾ ಎಂಬ ಆಕ್ರೋಶದ ಮಾತುಗಳು ಕೇಳಿಬರುತ್ತಿದೆ . ಆದರೆ ಬಿಡುಗಡೆ ಆದ ಅನುಧಾನ ಯಾರ ಬೊಕ್ಕಸಕ್ಕೆ ಸೇರಿದೆ ಎಂದು ಕಾಮಗಾರಿಗಳ ದಾಖಲೆ ಪಟ್ಟಿ ಬಿಡುಗಡೆ ಮಾಡಿದ ಶಾಸಕ ಸುನಿಲ್ ನಾಯ್ಜ ಅವರೆ ಉತ್ತರಿಸಬೇಕಾಗಿದೆ ಎನ್ನುವುದು ಸಾರ್ವಜನಿಕರ ಮಾತಾಗಿದೆ.

ಈ ಬ್ರಷ್ಟಾಚಾರದ ಬಗ್ಗೆ ಕಡವಿನಕಟ್ಟೆ ನಿವಾಸಿ ರವಿ ನಾಯ್ಕ ಮಾತನಾಡಿ ಕಡವಿನಕಟ್ಟೆ ಬಾಗದಲ್ಲಿ ಸಿ ಸಿ ರಸ್ತೆ ಮತ್ತು ತೆರದ ಭಾವಿ ನಿರ್ಮಾಣ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಲಕ್ಷಾಂತರ ಹಣದ ಅವ್ಯವಹಾರನಡೆದಿದೆ ಅವರು ಮಾಡಿರುವ ಅಭಿವೃದ್ದಿ ಮತ್ರು ವೆಚ್ಚದ ಪಟ್ಟಿಯಲ್ಲಿ ಅ 42 ಲಕ್ಷಕ್ಕೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ ಈ ಬಗ್ಗೆ ಶಾಸಕರೆ ಸಾರ್ವಜನಿಕರಿಗೆ ಉತ್ತರವನ್ನು ನೀಡಬೇಕಾಗಿದೆ

ಒಟ್ಟಾರೆ ದೇಶದ ಅಭಿವೃದ್ದಿಗಾಗಿ ಸರಕಾರ ಲಕ್ಷಾಂತರ ಕೊಟ್ಯಾಂತರ ಅನುದಾನಗಳನ್ನ ಬಿಡುಗಡೆ ನ ಮಾಡುತ್ತಿದ್ದರೆ ಈ ಜನಪ್ರತಿನಿದಿಗಳು ಮತ್ತು ಅಧಿಕಾರಿಗಳು ನುಂಗಿ ನೀರು ಕುಡಿಯುವ ಕೆಲಸಕ್ಕೆ ಕೈ ಹಾಕಿದ್ದಾರೆ ? ಕಾರಣ ಸಾರ್ವಜನಿಕರ ಇಂದಿನ ಸ್ಥಿತಿ ಶೋಚನಿಯವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ

WhatsApp
Facebook
Telegram
error: Content is protected !!
Scroll to Top