ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಭಟ್ಕಳ ತಾಲೂಕ ಘಟಕದ ವತಿಯಿಂದ

ಪಿ ಎಲ್ ಡಿ ಬ್ಯಾಂಕ್ ಅನದಿಕ್ರತ ಸಿಬ್ಬಂದಿ ನೇಮಕಾತಿ ವಿರುದ್ದ ಕ್ರಮ ಕೈಗೊಳ್ಳುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ

ಭಟ್ಕಳ : ತಾಲೂಕ ಕೃಷಿ ಹಾಗೂ ಗ್ರಾಮೀಣ ಅಭಿವೃದ್ದಿ ಸಹಕಾರಿ ಬ್ಯಾಂಕ್ ನಿಯಮಿತ ಭಟ್ಕಳ ಈ ಸಂಸ್ಥೆಯಲ್ಲಿ ಕಾನೂನು ಬಾಹೀರವಾಗಿ ಕೆಲಸ ಮಾಡುತ್ತೀರುವ  ೨೪ ಸಿಬ್ಬಂದಿಗಳ ವಿರುದ್ದ ಹಾಗು ಆಡಳಿತ ಕಮೀಟಿಯನ್ನು ವಿರುದ್ದ ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಕ್ರಮ ಜರುಗಿಸುವ ಕುರಿತು ತಾಲೂಕ ಸಹಾಯಕ ಆಯುಕ್ತರ ಮೂಲಕ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಕೃಷಿ ಹಾಗೂ ಗ್ರಾಮೀಣ ಅಭಿವೃದ್ದಿ ಸಹಕಾರಿ ಬ್ಯಾಂಕ್ ನಿಯಮಿತ ಭಟ್ಕಳ ಈ ಸಂಸ್ಥೆಯಲ್ಲಿ ನಡೆದ ೨೪ ಸಿಬ್ಬಂದಿಗಳನ್ನು ನೇಮಕಮಾಡಿದ ಅವ್ಯವಹಾರವನ್ನು ನಮ್ಮ ಸಂಘಟನೆಯ ಉಪಾಧ್ಯಕ್ಷರಾದ ಶಂಕರ ನಾಯ್ಕ ಇವರ ದೂರಿನ ಮೇರೆಗೆ ಕಲಂ ೬೫ ರಡಿ   ಸಹಕಾರಿ ಅಭಿವೃದ್ದಿ ಅದಿಕಾರಿ ಭಟ್ಕಳ ಇವರು  ನೀಡಿದ ವರದಿಯ ಮೇಲೆ  ೨೪ ಸಿಬ್ಬಂದಿಗಳನ್ನು ನೇಮಕಮಾಡುವಾಗ ಇಲಾಖೆಯ ವೃಂದ ಬಲದ ಆದೇಶದ ವಿರುದ್ದ ಅಂದರೆ ನೇಮಕಾತಿಯ ನಿಯಮಾವಳಿ ಪ್ರಕಾರ ನಿಯಮ ೧೭ ಹಾಗೂ ೧೮ ನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದರಿAದ ಆಡಳಿತ ಕಮೀಟಿಯವರ ೨೯ (ಸಿ)ರ ಡಿ ಅನರ್ಹಗೋಳಿಸಯವಂತೆ ಪರಿಸಲಿಸಿ  ಮತ್ತು ೨೪ ಜನ ಸಿಬ್ಬಂದಿಗಳನ್ನು ವಜಾಗೋಳಿಸುವಂತೆ ಸಹಕಾರಿ ಅಭಿವೃದ್ದಿ ಅಧಿಕಾರಿ ಭಟ್ಕಳ ಇವರು ಅಭಿಪ್ರಾಯ ಪಟ್ಟಿದ್ದಾರೆ.   ಮತ್ತು ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ

೨೯ (ಸಿ) ವಿವರಣೆ ಕೇಳುವುದಕ್ಕೆ ಅವಕಾಶ ನೀಡಿ ನಿರ್ಣಯ ಕೈಗೊಳ್ಳಬೇಕು ಆದರೆ ಉಪ ನಿಬಂಧಕರು ೧ ವರ್ಷದಿಂದ ಪ್ರಕರಣ ತಿರ್ಮಾನ  ಕೈಗೊಳ್ಳದೆ   ಸಹಕಾರಿ ಸಂಘಗಳ ಉಪ ನಿಬಂಧಕರು ಆರ್ಡರ ಶೀಟಿನಲ್ಲಿ ಆಡಳಿತಾತ್ಮಕ ತೊಂದರೆಯಿಂದ ಅಂತ ಉಲ್ಲೇಖಿಸುತ್ತಾರೆ,  ಮತ್ತು ಉಚ್ಚ ನ್ಯಾಯಾಲಯದ ಆದೇಶದಂತೆ ೨೪ ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೋಳ್ಳುವುದಕ್ಕೆ ಸಹಕಾರಿ ಸಂಘಗಳ ನಿಬಂದಕರು ಮತ್ತು ವ್ಯವಸ್ಥಾಪರ ನಿರ್ದೇಶಕರು ಕಾಸ್ಕಾರ್ಡ ಬ್ಯಾಂಕ್ ಬೆಂಗಳೂರು        .                                                     .
ಇವರು ಇನ್ನುತನಕ ಯಾವುದೇ ಪ್ರಕ್ರಿಯೆಯನ್ನು ಮುಂದುವರಿಸದೆ ಕಾಲಹರಣ ಮಾಡುತ್ತೀದ್ದಾರೆ. ಹಾಗೂ ಮಾನ್ಯ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವುದಲ್ಲದೇ ಸಂವಿಧಾನ ಹಾಗೂ ಇಲಾಖೆ ಸುತ್ತೋಲೆ ನಿಯಮಗಳಿಗೆ ಅಗೌವರ ತೋರಿದ್ದಾರೆ. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳದೆ ಹೋದರೆ ಸಂಬAದಪಟ್ಟ ಇಲಾಖೆಯ ಮುಂದೆ ನಾವು ನಮ್ಮ ಸಂಘಟನೆಯ ರಾಜ್ಯದ್ಯಕ್ಷರ ನೇತೃತೃದಲ್ಲಿ ನಾವು ಮತ್ತೆ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಆದ್ದರಿಂದ ಸೂಕ್ತ ನಿರ್ದೇಶನವನ್ನು ನೀಡಿ ಈ ಮನವಿ ತಲುಪಿದ ಒಂದು ವಾರದ ಒಳಗಾಗಿ ಕ್ರಮ ಜರುಗಿಸುವಂತೆ ಮನವಿ                                                                                   ಮಾಡುತಿದ್ದೇವೆ. ನಿಮ್ಮಿಂದಲೂ ಸಹ ಯಾವುದೇ ಪ್ರತಿಕ್ರಿಯೆ ಬಾರದಿದ್ದಲ್ಲಿ ಪ್ರತಿಭಟನೆ ಮತ್ತು ಇನ್ನಿತರೆ ಕಾನೂನು ಹೋರಾಟಗಳಿಗೆ ನೀವೇ ಅನುಮತಿ ನೀಡಿದ್ದಿರಿದಎಂದು ಭಾವಿಸಿಕೊಳ್ಳಲಾಗುವುದು ಏಂಬುದನ್ನು ಸಹ ತಮ್ಮ ಗಮನಕ್ಕೆ ತರಬಯಸುತ್ತೇವೆ. ಎಂದು ಮನವಿಯನ್ನು ಸಲ್ಲಿಸಲಾಯಿತು

ಈ ಸಂದರ್ಬದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಇದರ ರಾಜ್ಯ ಸಂಘಟನಾ ಕಾರ್ಯದರ್ಶಿ ಬೆಳಗಾವಿ ಉಸ್ತುವಾರಿ ವಿಭಾಗದ ಅರ್ಜುನ್ ಮಲ್ಯ, ಭಟ್ಕಳ ತಾಲೂಕ ಅಧ್ಯಕ್ಷರಾದ ನಾಗೇಂದ್ರ ನಾಯ್ಕ ಉಪಾಧ್ಯಕ್ಷ ಶಂಕರ್ ನಾಯ್ಕ ಪ್ರದಾನ ಕಾರ್ಯದರ್ಶಿ ನಾಗೇಶ ನಾಯ್ಕ ಸಹ ಕಾರ್ಯದರ್ಶಿ ವಸಂತ ದೇವಾಡಿಗ ಸದಸ್ಯ ವಾಸುದೇವ ಮೊಗೇರ್ ಮುಂತಾದವರು ಉಪಸ್ಥಿತರಿದ್ದರು .

WhatsApp
Facebook
Telegram
error: Content is protected !!
Scroll to Top