ನಿವೃತ್ತ ಸೈನಿಕನಿಗೆ ಅದ್ಧೂರಿ ಸ್ವಾಗತ

ಭಟ್ಕಳ: ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಸೇವಾವಧಿ ಪೂರೈಸಿ ತವರೂರಿಗೆ ಆಗಮಿಸಿದ ಭಟ್ಕಳ ತಾಲೂಕಿನ ಬೆಳ್ಕೆ ನಿವಾಸಿ ಗಣಪತಿ ಮಂಜುನಾಥ ಮೊಗೇರ ಸೇವಾ ನಿವೃತ್ತಿಯೊಂದಿಗೆ ಮಂಗಳವಾರ ವಿಶೇಷವಾಗಿ ಅದ್ಧೂರಿ ಸ್ವಾಗತ ಕೋರಿದರು.

2002ನೇ ಇಸವಿಯಲ್ಲಿ ಇಂಜಿನೀಯರ್ಸ ಗ್ರೂಪನ ಬೆಂಗಳೂರು ಇಂಜಿನೀಯರ್ಸ ದಳಕ್ಕೆ ಸೇರ್ಪಡೆಗೊಂಡು, ಅಲ್ಲಿನ ತರಬೇತಿ ಕೇಂದ್ರದಲ್ಲಿ 22 ವರ್ಷ ಕಠಿಣ ತರಬೇತಿ ಪಡೆದ ನಂತರ 7 ಇ ಎನ್ ಜಿ ಆರ್ ರೆಜಿಮೆಂಟ್‌ಗೆ ನೇಮಕಗೊಂಡರು. ಜಮ್ಮು ಕಾಶ್ಮೀರದ ಕುಪ್ಪಾರ, ರಾಜಾಸ್ತಾನದ ನಸೀರಾಬಾದ್‌ನಲ್ಲಿ ಸೇವೆಯ ನಂತರ ರಾಷ್ಟ್ರೀಯ ರೈಫಲ್ಸ್, ಜಮ್ಮು ಕಾಶ್ಮೀರದ ಶ್ರೀನಗರ, ಅರುಣಾಚಲ ಪ್ರದೇಶದ ತವಾಂಗ್, ರಾಜಸ್ತಾನ ಜೋದ’ ಪುರದಲ್ಲಿ ಕರ್ತವ್ಯ ನಿಭಾಯಿಸಿದ್ದಾರೆ. ಎನ್‌ಎಸ್‌ಜಿಯಲ್ಲಿಯೂ 3 ವರ್ಷ ಕಠಿಣ ತರಬೇತಿ ಪಡೆದಿರುವ ಗಣಪತಿ, ಮತ್ತೆ ಜಮ್ಮುಕಾಶ್ಮೀರ ಬಾರಾಮುಲ್ಲಾ, ರಾಜಸ್ಥಾನದ ಶ್ರೀಗಂಗಾನಗರ, ಆಸ್ಸಾಮ್‌ ಗೌಹಾಟಿಯಲ್ಲಿ ಸೇವೆ ಸಲ್ಲಿಸಿ ಬೆಂಗಳೂರಿನ ಕಚೇರಿಯಲ್ಲಿ ನಿವೃತ್ತಿ ಪಡೆದು ಊರಿನತ್ತ ಮುಖ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ತಾಲೂಕಿನ ಶಂಸುದ್ಧಿನ್ ಸರ್ಕಲ್ ನಲ್ಲಿ ನಿವೃತ್ತ ಸೈನಿಕನಿಗೆ ಬೆಳ್ಕೆ ಊರಿನ ಗ್ರಾಮಸ್ತರಿಂದ ಹಾಗೂ ಮಾಜಿ ಸೈನಿಕರಿಂದ ಭವ್ಯ ಸ್ವಾಗತ ಕೋರಲಾಯಿತು. ನಂತರ ಬೈಕ್ ರ್ಯಾಲಿ ಮೂಲಕ ತೆರೆದ ವಾಹನದಲ್ಲಿ ನಿವೃತ್ತ ಸೈನಿಕ ಗಣಪತಿ ಮೊಗೇರರನ್ನು ಕರೆದರು.

ತಾಲೂಕಾಡಳಿತ ಸೌಧದ ಸಮೀಪ ಮೊಗೇರ ಸಮಾಜದವರಿಂದ ಗಣಪತಿಯವರನ್ನು ಸನ್ಮಾನಿಸಿ ಮುಂದಿನ ಜೀವನ ಶುಭಕರವಾಗಿರಲಿ ಎಂದು ಶುಭ ಹಾರೈಸಿದರು.

WhatsApp
Facebook
Telegram
error: Content is protected !!
Scroll to Top