ಭಟ್ಕಳ ಗೊರ್ಟೆಯಲ್ಲಿ ಪಿಡ್ಲೂಡಿ ರಸ್ತೆಗೆ ಹಾಕಿರುವ ಮಣ್ಣು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಗ್ರಹ

ಭಟ್ಕಳ: ತಾಲೂಕಿನ ಬೆಳ್ಕೆ ಗೊರ್ಟೆಯಲ್ಲಿ ಪಿಡಬ್ಲೂಡಿ ಇಲಾಖೆಗೆ ಸಂಬಂದಿಸ ರಸ್ತೆಯಲ್ಲಿ ಸಾರ್ವಜನಿಕರಿಗೆ ಹಾಗು ರಿಕ್ಷಾ ನಿಲ್ಲಿಸಲು ತೊಂದರೆ ಆಗುವಂತೆ ಮಣ್ಣು ಹಾಕಲಾಗಿದ್ದು ಈ ಮಣ್ಣನ್ನು ಕೂಡಲೆ ತೆರವುಗೊಳಿಸ ಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿರುವುದು ಬೆಳಕಿಗೆ ಬಂದಿದೆ

ಭಟ್ಕಳ ತಾಲೂಕ ಬೆಳ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊರ್ಟೆಯಲ್ಲಿ ಅನಾಧಿಕಾಲದಿಂದಲೂ ಹೊನ್ನೆಮಡಿ ಶಿರಜ್ಜಿಮನೆಕೇರಿ ಶ್ರಿ ಮಹಾಸತಿ ದೇವಸ್ಥಾನ ಸರಕಾರಿ ಪ್ರೌಡ ಶಾಲೆ ಕನ್ನಡ ಶಾಲೆಗೆ ಹೊಗಿಬರಲು 12 ಅಡಿ ರಸ್ತೆ ಅನಾದಿಕಾಲದಿಂದಲೂ ಇದ್ದು ಈ ರಸ್ತೆ ಪಿ ಡಬ್ಲೂ ಇಲಾಖೆಗೆ ಸಂಬಂದಿಸಿದೆ ಎಂದು ಸಾರ್ವಜನಿಕರು ಹೆಳುತ್ತಿದ್ದು ಈ ರಸ್ತೆ ಪಕ್ಕದಲ್ಲಿ 10 ,15 ವರ್ಷಗಳಿಂದ ಆಟೋ ರಿಕ್ಷಾ ನಿಲ್ದಾಣ ಇರುತ್ತದೆ ಆದರೆ ಈಗ ಖಾಸಗಿ ವ್ಯಕ್ತಿಯೊಬ್ಬರು ರಸ್ತೆಯ ಅಕ್ಕಪಕ್ಕ ಮಣ್ಣನ್ನು ಹಾಕಿ ಸಾರ್ವಜನಿಕರಿಗೆ ತೋಂದರೆ ಕೊಡುತ್ತಿದ್ದಾರೆ ಆದ್ದರಿಂದ ಸಂಬಂದಿಸಿದ ಇಲಾಖೆ ಈ ಕೂಡಲೆ ಕ್ರಮ ಕೈಗೊಂಡು ಮಣ್ಣು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡ ಬೇಕು ಎಂದು ಆಗ್ರಹಿಸುತ್ತಿದ್ದಾರೆ

WhatsApp
Facebook
Telegram
error: Content is protected !!
Scroll to Top