ಭಟ್ಕಳ ಬೆಳ್ಕೆ ಗ್ರಾಮ ಸಭೆಗೆ ಹಾಜರಾಗದ ಅಧಿಕಾರಿಗಳ ವರ್ಗ ಸಾರ್ವಜನಿಕರ ಆಕ್ರೋಶ

ಅಧಿಕಾರಿಗಳ ಬೇಜವಬ್ದಾರಿತನಕ್ಕೆ  ಬೆಳ್ಕೆ ಗ್ರಾಮ ಸಭೆ ರದ್ದು

ನಿಗದಿತ ಸಮಯಕ್ಕೆ ಗ್ರಾಮ ಸಭೆಗೆ ಹಾಜರಾಗದೆ ತನ್ನ ಬೇಜವಬ್ದಾರಿತನ ಸಮರ್ಥನೆ ಮಾಡಿಕೊಂಡ. ಕ್ರಷೀ ಇಲಾಖೆಯ ನೂಡಲ್ ಅಧಿಕಾರಿ

ಭಟ್ಕಳ: ತಾಲೂಕ ಬೆಳ್ಕೆ ಗ್ರಾಮ ಸಭೆಗೆ ವಿವಿದ ಇಲಾಖೆಗಳ ಅಧಿಕಾರಿಗಳು ಹಾಜರಾಗದ ಹಿನ್ನೆಲೆಯಲ್ಲಿ ಸ್ಥಳಿಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಗ್ರಾಮ ಸಭೆಯನ್ನು ರದ್ದು ಪಡಿಸಲಾಗಿದ್ದು ಇದು ಅಧಿಕಾರಿಗಳ ಬೇಜವಬ್ದಾರಿತನಕ್ಕೆ ಹಿಡಿದ ಕನ್ನಡಿಯಂತಾಗಿದೆ.

ಇತ್ತೀಚಿಗೆ ಬೆಳ್ಕೆ ಗ್ರಾಮ ಪಂಚಾಯತ್ ಒಂದಿಲ್ಲೊಂದು ವಿವಿದಗಳನ್ನು ಮಾಡಿಕೊಳ್ಳುತ್ತಿದ್ದು ಕೆಲವು ದಿನಗಳ ಹಿಂದೆ ಈ ಗ್ರಾಮ ಪಂಚಾಯತ್ ಸದಸ್ಯರು ಪ್ರತಿಭಟನೆಯ ಹಾದಿಯನ್ನು ಹಿಡಿದಿದ್ದರು ಈ ಪ್ರಕರಣ ಹಸಿಯಾಗಿರುವಾಗಲೆ , ಈ ಗ್ರಾಮ ಪಂಚಾಯತನ ಗ್ರಾಮ ಸಭೆ ಅಧಿಕಾರಿಗಳ ಬೇಜವಾಬ್ದಾರಿತನದ ಕಾರಣ ರದ್ದುಗೊಳಿಸಲಾಗಿದೆ. ಬೆಳ್ಳೆ ಗ್ರಾಮ ಪಂಚಾಯತಲ್ಲಿ ಶುಕ್ರವಾರ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿತ್ತು ಈ ಸಭೆಯ ಕೆಂದ್ರ ಬಿಂದು ಸಭೆಗೆ ನೂಡಲ್ ಅಧಿಕಾರಿಯಾಗಿ ಬರಬೇಕಿದ್ದ ಕ್ರಷಿ ಇಲಾಖೆಯ ಅಧಿಕಾರಿ ನಿಗದಿತ ಸಮಯಕ್ಕೆ ಸಭೆಗೆ ಹಾಜರಾಗದೆ ತನ್ನ ಬೆಜವಬ್ದಾರಿತನದ ನಡೆಯನ್ನು ಲಜ್ಜೆ ಗೆಟ್ಟು ಸಮರ್ಥನೆ ಮಾಡಿಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ. ಗಂಟೆ ಹನ್ನೆರಡು ಕಳೆದು ವಿವಿದ ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗದ ಕಾರಣ ಸಾರ್ವಜನಿಕ ಸಹನೆಯ ಕಟ್ಟೆ ಒಡೆದುಹೊಯಿತು ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಹೆಳಿಕೊಳ್ಳಲು ಇರುವ ವೇದಿಕೆ ಎಂದರೆ ಅದು ಗ್ರಾಮ ಸಭೆ ಆ ಗ್ರಾಮ ಸಭೆಯನ್ನು ಕೂಡ ಸರಿಯಾಗಿ ನಡೆಸುತ್ತಿಲ್ಲ ಇಲ್ಲಿಯವರೆಗೆ ನಾಲ್ಕು ಗ್ರಾಮ ಸಭೆಗಳು ನಡೆಯಬೇಕಿತ್ತು ಆದರೆ ಈ ಗ್ರಾಮ ಪಂಚಾಯತ್ ಅಲ್ಲಿ ಎರಡೆ ಗ್ರಾಮ ಸಭೆ ನಡೆದಿದೆ ಈಗ ನಡೆಸುತ್ತಿರುವ ಗ್ರಾಮ ಸಭೆಯನ್ನು ಅಧಿಕಾರಿಗಳ ದುರ್ವತನೆಯಿಂದ ರದ್ದುಗೊಳಿಸಲಾಯು ಗ್ರಾಮದ ಅಭಿವೃದ್ದಿಯೆ ದೇಶದ ಅಭಿವೃದ್ದಿ ಎಂದು ಹೇಳಲಾಗುತ್ತಿದೆ ಇಂತಹ ಬೆಜವಬ್ದಾರಿತನದ ಅಧಿಕಾರಿಗಳಿದ್ದರೆ ನಮ್ಮ ದೇಶ ದೇಶ ಉದ್ದಾರವಾದಂತೆ ಭ್ರಷ್ಟಾಚಾರ ಮಾಡಲು ಬೇಕಾದರೆ ಈ ಅಧಿಕಾರಿಗಳು ಮುಂಚುಣಿಯಲ್ಲಿ ನಿಲ್ಲುತ್ತಾರೆ ಅದೆ ಸಾರ್ವಜನಿಕರ ಪ್ರಶ್ನೇ ಎಂದಾಕ್ಷಣ ನುಣುಚಿಕೊಳ್ಳುವ ಪ್ರಯತ್ನ ನಡೆಸುತ್ತಾರೆ ಎಂದು ಸಾರ್ವಜನಿಕರು ಆಕ್ರೊಶವನ್ನು ವ್ಯಕ್ತಪಡಿಸಿ ಗ್ರಾಮ ಸಭೆ ನಡೆಯಬೇಕಾಗಿದ್ದ ಸ್ಥಳದಿಂದ ಆಕ್ರೋಶಗೊಂಡು ಹೊರನಡೆದರು

WhatsApp
Facebook
Telegram
error: Content is protected !!
Scroll to Top