ಕರಾವಳಿ ಭಾಗದಲ್ಲಿ ಪಡಿತರ ವಿತರಿಸಲು ಕುಚ್ಚಲಕ್ಕಿಯನ್ನು ಖರಿದಿಸಲು ಮುಖ್ಯಮಂತ್ರಿಗಳಿಂದ ಆದೇಶ : ಕೊಟಾ ಶ್ರೀನಿವಾಸ ಪೂಜಾರಿ

ಭಟ್ಕಳ : ಕರಾವಳಿಯಲ್ಲಿ ಸಮರ್ಪಕ ಕುಚ್ಚಲಕ್ಕಿ ಸಿಗದೆ ಇರುವ ಕಾರಣ ಸರಕಾರ ರೈತರಿಂದ ನೇರವಾಗಿ ಕುಚ್ಚಲಕ್ಕಿ ಖರಿದಿಸು ಚಿಂತನೆ ನಡೆಸುತ್ತಿದೆ ಎಂದು ಉತ್ತರ ಕನ್ನಡ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪುಜಾರಿ ಹೇಳಿದರು

ಭಟ್ಕಳ : ಮುರುಡೇಶ್ವರದಲ್ಲಿ 2 ದಿನಗಳ ರಾಜ್ಯ ಪಧಾಧಿಕಾರಿಗಳ ಸಭೆ ಕಾರ್ಯಕ್ರಮದ ನಂತರ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಸಚಿವರು ಬಡವರಿಗೆ ಉಚಿತವಾಗಿ ಆಹಾರ ಸಿಗಬೇಕೆನ್ನುವ ಕೆಂದ್ರ ಮತ್ತು ರಾಜ್ಯ ಸರಕಾರಗಳು ಜಂಟಿಯಾಗಿ ತಲಾ ಐದರಂತೆ ಒಬ್ಬರಿಗೆ ಹತ್ತು ಕೇಜಿ ಅಕ್ಕಿಯನ್ನು ನೀಡುತ್ತಿದ್ದೇವೆ. ಹಸಿವು ಮುಕ್ತ ವಾತಾವರಣ ಇರಬೇಕೆಂಬ ದೃಷ್ಟಿಯಲ್ಲಿ ಗ್ರಾಮೀಣ ಪ್ರದೇಶ ಸೇರಿದಂತೆ ರಾಜ್ಯದಲ್ಲಿ ಆಹಾರವನ್ನು ಪೂರೈಸುತ್ತಿದ್ದೇವೆ .
ಕರಾವಳಿ ಭಾಗದಲ್ಲಿ ಸಮರ್ಪಕವಾದ ಕಚ್ಚಲಕ್ಕಿ ಸಿಗದೇ ಇರುವುದರಿಂದ ಮುಖ್ಯಮಂತ್ರಿಗಳು ಎಮೊ4, ಜಯಾ, ಅಭಿಲಾಷಾದಂತಹ ತಳಿಗಳನ್ನು ಬೆಳೆಯುವಂತ ರೈತರಿಗೆ ಕ್ವಿಂಟಲಗೆ 500 ರೂ ಹೆಚ್ಚಿಗೆ ನೀಡಿ ಖರಿದಿಸಿಲು ಆದೇಶಿಸಿದ್ದು, ಮಂಗಳೂರು, ಉಡುಪಿ, ಉತ್ತರಕನ್ನಡ ಜಿಲ್ಲೆ ಕುಚ್ಚಲಕ್ಕಿ ಬತ್ತವನ್ನು ಖರಿದಿಸಲು ಸ್ವಲ್ಪ ವಿಳಂಭವಾಗಿದ್ದು ಶಿಘ್ರದಲ್ಲಿ ಕರಾವಳಿಯ ಈ ಜಿಲ್ಲೆಗಳಿಗೆ ಸರ್ಕಾರ ಶಿಘ್ರದಲ್ಲಿ ನ್ಯಾಯಬೆಲೆಯ ಅಂಗಡಿಗಳ ಮೂಲಕ ಕುಚ್ಚಲಕ್ಕಿ ಯನ್ನು ನೀಡುವ ಕೆಲಸ ಮಾಡಲಾಗುವುದು. ಬಿಪಿಎಲ್‌ ಕಾರ್ಡಗಳಿಗೆ ಅಕ್ಕಿ ನೀಡುತ್ತಿರುವ ಹಿನ್ನಲೆಯಲ್ಲಿ ಅಕ್ರಮವಾಗಿ ಅಕ್ಕಿ ಮಾರಾಟ ಮಾಡುವುದು ತಪ್ಪು ಮತ್ತು ಶಿಕ್ಷಾರ್ಹ ಅಪರಾಧ ಎಂದರು.

WhatsApp
Facebook
Telegram
error: Content is protected !!
Scroll to Top