ಸಿದ್ಧಾರ್ಥ ಪದವಿ ಮಹಾ ವಿದ್ಯಾಲಯ ಪಂಚವಟಿ ಶಿರಾಲಿಯ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಮತ್ತು ಗ್ರಂಥಾಲಯ ಉದ್ಗಾಟನೆ

ಭಟ್ಕಳ ತಾಲೂಕಿನಲ್ಲಿ ದಿನಾಂಕ 18 ಡಿಸೆಂಬರ 2022ರಂದು ಇಲ್ಲಿನ ಸಿದ್ಧಾರ್ಥ ಪದವಿಪೂರ್ವ ಕಾಲೇಜು ಭಟ್ಕಳ ಮತ್ತು ಸಿದ್ಧಾರ್ಥ ಪದವಿ ಮಹಾ ವಿದ್ಯಾಲಯ ಪಂಚವಟಿ ಶಿರಾಲಿಯ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮತ್ತು ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಭಟ್ಕಳ ಇತಿಹಾಸದಲ್ಲೇ ಪ್ರಪ್ರಥಮವಾಗಿ ಐ.ಎ.ಎಸ್ ಮತ್ತು ಕೆ.ಎ.ಎಸ್., ಬ್ಯಾಕಿಂಗ್ ಪರೀಕ್ಷೆಗಳ ತರಬೇತಿ ಕೇಂದ್ರವನ್ನು ನಿವೃತ್ತ ಶಿಕ್ಷಕರಾದ ಶ್ರೀ ಎಮ್.ಬಿ. ನಾಯ್ಕ ಅವರು ಉದ್ಘಾಟಿಸಿದರು. ಎನ್.ಐ.ಟಿ.ಕೆ ಸುರತ್ಕಲ್ ನ ಹಿರಿಯ ಪ್ರಾಧ್ಯಾಪಕರಾದ ಡಾ| ಜೋರಾ ಗೊಂಡ ಅವರು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪಿ.ಯು.ಸಿ.ಯ ನಂತರ ಇರುವ ವಿವಿಧ ಕ್ಷೇತ್ರಗಳ ಆಯ್ಕೆಗಳ ಬಗ್ಗೆ ಸಮಗ್ರವಾಗಿ ಮಾರ್ಗದರ್ಶನ ನೀಡಿದರು. ರಾಜ್ಯ ಪ್ರಶಸ್ತಿ ವಿಜೇತ ಹನುಮಂತ ಬೆಣ್ಣೆ ಸರಕಾರಿ ಪಿ.ಯು ಕಾಲೇಜಿನ ಪ್ರಾಂಶುಪಾಲರು ಆದ ಶ್ರೀ ಸತೀಶ ಬಿ. ನಾಯ್ಕವರು ವಿದ್ಯಾರ್ಥಿಗಳಿಗೆ ಅಂತರ್ಜಾಲದ ಸದುಪಯೋಗ ಮತ್ತು ಮನಸ್ಸಿನ ಏಕಾಗ್ರತೆಯ ಬಗ್ಗೆ ಅತ್ಯುತ್ತಮ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀರಾಮ ಸ್ಟಡಿ ಸರ್ಕಲ್ ಅಂಕೋಲಾ ಇದರ ನಿರ್ದೇಶಕರಾದ ಶ್ರೀ ಸೂರಜ್ ನಾಯ್ಕ, ಐ.ಎ.ಎಸ್., ಕೆ.ಎ.ಎಸ್. ಪಿ.ಎಸ್.ಐ ಮತ್ತು ಬ್ಯಾಕಿಂಗ್ ಪರೀಕ್ಷೆಗಳ ಪಟ್ಯಕ್ರಮಮ, ಪ್ರಶ್ನೆಪತ್ರಿಕೆಗಳ ವಿಷಯದ ಬಗ್ಗೇ ಸಮಗ್ರ ಮಾಹಿತಿಯನ್ನು ಡಿಗ್ರಿ ವಿದ್ಯಾರ್ಥಿಗಳಿಗೆ ಒದಗಿಸಿದರು.
ಬಿ.ಎ., ಬಿ.ಎಸ್ಸಿ, ಬಿ.ಕಾಂ ವಿದ್ಯಾರ್ಥಿಗಳಿಗ ಪ್ರಥಮ ವರ್ಷದಿಂದಲೇ ಈ ತರಬೇತಿ ಪ್ರಾರಂಭಿಸಿದಕ್ಕೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯನ್ನು ಅಭಿನಂದಿಸಿದರು. ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆಯಾದ ಶ್ರೀಮತಿ ಅರ್ಚನಾ ಯು. ಮಾತನಾಡಿ, ಸಿದ್ಧಾರ್ಥ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆದ ಮಗು ಇಲ್ಲಿ ಡಿಗ್ರಿವರೆಗೆ ಮುಂದುವರಿಸಿದೆ. ಒಂದು ಸರಕಾರಿ ಉದ್ಯೋಗ ಪಡೆಯುವವರೆಗೆ ಮಾರ್ಗದರ್ಶನ ನೀಡುವುದಾಗಿ ಭರವಸೆ ನೀಡಿದರು. 2000 ಚ.ಮಿ. ವಿಸ್ತೀರ್ಣದ ಗ್ರಂಥಾಲಯ ಮತ್ತು ವಾಚನಾಲಯವನ್ನು ಡಿಗ್ರಿ ವಿದ್ಯಾರ್ಥಿಗಳಿಗೆ ಸಮರ್ಪಿಸಲಾಯಿತು.
ಅತಿಥಿಗಳಾಗಿ ಆಗಮಿಸಿದ ಶ್ರೀ ಎಮ್.ಆರ್. ನಾಯ್ಕ, ಶ್ರೀ ಸಿ.ಎ. ಜ್ಞಾನೇಶ ಮಾನಕಾಮೆ, ಶ್ರೀ ಅಶೋಕ್ ಕುಮಾರ ಶೆಟ್ಟಿ, ಶ್ರೀ ಎಂ. ಕೆ. ನಾಯಕ್ ಮಾತನಾಡಿದರು. ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ 750ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಪಾಲಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

WhatsApp
Facebook
Telegram
error: Content is protected !!
Scroll to Top