ಭಟ್ಕಳ ಶಾಸಕ ಸುನಿಲ್ ನಾಯ್ಕ ಬೆಂಗ್ರೇ ಪೆಟ್ರೋಲ್ ಬಂಕ್ ಸರ್ವಿಸ್ ರಸ್ತೆ ವಿವಾದ ತಾರಕಕ್ಕೆ

ಜನಾಕ್ಷೇಪದ ನಡುವೆಯು ಸರ್ವಿಸ್ ರಸ್ತೆ ಮಾಡಲು ಮುಂದಾಗಿ ಜನಾಕ್ರೋಶಕ್ಕೆ ಇಡು

ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿಡದೆ ಪಂಚಾಯತ್ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಎನ್ ಓ ಸಿ ನೀಡಿದೆ : ಅಧ್ಯಕ್ಷರು ಸದಸ್ಯರ ಆರೋಪ

ಭಟ್ಕಳ ತಾಲೂಕಿನ ಬೆಂಗ್ರೇ ಗ್ರಾಮ‌ ಪಂಚಾಯತ್ ವ್ಯಾಪ್ತಿಯಲ್ಲಿ ಶಾಸಕ ಸುನಿಲ್ ನಾಯ್ಕ ಅವರ ಪೆಟ್ರೋಲ್ ಬಂಕ್ ಸರ್ವಿಸ್ ರಸ್ತೆ ವಿವಾದ ಈಗ ತಾರಕಕ್ಕೆರಿದ್ದು ಸಾರ್ವಜನಿಕರ ಆಕ್ಷೇಪದ ಮದ್ಯೆಯೂ ಗುತ್ತಿಗೆದಾರರು ರಸ್ತೆ ಕಾಮಗಾರಿಗೆ ಮುಂದಾಗಿದ್ದು ಇದರಿಂದ ಆಕ್ರೋಶಗೊಂಡ ಪಂಚಾಯತ್ ಪಧಾಧಿಕಾರಿಗಳು ಸದಸ್ಯರು ಸಾರ್ವಜನಿಕರು ತಾಲೂಕಾಡಳಿತದ ಮೊರೆ ಹೋಗಿದ್ದು ಮೂಲಭೂತ ಸೌಕರ್ಯ ಚರಂಡಿ ಸ್ಟ್ರೀಟ್ ಲೈಟ್ ಒದಗಿಸಿ ಸರ್ವಿಸ್ ರಸ್ತೆ ಮಾಡ ಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕೆಲವೊಂದು ಜನ ಪ್ರತಿನಿದಿಗಳು ಮತ್ತು ರಾಜಕಾರಣಿಗಳೆನ್ನಿಸಿಕೊಂಡವರು ತಮ್ಮಲ್ಲಿ ಅಧಿಕಾರ ಬಲ ಹಣ ಬಲ ಇದ್ದರೆ ತಾವು ಏನು ಬೇಕಾದರು ಮಾಡಬಹುದು ಎಂಬ ಭ್ರಮೆಯಲ್ಲಿದಂತೆ ಕಾಣುತ್ತದೆ ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಬೆಂಗ್ರೇ ಗ್ರಾಮ ಪಂಚಾಯತ್ ಪೆಟ್ರೋಲ್ ಬಂಕ್ ಸರ್ವಿಸ್ ರಸ್ತೆಯ ವಿವಾದ ಇಲ್ಲಿ ಸರ್ವಿಸ್ ರಸ್ತೆಯನ್ನು ನಿರ್ಮಾಣ ಮಾಡುವ ಸಂದರ್ಬದಲ್ಲಿ ಯಾವುದೆ ನಿಯಮವನ್ಬು ಪಾಲಿಸುತ್ತಿಲ್ಲಾ ಇದ್ದ ಎರಡು ಕೆರೆಗಳನ್ನು ಮುಚ್ಚುವ ಪ್ರಯತ್ನ ನಡೆಸಲಾಗುತ್ತಿದೆ ಹಾಗು ಯಾವುದೇ ಚರಂಡಿಗಳನ್ನು ನಿರ್ಮಿಸಿಲ್ಲಾ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಸಾರ್ವಜನಿಕರು ರಸ್ತೆ ನಿರ್ಮಾಣಕ್ಕೆ ತಡೆ ಒಡ್ಡಿದ್ದರು ರಸ್ತೆ ನಿರ್ಮಾಣ ಮಾಡಿ ಆದರೆ ನಿಯಮಾನುಸಾರ ಮಾಡಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು ತಹಶಿಲ್ದಾರರು ಸ್ಥಳಕ್ಕೆ ಬೇಟಿ ನೀಡಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಬರವಸೆಯನ್ನು ನಿಡಲಾಗಿತ್ತು ಆದರೆ ಮಂಗಳವಾರವಾದ ಇಂದು ಪುನಃ ರಸ್ತೆ ನಿರ್ಮಾಣಕ್ಕೆ ಮುಂದಾಗಲಾಗಿದೆ ಅಲ್ಲದೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಸ್ತೆ ನಿರ್ಮಾಣ ಮಾಡುತ್ತೆವೆ ಯಾರುತಡೆಯುತ್ತಾರೊ ನೊಡ್ತೆವೆ ಎಂಬ ಕಮೆಂಟ್ ಮಾಡುದರ ಮೂಲಕ ಹುಂಬತನವನ್ನು ಪ್ರದರ್ಶಿಸಲಾಗಿತ್ತು ಅದರಂತೆ ಇಂದು ರಸ್ತೆ ನಿರ್ಮಾಣಕ್ಕೂ ಮುಂದಾಗಲಾಗಿದೆ ಯಾಕೆ ಸ್ವಾಮಿ ಎಮ್ ಎಲ್ ಎ ಆದವರಿಗೆ ಕಾನೂನು ಹೇಳಿಕೊಡಬೇಕೆ ತಮ್ಮ ಹಿಂಬಾಲಕರು ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಅವರಿಗೆ ತಿಳಿದಿಲ್ಲವೆ ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ

ಸಾರ್ವಜನಿಕರ ಆಕ್ರೋಶದ ಮಧ್ಯೆಯು ಕೂಡಾ ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತನ್ನು ನಿಡದೆ ರಸ್ತೆ ನಿರ್ಮಾಣ ಕಾಮಗಾರಿಗೆ ಮುಂದಾಗಿದ್ದಾನೆ ಇದು ಸ್ಥಳಿಯ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ ಆಕ್ರೋಶ ಗೊಂಡ ಪಂಚಾಯತ್ ಅಧ್ಯಕ್ಷರು ಸದಸ್ಯರು ಸಾರ್ವಜನಿಕರು ತಾಲೂಕ ತಹಶಿಲ್ದಾರರ ಮುಂದೆ ಹಾಜರಾಗಿ ತನ್ನ ಆಕ್ರೋಶವನ್ಬು ವ್ಯಕ್ತ ಪಡಿಸಿದ್ದಾರೆ

ಈ ಸಂದರ್ಬದಲ್ಲಿ ತಹಶಿಲ್ದಾರರಲ್ಲಿ ತಾವು ರಸ್ತೆ ನಿರ್ಮಾಣ ಮಾಡಬೇಡಿ ಎನ್ನುತ್ತಿಲ್ಲಾ ನಮಗೆ ತೊಂದರೆಯಾಗುವಂತೆ ನಿಯಮ ಬಾಹಿರವಾಗಿ ರಸ್ತೆ ನಿರ್ಮಾಣ ಮಾಡಬೇಡಿ ಇಲ್ಲಿ ಪಂಚಾಯತ್ ಎನ್ ಓ ಸಿ ನೀಡುವ ಸಂದರ್ಬದಲ್ಲೆ ತಪ್ಪು ಮಾಡಿದೆ ಈಗಲೂ ಕೂಡ ಜನಾಕ್ರೋಶದ ನಡುವೆಯು ಕೂಡ ಅಧಿಕಾರದ ದರ್ಪದಲ್ಲಿ ನಿಯಮ ಬಾಹಿರವಾಗಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಇದು ನಿಲ್ಲಬೇಕು ನಿಯಮ ಬದ್ದ ಸರ್ವಿಸ್ ರಸ್ತೆ ನಿರ್ಮಾಣ ಮಾಡುವಂತಾಗ ಬೇಕು ಎಂದು ಬೇಡಿಕೆಯನ್ನು ಇಡಲಾಯಿತು

ಈ ಬಗ್ಗೆ ತಾಲೂಕ ತಹಶಿಲ್ದಾರರು ಬುದುವಾದ ಸಹಾಯಕ ಆಯುಕ್ತರ ಮುಂದೆ ಈ ಬಗ್ಗೆ ಚರ್ಚಿಸಲಾಗುದು ಈ ಬಗ್ಗೆ ಬುದುವಾರ ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಸಮಸ್ಯೆ ಬಗೆಹರಿಸಬಹುದು ಎಂಬ ಸಮಜಾಯಿಸಿಯನ್ನು ಕೊಟ್ಟು ಕಳಿದಿದ್ದಾರೆ

ಒಟ್ಟಾರೆ ತಾಲೂಕಿನಲ್ಲಿ ಉಳ್ಳವನಿಗೊಂದು ಕಾನುನು ಜನ ಸಾಮಾನ್ಯನಿಗೊಂದು ಕಾನೂನು ಎಂಬಂತಾಗಿದೆ

WhatsApp
Facebook
Telegram
error: Content is protected !!
Scroll to Top