ಭಟ್ಕಳ ಸರ್ಪನಕಟ್ಟೆ ವಾಸುಕಿ ದೇವಸ್ಥಾನದಲ್ಲಿ ಗುರುವಂದನಾ ಕಾರ್ಯಕ್ರಮ ಸಂಪನ್ನ

ಭಟ್ಕಳದಲ್ಲಿ ಶಾಖಾಮಠದ ಸ್ಥಾಪನೆಯ ಘೋಷಣೆ ಮಾಡಿದ ಶ್ರೀ ಯತಿರಾಜ ಜೀಯರ್ ಸ್ಚಾಮಿಜಿ

ಧಾರ್ಮಿಕ ಅಂದರೆ ಇದು ಯಾರೋಬ್ಬ ಸೊತ್ತಲ್ಲಾ ನಾನು ಸರ್ಪನಕಟ್ಟೆ ಯುವಕರ ತಂಡದ ಜೊತೆಯಲ್ಲಿದ್ದೆನೆ:ಶಾಸಕ ಸುನಿಲ್ ನಾಯ್ಕ

ಭಟ್ಕಳ: ತಾಲೂಕಿನ ಸರ್ಪನಕಟ್ಟೆಯಲ್ಲಿ ಇಂದು ನಡೆದಿರುವ ವಿಜಯಿ ಯಾತ್ರೆ ನಮ್ಮ ಪರಿವಾರದವರು ತೊರಿಸಿರುವ ಪ್ರೀತಿ ಶ್ರದ್ದೆಗಳಿಂದ ನಮ್ಮ ಮನಸ್ಸು ತುಂಬಿ ಬಂದಿದೆ ಎಂದು ತಾಲೂಕಿನ ಸರ್ಪನಕಟ್ಟೆಯಲ್ಲಿ ನಡೆದ ಗುರುವಂದನಾ ಕಾರ್ಯಕ್ರದಲ್ಲಿ ಯತೀರಾಜ ಜೀಯರ್ ಸ್ವಾಮೀಜಿ ಹೇಳಿದರು

ಅವರು ಸರ್ಪನಕಟ್ಟೆ ವಾಸುಕಿ ದೇವಸ್ಥಾನದಲ್ಲಿ ನಡೆದ ಗುರುವಂದಾನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಮ್ಮ ಪರಿವಾರದವರು ನಡೆಸಿರುವ ಇಂದಿನ ಗುರುವಂದನಾ ಕಾರ್ಯ ನಮ್ಮ ಮನಸ್ಸಿ ತುಂಬು ಸಂತೋಷವನ್ನು ತಂದಿಟ್ಟಿದೆ ಮಾನಸಿಕ ನೆಮ್ಮದಿ ಮಾನವ ಕುಲಕ್ಕೆ ಅತಿ ಮುಖ್ಯ ಲೌಕಿಕವಾದದ್ದು ಜಿವನದಲ್ಲಿ ಬಂದು ಹೊಗುತ್ತಲೆ ಇರುತ್ತದೆ ಧಾರ್ಮಿಕತೆಯಲ್ಲಿ ಸಿಕ್ಕುವ ಸಂತೋಷ ನೆಮ್ಮದಿ ಎಲ್ಲಿಯು ಸಿಗಲಾರದು ಆ ಭಗವಂತನ ಚರಣ ಕಮಲಗಳಲದಲಿ ದಾರ್ಮಿಕ ನೆಮ್ಮದಿ ಸಿಗುತ್ತದೆ ನಮ್ಮ ನಾಡಿನಲ್ಲಿ ಮುಖ್ಯವಾದದ್ದು ಧರ್ಮ ಕ್ರಷ್ಣಂ ಧರ್ಮಂ ಸನಾತನಂ ಕ್ರಷ್ಣನೆ ಧರ್ಮದ ಪ್ರತೀಕ ಆಗಿದ್ದಾನೆ ನಮ್ಮ ಯತೀರಾಜ ಮಠಕ್ಕೆ ಸೇರಿದ ಎಲ್ಲಾ ನಾಮದಾರಿ ಸದಸ್ಯರು ನಮಗೆ ಗುರುವಂದನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ನಾವು ಎಲ್ಲಾ ಕೆಲಸವನ್ನು ಬದಿಗೊತ್ತಿ ಕಾರ್ಯಕ್ರಮದಲ್ಲಿ ಪ್ರೀತಿಯಿಂದ ಬಾಗವಹಿಸಿದ್ದೇವೆ. ನಮ್ಮ ಪರಿವಾರದ ಆಥಿತ್ಯ ತುಂಬ ಸಂತೋಷವನ್ನು ಕೊಟ್ಟಿದೆ ಮುಂದಿನ ದಿನಗಳಲ್ಲಿ ಭಟ್ಕಳದಲ್ಲಿ ಮೇಲುಕೋಟೆಯ ಶಾಖಾ ಮಠವನ್ನು ಸ್ಥಾಪಿಸುತ್ತೆವೆ ಎಂದು ಹೇಳಿದರು

ಇದೆ ಸಂದರ್ಬದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಶಾಸಕ ಸುನಿಲ್ ನಾಯ್ಕ ಮಾತನಾಡಿ ಗುರುಗಳ ದಿವ್ಯ ಉಪಸ್ಥಿತಿ ನಿಮ್ಮನ್ನು ಸ್ವಿಕಾರ ಮಾಡುವ ಆರಾದನೆ ಮಾಡುವ ಮನೊಭಾವನೆ ನಮ್ಮಲ್ಲಿ ವ್ಯಕ್ತವಾಗುತ್ತಿದೆ ಮೇಲುಕೊಟೆ ಮಠಕ್ಕೂ ನಮ್ಮ ಭಟ್ಕಳಕ್ಕೂ ಅವಿನಾ ಭಾವ ಸಂಬಂದವಿದೆ ಈ ಕಾರ್ಯಕ್ರಮದ ಸಂದರ್ಬದಲ್ಲಿ ಈ ಭಾಗದ ಯುವಕರ ತಂಡ ಅನೇಕ ಕಷ್ಟಗಳನ್ನು ಎದುರಿಸುತ್ತಿದೆ ನಾನು ಅವರಿಗೆ ಸಂಪೂರ್ಣ ದೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದೆನೆ . ಕಾರಣ ದಾರ್ಮಿಕ ಕೆಲಸವನ್ನು ನಾವೆಲ್ಲ ಒಟ್ಟಾಗಿ ಮಾಡಬೇಕಾಗಿದೆ ದಾರ್ಮಿಕ ಎಂದರೆ ಇದು ಯಾರೋಬ್ಬರ ಸ್ವತ್ತಲ್ಲಾ ಎಲ್ಲರು ಒಗ್ಗಟ್ಟಾಗಿ ಮಾಡಬೇಕಾಗಿದೆ ನಾನು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ ನಾನು ನಿಮ್ಮ ಜೋತೆಯಲ್ಲಿರುತ್ತನೆ ಎಂದು ಹೇಳಿದರು

ಕಾರ್ಯಕ್ರಮದ ಪ್ರಾರಂಭದಲ್ಲಿ ಗುರುಗಳನ್ನು ಸೋಡಿಗದ್ದೆ ಕ್ರಾಸ್ ಇಂದ ಮಹಿಳೆಯರು ಪೂರ್ಣ ಕುಂಭ ಸ್ವಾಗತದ ಮೂಲಕ ಚಂಡೆ ಡಕ್ಕೆ ಕುಣಿತ ಹೌದರಾಯನ ಕುಣಿತದ ಮೂಲಕ ಸರ್ಪನಕಟ್ಟೆ ಸರ್ಪಗಾವಲಿನ ಶಕ್ತಿಸ್ಥಳ ಶ್ರೀ ವಾಸುಕಿ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು

ಈ ಸಂದರ್ಬದಲ್ಲಿ ಪತ್ರಕರ್ತರಾದ ಅರುಣ್ ನಾಯ್ಕ, ಆಡಳಿತ ಕಮಿಟಿಯ ಅಧ್ಯಕ್ಷ ಉಮೇಶ, ನಾಯ್ಕ ಖ್ಯಾತ ವಕೀಲ ರಾಜೇಶ ನಾಯ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ, ಆಡಳಿತ ಕಮಿಟಿಯ ಗೊವೀಂದ ನಾಯ್ಕ ಮತ್ತು ಇತರ ಸದಸ್ಯರು ಮತ್ತು ವಿವಿದ ಸಮಾಜದ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top